Slide
Slide
Slide
previous arrow
next arrow

ಬೃಹತ್ ರಕ್ತದಾನ ಶಿಬಿರ ಯಶಸ್ವಿ

300x250 AD

ದಾಂಡೇಲಿ: ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ಬಲಿದಾನದ ನಿಮಿತ್ತವಾಗಿ ಭಗತ್ ಸಿಂಗ್ ಯುವ ಬಳಗ ಮತ್ತು ಸೇವಾ ಸಂಕಲ್ಪ ತಂಡದ ಆಶ್ರಯದಡಿ ನಗರದ ಬಂಗೂರನಗರದ ಪದವಿ ಮಹಾವಿದ್ಯಾಲಯದ ರಂಗನಾಥ ಗ್ರಂಥಾಲಯದ ಸಭಾಭವನದಲ್ಲಿ ನಡೆದ ಬೃಹತ್ ರಕ್ತದಾನ ಶಿಬಿರವು ಯಶಸ್ವಿಯಾಗಿ ಸಂಪನ್ನಗೊಂಡಿತು.

ಶಿಬಿರವನ್ನು ಬಂಗೂರನಗರ ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಬಿ.ಎಲ್.ಗುಂಡೂರ ಅವರು ಉದ್ಘಾಟಿಸಿ ಮಾತನಾಡುತ್ತಾ, ಯುವ ಮುಖಂಡ ಹಾಗೂ ಹೋರಾಟಗಾರ ಸುಧೀರ ಶೆಟ್ಟಿಯವರ ನೇತೃತ್ವದ ಭಗತ್ ಸಿಂಗ್ ಯುವ ಬಳಗ ಮತ್ತು ಸೇವಾ ಸಂಕಲ್ಪ ತಂಡದ ಆಶ್ರಯದಡಿ ಒಂದು ಶಿಸ್ತುಬದ್ಧವಾಗಿ ಶಿಬಿರವನ್ನು ಆಯೋಜಿಸಿಕೊಂಡು ಬರಲಾಗುತ್ತಿರುವುದು ಸಂಘಟನೆಯ ಶಿಸ್ತು ಮತ್ತು ಸೇವಾಬದ್ಧತೆಯನ್ನು ಸಾದರಪಡಿಸುತ್ತದೆ ಎಂದರು.

ಧಾರವಾಡದ ರೋಟರಿ ಬ್ಲಡ್ ಬ್ಯಾಂಕ್ ಕೇಂದ್ರದ ಡಾ.ನಂದೀಶ್ ಮಾತನಾಡಿ, ಭಗತ್ ಸಿಂಗ್ ಯುವ ಬಳಗ ಮತ್ತು ಸೇವಾ ಸಂಕಲ್ಪ ತಂಡದ ರಜಕ್ತದಾನ ಶಿಬಿರ ಯಾವಾಗಲೂ ಐತಿಹಾಸಿಕ ದಾಖಲೆಯನ್ನು ಮಾಡಿದ ಶಿಬಿರವಾಗಿಯೆ ಗಮನ ಸೆಳೆದಿದೆ. ಸಂತೋಷ್ ಚೌಡಿಯಂತಹ ಯುವಕರು ಉತ್ಸಾಹದಿಂದ ರಕ್ತದಾನ ಮಾಡಲು ಮುಂದೆ ಬರುತ್ತಿರುವುದು ಅನುಕರಣೀಯ ಮತ್ತು ಅಭಿನಂದನೀಯ ಎಂದು ಈ ಸಂಘಟನೆಯ ಸಮಾಜಮುಖಿ ಕಾರ್ಯ ಅತ್ಯಂತ ಶ್ಲಾಘನೀಯ ಎಂದರು.

300x250 AD

ಶಿಬಿರದ ಸಂಘಟಕರಾದ ಸುಧೀರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿ, ದೇಶಕ್ಕಾಗಿ ಪ್ರಾಣತೆತ್ತ ಭಗತ್ ಸಿಂಗ್, ರಾಜಗುರು, ಸುಖದೇವ್ ಅವರ ಬಲಿದಾನ ದ್ಯೋತಕವಾಗಿ ಕಳೆದ 12 ವರ್ಷಗಳಿಂದ ರಕ್ತದಾನ ಶಿಬಿರವನ್ನು ಆಯೋಜಿಸಿಕೊಂಡು ಬರಲಾಗುತ್ತಿದೆ. ಈ ಶಿಬಿರದ ಸಂದರ್ಭದಲ್ಲಿ ನಮಗೆ ಪ್ರತಿವರ್ಷವೂ ಹೆಗಲಿಗೆ ಹೆಗಲು ಕೊಟ್ಟು ಸಹಕರಿಸಿದ ದಿ.ಪ್ರವೀಣ ಪರಮಾರ್ ಅವರ ನೆನಪು ನಮ್ಮ ಈ ಶಿಬಿರಕ್ಕೆ ಸ್ಫೂರ್ತಿ ಎಂದರು.
ವಿನಯ್ ಹುಕ್ಕೇರಿ ಸ್ವಾಗತಿಸಿ, ವಂದಿಸಿದರು. ಶಿಬಿರದಲ್ಲಿ ಒಟ್ಟು 136 ರಕ್ತದಾನಿಗಳು ಭಾಗವಹಿಸಿ ರಕ್ತದಾನವನ್ನು ಮಾಡಿ ಗಮನ ಸೆಳೆದರು. ಶಿಬಿರದ ಯಶಸ್ಸಿಗೆ ಭಗತ್ ಸಿಂಗ್ ಯುವ ಬಳಗ ಮತ್ತು ಸೇವಾ ಸಂಕಲ್ಪ ತಂಡದ ಪದಾಧಿಕಾರಿಗಳು, ಬಂಗೂರನಗರ ಪದವಿ ಮಹಾವಿದ್ಯಾಲಯದ, ಕಾಲೇಜಿನ ರೆಡ್ ಕ್ರಾಸ್, ರೆಡ್ ರಿಬ್ಬನ್ ಕ್ಲಬ್ ಮತ್ತು ರೋಟರಿ ರಕ್ತ ಭಂಡಾರ ಕೇಂದ್ರದ ತಂಡ ಶ್ರಮಿಸಿತ್ತು. ಬಂಗೂರನಗರ ಪದವಿ ಕಾಲೇಜಿನ ಉಪ ಪ್ರಾಚಾರ್ಯ ಎಸ್.ಎಸ್.ಹಿರೇಮಠ, ಬಂಗೂರನಗರ ಪದವಿ ಕಾಲೇಜಿನ ಎಸ್.ಕೆ.ಬಾಗೇವಾಡಿ, ಸಂಘಟನೆಯ ಪ್ರಮುಖರಾದ ಅರ್ಜುನ್ ಗವಸ, ರಕ್ತದಾನಿಗಳಾದ ಪವನ್ ಕುಮಾರ್ ನಾಯ್ಡು, ಸಂತೋಷ್ ಚೌಡಿ ಮೊದಲಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top