ಕುಮಟಾ: ಪಟ್ಟಣದ ಮಣಕಿ ಮೈದಾನದಲ್ಲಿ ನಡೆದ ಯುಗಾದಿ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿದ್ದು, ನಾದಶ್ರೀ ಕಲಾ ಕೇಂದ್ರದ ಭರತನಾಟ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಪಟ್ಟಣದ ಮಣಕಿ ಮೈದಾನದಲ್ಲಿ ವಿಜೃಂಭಣೆಯಿಂದ ನಡೆದ ಯುಗಾದಿ ಉತ್ಸವದ ವೇದಿಕೆ ಕಾರ್ಯಕ್ರಮದ ಬಳಿಕ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರನ್ನು ರಂಜಿಸಿತು. ವಿಧೂಷಿ ನಯನಾ ಪ್ರಭು ಅವರ ನೇತೃತ್ವದ ನಾದಶ್ರೀ ಕಲಾ ಕೇಂದ್ರದ ಭರತನಾಟ್ಯ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ದೇವಿಯ ವಿವಿಧ ಅವತಾರಗಳ ದರ್ಶನ ಮಾಡಿಸಿದ ಕಲಾವಿದರು, ಪ್ರೇಕ್ಷಕರಲ್ಲಿ ಭಕ್ತಿಯ ಸಂಚಲನ ಮೂಡಿಸಿದರು. ಸುಮಾರು 23 ವಿದ್ಯಾರ್ಥಿಗಳ ನಯನ ಮನೋಹರ ಭರತನಾಟ್ಯ ಪ್ರದರ್ಶನಕ್ಕೆ ಪ್ರೇಕ್ಷಕರು ಚಪ್ಪಾಳೆಯ ಸುರಿಮಳೆ ಗೈದರು. ಇನ್ನು ಶ್ರೀನಿಕೇತನ ತಂಡದ ಭರತನಾಟ್ಯ ಪ್ರದರ್ಶನ ಕೂಡ ಮನಮೋಹಕವಾಗಿ ಮೂಡಿಬಂತು. ಶೈಲಾ ಗುನಗಿ ತಂಡದ ಜಾನಪದ ನೃತ್ಯ ಸೇರಿದಂತೆ ಸ್ಥಳೀಯ ಪ್ರತಿಭೆಗಳ ಸಾಂಸ್ಕೃತಿಕ ಕಾರ್ಯಕ್ರಮ ಯುಗಾದಿ ಉತ್ಸವದ ಮೆರಗನ್ನು ಇಮ್ಮಡಿಗೊಳಿಸುವಲ್ಲಿ ಯಶಸ್ವಿಯಾಯಿತು. ಸಾವಿರಾರು ಜನರು ಪಾಲ್ಗೊಂಡು ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಿ ಖುಷಿಪಟ್ಟರು.