ಶಿರಸಿ: “ನಮ್ ನಾಣಿ ಮದುವೆ ಪ್ರಸಂಗ” ಸಿನಿಮಾ ಉತ್ತರ ಕನ್ನಡದ ಜೀವಾಳ ಹೊಂದಿರುವ ಕತೆಯಾಗಿದೆ. ಹವ್ಯಕ ಭಾಷೆಯಲ್ಲಿರುವ ಈ ಸಿನಿಮಾದ ಹಾಡೊಂದು ಪ್ರಖ್ಯಾತಿ ಪಡೆದಿದೆ. ಸಿನಿಮಾವು ಏ. 7ಕ್ಕೆ ಬಿಡುಗಡೆ ಆಗಲಿದೆ’ ಎಂದು ಚಿತ್ರ ನಿರ್ದೇಶಕ ಹೇಮಂತ ಹೆಗಡೆ ತಿಳಿಸಿದರು.
ಶಿರಸಿ ನಗರದ ಸಾಮ್ರಾಟ್ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಉಕ ಜಿಲ್ಲೆಯ ರೈತರ ಮಕ್ಕಳಿಗೆ ಮದುವೆ ಆಗುತ್ತಿಲ್ಲ ಎನ್ನುವ ವಿಷಯದ ಕುರಿತು ಇರುವ ಚಿತ್ರ ಇದಾಗಿದೆ. ಹಳ್ಳಿಗಳಲ್ಲಿರುವ ಯುವಕರಿಗೆ ಮದುವೆಯಾಗುತ್ತಿಲ್ಲ. ಎಂಬ ವಿಷಯವನ್ನು ಇಟ್ಟುಕೊಂಡು ಸಿನಿಮಾ ಮಾಡಿದ್ದೇವೆ. ಶಿರಸಿಯ ಸುತ್ತಮುತ್ತ ಅತಿ ಹೆಚ್ಚು ಚಿತ್ರೀಕರಣ ನಡೆಸಿದ್ದೇವೆ. ಯುರೋಪ್‌ನಲ್ಲೂ ಸಿನಿಮಾ ಬಿಡುಗಡೆಯಾಗಲಿದೆ ಎಂದರು.
ರವಿ ಮೂರೂರು ಮಾಡಿರುವ ಹಾಡು ಎಲ್ಲಿಲ್ಲದ ಮೆಚ್ಚುಗೆ ಗಳಿಸಿದೆ. ಮಂಜುನಾಥ ಹೆಗಡೆ, ಪದ್ಮಜಾ ರಾವ್ ಸೇರಿ ಜಿಲ್ಲೆಯ ಹಲವು ಖ್ಯಾತ ಕಲಾವಿದರು ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಶಿರಸಿ ಸೇರಿ ರಾಜ್ಯದ 100 ಚಿತ್ರಮಂದಿರದಲ್ಲಿ ನಮ್ಮಚಿತ್ರ ಬಿಡುಗಡೆಯಾಗಲಿದೆ. 1.5 ಕೋಟಿ ರೂ. ವೆಚ್ಚದಲ್ಲಿ ಚಿತ್ರ ನಿರ್ಮಾಣವಾಗಿದ್ದು, ಪ್ರೇಕ್ಷಕರಿಗೆ ಮನರಂಜನೆ ಸಿಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದರು. ಈ ಸಂದರ್ಭದಲ್ಲಿ ಖ್ಯಾತ ನಟ ಮಂಜುನಾಥ್ ಹೆಗಡೆ, ನಾಯಕಿ ಶ್ರೇಯಾ ವಸಂತ್ ಇದ್ದರು.