• Slide
  Slide
  Slide
  previous arrow
  next arrow
 • ಕಳೆದುಕೊಂಡ ಬಂಗಾರ ಗಂಟೆಯೊಳಗೆ ಪತ್ತೆ ಹಚ್ಚಿದ ಪೊಲೀಸರು

  300x250 AD

  ಸಿದ್ದಾಪುರ: ಸ್ಥಳೀಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದುಕೊಂಡ ಬಂಗಾರದ ಒಡವೆ ಮತ್ತು ಮೊಬೈಲ್‌ನ್ನು ಒಂದು ಗಂಟೆಯ ಒಳಗೆ ಪತ್ತೆಹಚ್ಚಿ ಸಂಬoಧಿಸಿದವರಿಗೆ ಒಪ್ಪಿಸಿದ ಬಹು ಅಪರೂಪದ ಘಟನೆ ನಡೆದಿದೆ.

  ತಾಲೂಕಿನ ಕಾನಗೋಡ ಗ್ರಾಮ ಪಂಚಾಯತಿಯ ಪೂರ್ಣಿಮಾ ನಾಯ್ಕ ಅಂಗನವಾಡಿ ಕಾರ್ಯಕರ್ತೆ ಅಂಗನವಾಡಿ ಅವರಗೋಪ್ಪರವರು ಕಾನಗೋಡದಿಂದ ಅವರಗೋಪ್ಪಕ್ಕೆ ಶಾಲೆಗೆ ಹೋಗುವಾಗ ಬಳ್ಳಟ್ಟೆ ಹತ್ತಿರ ಬ್ಯಾಗ್ನಲ್ಲಿ 7 ತೊಲೆ ಬಂಗಾರದ ಆಭರಣ (ಅಂದಾಜು 4 ಲಕ್ಷ ರೂಪಾಯಿ), 1 ಮೊಬೈಲ್ ಕಳೆದುಕೊಂಡ ಬಗ್ಗೆ ಠಾಣೆಗೆ ಬಂದು ದೂರು ನೀಡಿದ್ದರು.

  300x250 AD

  ಪೊಲೀಸ್ ನಿರೀಕ್ಷ ಕುಮಾರ್ ಕೆ. ಅವರ ಮಾರ್ಗದರ್ಶನದಂತೆ ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸ್ ಉಪನಿರೀಕ್ಷಕ ಮಹಾಂತಪ್ಪ ಕುಂಬಾರ, ಮಲ್ಲಿಕಾರ್ಜುನಯ್ಯ ಕೊರಾಣಿ, ಪೊಲೀಸ್ ಉಪನಿರೀಕ್ಷಕರು, ಹೆಡ್ ಕಾನ್ಸ್ಟೇಬಲ್ ರಮೇಶ್ ಕೂಡಲ, ಉದಯ್ ಮೆಸ್ತಾ, ಸಂಗೀತಾ ಕಾನಡೆ ರವರು ಒಂದು ಗಂಟೆ ಒಳಗಡೆ ಮೊಬೈಲ್ ಟ್ರೇಸ್ ಮಾಡಿ ಸೊರಬಕ್ಕೆ ಹೋಗಿ ಕಳೆದುಕೊಂಡ ವಸ್ತುಗಳನ್ನು ತೆಗೆದುಕೊಂಡು ಸದರಿರವರಿಗೆ ಒಪ್ಪಿಸಿದ್ದು, ಪೊಲೀಸರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top