• Slide
  Slide
  Slide
  previous arrow
  next arrow
 • ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ: ಜಗದೀಶ ಶೆಟ್ಟರ್

  300x250 AD

  ಸಿದ್ದಾಪುರ: ಇಂದು ರಾಜ್ಯದಲ್ಲಿ ಕೆಲವೊಂದು ಕಾಂಗ್ರೆಸ್ ನಾಯಕರು ನಾವು ಮಂತ್ರಿ ಆಗುತ್ತೇನೆ, ಶಾಸಕ ಆಗುತ್ತೇನೆ ಎನ್ನುವ ಕನಸು ಕಾಣುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಮುಖ್ಯಮಂತ್ರಿಯಾಗುವುದಕ್ಕೆ ಕೋಟ್ ಹೊಲಿಸಿಕೊಂಡಿದ್ದಾರೆ. ಆದರೆ ಕಾಂಗ್ರೆಸಿನವರ ಕನಸು ತಿರುಕನ ಕನಸಿನಂತಾಗಿದೆ. ಯಾವುದೆ ಕಾರಣಕ್ಕೂ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ ಎಂದು ರಾಜ್ಯದ ಮಾಜಿ ಮುಖ್ಯ ಮಂತ್ರಿ ಬಿಜೆಪಿ ನಾಯಕ ಜಗದೀಶ ಶೆಟ್ಟರ್ ಹೇಳಿದರು.

  ಅವರು ಪಟ್ಟಣದ ಪಟ್ಟಣ ಪಂಚಾಯತ ವೃತ್ತದ ಬಳಿ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯ ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕಾಂಗ್ರೆಸಿನವರಿಗೆ ನಾವು ಆಯ್ಕೆಯಾಗುವ ಕುರಿತಾಗಿಯೆ ಗ್ಯಾರಂಟಿ ಇಲ್ಲ. ಇನ್ನೂ ಅವರು ಜನತೆಗೆ ಎಲ್ಲಿ ಗ್ಯಾರಂಟಿ ಕೋಡುವುದು. ಈ ಹಿಂದೆ ನೀವು ಐದು ವರ್ಷ ಅಧಿಕಾರದಲ್ಲಿ ಇದ್ದಾಗ ಯಾಕೆ ನೀವು ಕೊಟ್ಟಿಲ್ಲ ಎಂದು ನಾನು ಕಾಂಗ್ರೆಸಿನವರಿಗೆ ಕೇಳುತ್ತೇನೆ ಎಂದರು.

  ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿದರು. ರಥಯಾತ್ರೆಯಲ್ಲಿ ಮಾಜಿ ಶಾಸಕರಾದ ಸುನೀಲ ಹೆಗಡೆ, ನಿಗಮದ ಅಧ್ಯಕ್ಷ ಗೋವಿಂದ ನಾಯ್ಕ ಭಟ್ಕಳ,ಜಿಲ್ಲಾ ಬಿಜೆಪಿ ಅಧ್ಯಕ್ಷ ವೆಂಕಟೇಶ ನಾಯಕ, ನಿಕಟಪೂರ್ವ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್, ಮಂಡಲ ಅಧ್ಯಕ್ಷ ಮಾರುತಿ ಟಿ.ನಾಯ್ಕ ಹೊಸೂರು, ಪ್ರಧಾನ ಕಾರ್ಯದರ್ಶಿಗಳಾದ ಎಸ್.ಕೆ.ಮೇಸ್ತಾ, ಪ್ರಸನ್ನ ಹೆಗಡೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಮೊದಲಾದವರು ಇದ್ದರು.

  300x250 AD

  ರಥಯಾತ್ರೆಯನ್ನು ಪಟ್ಟಣದ ನೆಹರು ಮೈದಾನದಲ್ಲಿ ಸ್ವಾಗತ ಮಾಡಿಕೊಂಡು ಗಂಗಾಮಾತ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು. ಅಲ್ಲಿಂದ ಪಟ್ಟಣದ ಪ್ರಮುಖ ರಸ್ತೆಯಾದ ಮಾರ್ಕೆಟ್ ರಸ್ತೆ, ಪಟ್ಟಣ ಪಂಚಾಯತ್, ಭಗತ್ ಸಿಂಗ್ ಸರ್ಕಲ್ ಮಾರ್ಗವಾಗಿ ಪಟ್ಟಣ ಪಂಚಾಯತ ವೃತ್ತದ ಬಳಿ ಒಂದು ಸಭೆ ನಡೆಸಲಾಯಿತು.

  Share This
  300x250 AD
  300x250 AD
  300x250 AD
  Leaderboard Ad
  Back to top