ಕಾರವಾರ: ಜಿಲ್ಲೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ, ಡಾ.ಬಿ.ಆರ್.ಅಂಬೇಡ್ಕರ್, ಮೊರಾರ್ಜಿ ದೇಸಾಯಿ ವಸತಿಶಾಲೆಗಳ ಒಟ್ಟು 6250ಕ್ಕೂ ಅಧಿಕ ಮಕ್ಕಳು ಕಡ್ಡಾಯ, ನಿಷ್ಪಕ್ಷಪಾತ ಹಾಗೂ ಪಾರದರ್ಶಕತೆಯಿಂದ ಮತದಾನ ಮಾಡುವಂತೆ ತಮ್ಮ ಪಾಲಕರಿಗೆ ಮನವಿ ಪತ್ರ ಬರೆಯುವ ಮೂಲಕ ವಿನೂತನವಾಗಿ ಮತದಾನದ ಅರಿವು ಮತ್ತು ಮಹತ್ವದ ಜಾಗೃತಿ ಮೂಡಿಸಲು ಮುಂದಾಗಿರುವುದನ್ನು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಖಂಡೂ ಶ್ಲಾಘಿಸಿದರು.
ಜಿಲ್ಲಾ ಪಂಚಾಯತ ಕಚೇರಿಯಲ್ಲಿ ಈ ಕುರಿತು ಮಾತನಾಡಿದ ಸಿಇಒ ಅವರು, ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆ-2023ರ ಹಿನ್ನಲೆ ವಿನೂತನ ಮತದಾನ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಇದರ ಭಾಗವಾಗಿ ಈಗಾಗಲೇ ಜಿಲ್ಲಾ ಪಂಚಾಯತ್‌ನಿoದ ಸ್ವೀಪ್ ಚಟುವಟಿಕೆಗಳಡಿ ಐತಿಹಾಸಿಕ ಗೋಕರ್ಣ ಜಾತ್ರೆ, ಕದಂಬೋತ್ಸವ ಸೇರಿದಂತೆ ಗ್ರಾಮ ಪಂಚಾಯತಿಗಳ ಮಟ್ಟದಲ್ಲಿ ಜರುಗುವ ಸಾರ್ವಜನಿಕ ಸಭೆ, ಸಮಾರಂಭ, ಜಾತ್ರೆಗಳಲ್ಲಿ ಯಕ್ಷಗಾನ, ಗ್ರಾಮೀಣ ಕಲೆ, ನೃತ್ಯ, ಬೈಕ್ ಜಾಥಾ, ಮಾನವ ಸರಪಳಿ, ವಿಕಲಚೇತನರ ಬೈಕ್ ಜಾಥಾದಂತಹ ಹಲವು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ.
ಇದರ ಮುಂದುವರೆದ ಭಾಗವಾಗಿ ಜಿಲ್ಲೆಯಲ್ಲಿರುವ ಕಿತ್ತೂರು ರಾಣಿ ಚೆನ್ನಮ್ಮ, ಡಾ.ಬಿ.ಆರ್.ಅಂಬೇಡ್ಕರ್, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳ ಒಟ್ಟು 6250ಕ್ಕೂ ಅಧಿಕ ಮಕ್ಕಳು ಕಡ್ಡಾಯ, ನಿಷ್ಪಕ್ಷಪಾತ ಹಾಗೂ ಪಾರದರ್ಶಕತೆಯಿಂದ ಮತದಾನ ಮಾಡುವಂತೆ ತಮ್ಮ ಪಾಲಕರಿಗೆ ಮನವಿ ಪತ್ರ ಬರೆಯುವ ಮೂಲಕ ವಿನೂತನವಾಗಿ ಮತದಾನದ ಅರಿವು ಮತ್ತು ಮಹತ್ವದ ಜಾಗೃತಿ ಮೂಡಿಸಲು ಮುಂದಾಗಿರುವುದು ಮಾದರಿ ಕಾರ್ಯವಾಗಿದೆ. ಪಾಲಕರಿಗೆ ಮತದಾನದ ಅರಿವು ಮೂಡಿಸುವ ನಿಟ್ಟಿನಲ್ಲಿ ಮಕ್ಕಳು ಕೈಗೊಂಡಿರುವ ಮತದಾನ ಜಾಗೃತಿ ಪತ್ರ ಅಭಿಯಾನದ ಜವಬ್ದಾರಿಯನ್ನು ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಅಜ್ಜಪ್ಪ ಸೊಗಲದ ಹಾಗೂ ಸಂಬoಧಿಸಿದ ವಸತಿ ಶಾಲೆಯ ಪ್ರಾಚಾರ್ಯರಿಗೆ ವಹಿಸಲಾಗಿದೆ ಎಂದು ತಿಳಿಸಿದರು.