• Slide
  Slide
  Slide
  previous arrow
  next arrow
 • ನಿವೃತ್ತ ಜಿಲ್ಲಾ ನ್ಯಾಯಾಧೀಶ ವಿ.ಆರ್.ಭಟ್ ವಿಧಿವಶ

  300x250 AD

  ಶಿರಸಿ: ತಾಲೂಕಿನ ರೇವಣಕಟ್ಟಾ ಬಾಳೇಗದ್ದೆ ಮೂಲದವರಾದ ನಿವೃತ್ತ ಜಿಲ್ಲಾ ನ್ಯಾಯಾಧೀಶ ವೆಂಕಟ್ರಮಣ ರಾ. ಭಟ್ಟ (65) ಮಾ.17 ರಂದು ಮುಂಜಾನೆ ಮಣಿಪಾಲ ಆಸ್ಪತ್ರೆಯಲ್ಲಿ ದೈವಾಧೀರಾಗಿದ್ದಾರೆ.

  ಅವರು ತಮ್ಮ ವೃತ್ತಿ ಜೀವನವನ್ನು ವಕೀಲ ವೃತ್ತಿಯಿಂದ ಪ್ರಾರಂಭಿಸಿ ಶಿರಸಿಯ ಪ್ರಸಿದ್ದ ನ್ಯಾಯವಾದಿಗಳಾದ ಆರ್.ಎ.ಹೆಗಡೆ ಹೂಡ್ಲಮನೆ ಅವರಲ್ಲಿ ಶಿರಸಿಯಲ್ಲಿಯೇ ಪ್ರಾರಂಭಿಸಿ ಪ್ರಪ್ರಥಮವಾಗಿ ಸರಕಾರಿ ವಕೀಲರಾಗಿ ಗುಂಡ್ಲುಪೇಟೆಯಲ್ಲಿ ನೇಮಕಹೊಂದಿ ನಂತರ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಾ ಜಿಲ್ಲಾ ನ್ಯಾಯಾಧೀಶರಾಗಿ ಬಡ್ತಿ ಹೊಂದಿ ಬೆಳಗಾಂವ್, ಬೆಂಗಳೂರು, ಚಿಕ್ಕಮಗಳೂರು, ದಾವಣಗೆರೆ, ಉಡುಪಿಯಲ್ಲಿ ಸೇವೆ ಸಲ್ಲಿಸಿದ್ದರು.

  300x250 AD

  ನಿವೃತ್ತಿ ನಂತರ ಉಡುಪಿಯಲ್ಲಿ 2018 ರಿಂದ ಹಯಗ್ರೀವ ನಗರದ ಅವರ ಸ್ವಗೃಹದಲ್ಲಿ ವಾಸವಾಗಿದ್ದರು. ಉನ್ನತ ಶಿಕ್ಷಣವನ್ನು ಶಿರಸಿಯ ಎಮ್.ಇ.ಎಸ್. ಸಂಸ್ಥೆಯ ಕಾನೂನು ಮಹಾವಿದ್ಯಾಲಯದಲ್ಲಿ ಮುಗಿಸಿದ್ದರು. ಅವರ ಪತ್ನಿಯವರಾದ ಶ್ರೀಮತಿ ಸಾವಿತ್ರಿ ಭಟ್ ಸಹ ಜಿಲ್ಲಾನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿ ನಿವೃತ್ತಿಯನ್ನು ಹೊಂದಿದ್ದಾರೆ. ತಮ್ಮ ಅತ್ಯಂತ ಸರಳ ಸಜ್ಜನಿಕೆ ಹಾಗೂ ಸೌಮ್ಯ ಸ್ವಭಾವ ಹೊಂದಿದ್ದು ತಂದೆ-ತಾಯಿ, ಪತ್ನಿ, ಸಹೋದರ, ಇಬ್ಬರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರವಾದ ಅಭಿಮಾನಿಗಳನ್ನು, ಬಂಧು-ಬಾಂಧವರನ್ನು ಅಗಲಿದ್ದಾರೆ.
  ಇವರ ನಿಧನಕ್ಕೆ ಹಲವಾರು ಸಂಘ-ಸಂಸ್ಥೆಗಳು ಗಣ್ಯ ವ್ಯಕ್ತಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬದವರಿಗೆ ಹಾಗೂ ಅಭಿಮಾನಿ ಬಳಗದವರಿಗೆ ನೀಡಲೆಂದು ಪ್ರಾರ್ಥಿಸಿದ್ದಾರೆ.

  Share This
  300x250 AD
  300x250 AD
  300x250 AD
  Leaderboard Ad
  Back to top