• Slide
    Slide
    Slide
    previous arrow
    next arrow
  • ಕಡೇಮನೆಯಲ್ಲಿ ಮಹಿಳೆಯರಿಗಾಗಿ ಲಯನ್ಸ್’ನಿಂದ ಕಾರ್ಯಕ್ರಮ

    300x250 AD

    ಶಿರಸಿ: ಡಾ.ಎ.ಎನ್.ಪಟವರ್ಧನ್ ಫೌಂಡೇಶನ್, ಸಾಧನಾ ಮಹಿಳಾ ಸ್ವಸಹಾಯ ಸಂಘ ಕಡೇಮನೆ, ಧೀಮಹಿ ಒಕ್ಕೂಟ ಕಡೇಮನೆ ಮತ್ತು ಮಹಾದೇವಿ ಒಕ್ಕೂಟ ತುಳಗೇರಿಯ ಸಂಯುಕ್ತಾಶ್ರಯದಲ್ಲಿ ಕಡೇಮನೆ ಮೆಣಸಿಯ ಪ್ರಾಥಮಿಕ ಶಾಲೆಯಲ್ಲಿ ಮಾಹಿತಿ ಕಾರ್ಯಕ್ರಮ ನಡೆಯಿತು.
    ನಗರದ ಆಯುರ್ವೇದ ವೈದ್ಯೆ ಡಾ.ಸಹನಾ ಹೆಗಡೆ ಸಂಧಿವಾತದ ಬಗ್ಗೆ ವಿವರವಾಗಿ ಉಪನ್ಯಾಸ ನೀಡಿ ಮಹಿಳೆಯರು ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳನ್ನು ತಿಳಿಸಿದರು. ಮಹಿಳೆಯರ ಪ್ರಶ್ನೆಗಳಿಗೆ ಉತ್ತರಿಸುತ್ತಾ ನಡಿಗೆ, ಯೋಗ ಮತ್ತು ಸರಿಯಾದ ಆಹಾರ ಕ್ರಮಗಳ ಮಹತ್ವವನ್ನು ವಿವರಿಸಿದರು. ನಂತರ ಶ್ರೀಮತಿ ಅಂಜನಾ ಹೆಗಡೆ ಮನೆಯ ಕೈತೋಟವನ್ನು ಅಭಿವೃದ್ಧಿಗೊಳಿಸಿಕೊಂಡು ಆರ್ಥಿಕವಾಗಿ ಹೇಗೆ ಬೆಳೆಯಬಹುದು ಎನ್ನುವ ಬಗ್ಗೆ ಮಾತನಾಡಿದರು. ಕೆಲವು ಸಸ್ಯಗಳನ್ನು ತೋರಿಸಿ ಅವುಗಳ ಬಗ್ಗೆ, ನೀರುಡಿಸುವ ಮತ್ತು ಗೊಬ್ಬರದ ಬಗ್ಗೆ ತಿಳಿಸಿದರು. ಮಹಿಳೆ ಧೈರ್ಯವಾಗಿ, ಮಾನಸಿಕವಾಗಿ ಗಟ್ಟಿಯಾಗಿ ನಿಂತು, ಹೊಸ ಹೊಸ ವಿಚಾರಗಳಿಗೆ ತೆರೆದುಕೊಳ್ಳಬೇಕು, ತಮ್ಮಲ್ಲಿರುವ ಕೌಶಲ್ಯಕ್ಕೆ, ಶಕ್ತಿಗೆ, ಪರಿಸರಕ್ಕೆ ಸರಿಹೊಂದುವಂತಹ ವಿಷಯಗಳಿಗೆ ತಕ್ಕ ಉದ್ದಿಮೆಗಳನ್ನು ಮನೆಯಿಂದಲೇ ನಡೆಸುವ ಬಗ್ಗೆ ಯೋಚಿಸಬೇಕು ಎಂದು ಹೇಳಿ ಅವರಿಗೆ ಬೇಕಾದ ಮಾಹಿತಿಯನ್ನು ಮತ್ತು ಸಲಹೆ ಹಾಗು ಸಹಕಾರವನ್ನು ನೀಡುವ ಭರವಸೆ ನೀಡಿದರು.

    ಲಯನ್ ಸುಮಂಗಲಾ ಹೆಗಡೆ ಎಲ್ಲರನ್ನು ಸ್ವಾಗತಿಸಿದರು. ಸಾಧನಾ ಸ್ವಸಹಾಯ ಸಂಘದ ಸದಸ್ಯೆಯರಿಂದ ನಡೆದ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಲಯನ್ಸ ಕಾರ್ಯದರ್ಶಿ ರಮಾ ಪಟವರ್ಧನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಾಧನಾ ಸಂಘದ ಅಧ್ಯಕ್ಷೆ ಸುನಂದಾ ಹೆಗಡೆ ವಂದನಾರ್ಪಣೆ ಮಾಡಿದರು. ಶಿಕ್ಷಕಿ ಶೋಭಾ ಭಟ್ಟ ಕಾರ್ಯಕ್ರಮ ನಿರೂಪಣೆ ಮಾಡಿದರು. ಮಹಾದೇವಿ ಒಕ್ಕೂಟದ ಅಧ್ಯಕ್ಷೆ ದಿವ್ಯಾ ಭಟ್ಟ, ಲಯನ್ ಶರಾವತಿ ಭಟ್ಟ ಮತ್ತು ಸದಸ್ಯೆಯರು ಭಾಗವಹಿಸಿದ ಈ ಕಾರ್ಯಕ್ರಮವು ಬಹಳ ಉಪಯುಕ್ತ ಮತ್ತು ಅರ್ಥಪೂರ್ಣವಾಗಿತ್ತು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top