Slide
Slide
Slide
previous arrow
next arrow

ಊರವರ ಜೊತೆ ಊರವನಾಗಿ ರಸ್ತೆ ಉದ್ಘಾಟಿಸಿದ ಸ್ಪೀಕರ್ ಕಾಗೇರಿ

300x250 AD

ಶಿರಸಿ: ಸ್ಪೀಕರ್ ಹುದ್ದೆಯಲ್ಲಿ ಇದ್ದರೂ ಊರವರ ಜೊತೆ ಊರವರನಾಗಿ ರಸ್ತೆ ಉದ್ಘಾಟಿಸಿದ ಘಟನೆ ತಾಲೂಕಿನ ಯಡಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಣ್ಣಕೇರಿಯಲ್ಲಿ ನಡೆದಿದೆ.

ಭಾನುವಾರ ಬರೂರು ಮುಖ್ಯ ಮಾರ್ಗದಿಂದ ಸಣ್ಣಕೇರಿ ಊರಿಗೆ 10 ಲಕ್ಷ ರೂಪಾಯಿ ಮೊತ್ತದಲ್ಲಿ ನಿರ್ಮಾಣಗೊಂಡ ಡಾಂಬರು ರಸ್ತೆ ಕಾಮಗಾರಿಗೆ ರಾಜ್ಯ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಆಗಮಿಸಿದ್ದರು.
ಮಾವಿನ ತೋರಣ ಬಾಳೆ ಕಂಬದಿಂದ ಸಿಂಗಾರಗೊಂಡಿದ್ದ ರಸ್ತೆಯನ್ನು ಉದ್ಘಾಟಿಸಿ ಸಣ್ಣಕೇರಿ ಊರಿಗೆ ತೆರಳಿ ಗ್ರಾಮದಲ್ಲಿ ಆಗಬೇಕಾದ ಅಭಿವೃದ್ಧಿ ಕಾರ್ಯ ಈವರೆಗಿನ ಪ್ರಗತಿ ಕೆರೆಗಳ ಸ್ಥಿತಿಗತಿಗಳ ಕುರಿತು ಸಮಾಲೋಚನೆ ನಡೆಸಿದರು. ಉನ್ನತ ಹುದ್ದೆಯಲ್ಲಿದ್ದರೂ ಗ್ರಾಮಸ್ಥರ ಜೊತೆ ಗ್ರಾಮಸ್ಥರಾಗಿ ಎಂದಿನಂತೆ ಪಾಲ್ಗೊಂಡ ಸ್ಪೀಕರ್ ಕಾಗೇರಿ ಮುಂದೆ ಆಗಬೇಕಾದ ಕಾಮಗಾರಿಗಳ ಕುರಿತು ಸಮಾಲೋಚನೆ ನಡೆಸಿದರು‌.

300x250 AD

ಈ ವೇಳೆ ಯಡಹಳ್ಳಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರವೀಶ ಹೆಗಡೆ ಮಾಳೆನಳ್ಳಿ, ಸದಸ್ಯ ಕೇಶವ ಹೆಗಡೆ, ಪ್ರಮುಖರಾದ ಭಾಸ್ಕರ್ ಹೆಗಡೆ ಯಡಹಳ್ಳಿ, ಎನ್.ಎಂ. ಹೆಗಡೆ, ಗಣೇಶ ಹೆಗಡೆ, ಸತ್ಯನಾರಾಯಣ ಹೆಗಡೆ, ರಾಜೀವ ಹೆಗಡೆ ಇತರರು ಇದ್ದರು.

Share This
300x250 AD
300x250 AD
300x250 AD
Back to top