ಶಿರಸಿ: ತಾಲೂಕಿನ ಕಾನಗೋಡಿನಲ್ಲಿ ನಿರ್ಮಾಣ ಮಾಡಲಾದ ನೂತನ ಬಸ್ ತಂಗುದಾಣ ಗಮನ ಸೆಳೆಯುತ್ತಿದೆ.
ನಾಲ್ಕು ಲಕ್ಷ ರೂಪಾಯಿ ಮೊತ್ತದಲ್ಲಿ ನಿರ್ಮಾಣ ಮಾಡಲಾದ ಬಸ್ ತಂಗುದಾಣ ಇದಾಗಿದೆ. ರಸ್ತೆಯ ಮೇಲೆ ಸಂಚರಿಸುವ ಎರಡು ಪಾರ್ಶ್ವದ ವಾಹನಗಳನ್ನು ಕುಳಿತಲ್ಲೇ ನೋಡಬಹುದಾದ ವಿಶಿಷ್ಟ ಮಾದರಿಯ ತಂಗುದಾಣವನ್ನು ಸೋಮವಾರ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಲೋಕಾರ್ಪಣೆಗೊಳಿಸಿದರು. ಈಗಾಗಲೇ ಸಿದ್ದಾಪುರದ ಬೇಡ್ಕಣಿಯ ಹಾಗೂ ಶಿರಸಿಯ ಕಾನಗೋಡಿನ ಈ ಮಾದರಿಯ ತಂಗುದಾಣವನ್ನು ನಿರ್ಮಾಣ ಮಾಡಲಾಗಿದ್ದು, 26ಕ್ಕೂ ಹೆಚ್ಚು ಜನ ಒಂದೇ ಬಸ್ ತಂಗುದಾಣದಲ್ಲಿ ಕುಳಿತುಕೊಳ್ಳಬಹುದಾಗಿದೆ ಎಂದು ಕಾಗೇರಿ ತಿಳಿಸಿದರು.
ತಾ.ಪಂ.ಮಾಜಿ ಸದಸ್ಯ ನಾಗರಾಜ ಶೆಟ್ಟಿ, ಎಂ.ವಿ.ಹೆಗಡೆ ಕಾನಗೋಡ, ಎಸ್.ಆರ್.ಹೆಗಡೆ, ಅಶೋಕ ಹೆಗಡೆ ಕಬ್ನಳ್ಳಿ, ಡಿ.ವಿ.ಹೆಗಡೆ, ಕೃಷ್ಣಾನಂದ ಹೆಗಡೆ, ರವೀಶ ಹೆಗಡೆ, ಶಿವಾನಂದ ನಾಯ್ಕ, ಗಣಪತಿ ಹೆಗಡೆ ಇತರರು ಇದ್ದರು.