Slide
Slide
Slide
previous arrow
next arrow

ಮಾ.20ಕ್ಕೆ ಲಂಬಾಪುರದಲ್ಲಿ ‘ನಮ್ಮ ನಿಮ್ಮೊಳಗೊಬ್ಬ’ ನಾಟಕ ಪ್ರದರ್ಶನ

300x250 AD

ಸಿದ್ದಾಪುರ: ಶ್ರೀ ಮಹಾಗಣಪತಿ ದೇವಾಲಯ ಲಂಬಾಪುರ ಇದರ ಆವಾರದಲ್ಲಿ ವ್ಯವಸಾಯ ಸೇವಾ ಸಹಕಾರಿ ಸಂಘ ಲಂಬಾಪುರ, ಗ್ರಾಮ ಪಂಚಾಯತ ಲಂಬಾಪುರ ಹಾಗೂ ಕಲಾ ಪೋಷಕರ ಸಹಕಾರದೊಂದಿಗೆ ಒಡ್ಡೋಲಗ ರಂಗ ಪರಿಯಟನಾ (ರಿ) ಹಿತ್ಲಕೈ ಇವರಿಂದ ಸೋಮವಾರ ಸಾಯಂಕಾಲ 7 ಗಂಟೆಯಿಂದ ಹೊಸ ನಾಟಕ ‘ನಮ್ಮ ನಿಮ್ಮೊಳಗೊಬ್ಬ’ ನಾಟಕವು ಪ್ರದರ್ಶನಗೊಳ್ಳಲಿದೆ.

ಸಭಾಕಾರ್ಯಕ್ರಮ ಉದ್ಘಾಟನೆಯನ್ನು ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ಎಂ.ಆಯ್.ನಾಯ್ಕ ಕೆಳಗಿನಸಸಿ ನಡೆಸಿಕೊಡಲಿದ್ದು ಮಹಾಗಣಪತಿ ದೇವಾಲಯ ಕಮಿಟಿ ಅಧ್ಯಕ್ಷರಾದ ಆರ್.ಎಸ್.ಹೆಗಡೆ ವಾಜಗೋಡ ಅಧ್ಯಕ್ಷತೆಯನ್ನು ವಹಿಸಲ್ಲಿದ್ದಾರೆ.ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ವ್ಯವಸಾಯ ಸೇವಾ ಸಂಘದ ನಿರ್ದೇಶಕರಾದ ಎನ್.ಜಿ.ಹೆಗಡೆ ಗೊದ್ಲಮನೆ, ಎಂ.ಎನ್.ಹೆಗಡೆ ತಲೇಕೆರೆ, ಗ್ರಾಮ ಪಂಚಾಯತ ಅಧ್ಯಕ್ಷರಾದ ಚಂದ್ರಕಲಾ ನಾಯ್ಕ, ಸದಸ್ಯರಾದ ಕೃಷ್ಣಮೂರ್ತಿ ನಾಯ್ಕ ಐಸೂರು, ಎಸ್.ಎಂ.ಭಟ್ಟ ಬಿಜ್ಜಾಳ ಹಾಗೂ ದೇವಾಲಯ ಕಮಿಟಿಯ ಸದಸ್ಯರಾದ ಗುರುಪಾದ ಹೆಗಡೆ ಕೆರೆಮನೆ ಇವರುಗಳು ಭಾಗವಹಿಸಲಿದ್ದಾರೆಂದು ಕಾರ್ಯಕ್ರಮದ ಸಂಘಟಕರಾದ ಕೇಶವ ಹೆಗಡೆಕಿಬ್ಳೆ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

300x250 AD
Share This
300x250 AD
300x250 AD
300x250 AD
Back to top