Slide
Slide
Slide
previous arrow
next arrow

ಮಾ.19ಕ್ಕೆ ದೊಡ್ಮನೆ ಸಾಂಸ್ಕೃತಿಕ ಉತ್ಸವ; ಗೌರವ ಸನ್ಮಾನ

300x250 AD

ಸಿದ್ದಾಪುರ: ಶ್ರೀ ಕೋಡಿಗದ್ದೆ ಮೂಕಾಂಬಿಕಾ ಯಕ್ಷಗಾನ ಕಲಾಸಂಘ (ರಿ) ದೊಡ್ಮನೆ ಇವರ ಆಶ್ರಯದಲ್ಲಿ ಉಪೇಂದ್ರ ಪೈ ಸೇವಾ ಟ್ರಸ್ಟ್ ಶಿರಸಿ ಇವರ ಸಹಕಾರದೊಂದಿಗೆ ದೊಡ್ಮನೆ ಸಾಂಸ್ಕೃತಿಕ ಉತ್ಸವ 2023 ಹಾಗೂ ಗೌರವ ಸನ್ಮಾನ ಕಾರ್ಯಕ್ರಮವನ್ನು ಮಾ.19 ಭಾನುವಾರ ಸಂಜೆ 6-30 ರಿಂದ ತಾಲೂಕು ದೊಡ್ಮನೆ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವಾರದಲ್ಲಿ ಹಮ್ಮಿಕೊಳ್ಳಲಾಗಿದೆ.

     ಕಾರ್ಯಕ್ರಮವನ್ನು ಉಪೇಂದ್ರ ಪೈ ಸೇವಾ ಟ್ರಸ್ಟ್ ಶಿರಸಿ ಅಧ್ಯಕ್ಷರಾದ ಉಪೇಂದ್ರ ಪೈ ಉದ್ಘಾಟಿಸಲ್ಲಿದ್ದು, ಕೋಡಿಗದ್ದೆ ಯಕ್ಷಗಾನ ಕಲಾ ಸಂಘದ ಉಪಾಧ್ಯಕ್ಷರಾದ ಶ್ರೀಧರ ಭಟ್ಟ ಗಡಿಹಿತ್ಲು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಈ ಸಂದರ್ಭದಲ್ಲಿ ರಂಗಭೂಮಿ ಕಲಾವಿಧರಾದ ಮಾಧವ ಶರ್ಮಾ ಕಲಗಾರ, ನಾಗರಾಜ ನಾಯ್ಕ ಬರೂರು ಇವರನ್ನು ಸನ್ಮಾನಿಸಲಾಗುವುದು. ಈ ಕಾರ್ಯಕ್ರಮದಲ್ಲಿ ಮಹಾಗಣಪತಿ ದೇವಾಲಯ ಕಮಿಟಿ ದೊಡ್ಮನೆ ಇದರ ಅಧ್ಯಕ್ಷರಾದ ಶ್ರೀಧರ ಗ. ಭಟ್ಟ ಕಲಕೈ, ಎಸ್.ಡಿ.ಎಂ.ಸಿ.ದೊಡ್ಮನೆ ಅಧ್ಯಕ್ಷರಾದ ಕೃಷ್ಣಮೂರ್ತಿ ಭಟ್ಟ ಕಾರಗೋಡು, ಸಾಮಾಜಿಕ ಕಾರ್ಯಕರ್ತರಾದ ಶಾಂತಕುಮಾರ ಭಟ್ಟ ಕೋಣೆಮನೆ, ನ್ಯಾಯವಾದಿಗಳಾದ ಎಂ.ಡಿ.ನಾಯ್ಕ ಹಸ್ವಿಗುಳಿ, ವ್ಯವಸಾಯ ಸೇವಾ ಸಹಕಾರಿ ಸಂಘ ನಿರ್ದೇಶಕರಾದ ಶಿವಾನಂದ ಹೆಗಡೆ ನೇಗಾರ, ಎಸ್.ಡಿ.ಎಂ.ಸಿ ಬಳೂರು ಇದರ ಅಧ್ಯಕ್ಷರಾದ ವೀರಭದ್ರ ಜಿ. ಗೌಡ ಬಳೂರು, ಸಾಮಾಜಿಕ ಕಾರ್ಯಕರ್ತರಾದ ಜಿ.ಜಿ.ಹೆಗಡೆ ಹಳ್ಳಿಬೈಲ್, ದೊಡ್ಮನೆ ಗ್ರಾ.ಪಂ.ಸದಸ್ಯರಾದ ಶಾರದಾ ವಿ.ಹೆಗಡೆ ಕೊಂಟೆಕುಣಿ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷರಾದ ಮಮತಾ ಆರ್.ಗೌಡ, ಸದಸ್ಯರಾದ ಬಾಲಚಂದ್ರಗೌಡ ಹೊನ್ನಗೋಡ, ಆನಂದಗೌಡ ಕಿತ್ತೊಳ್ಳಿ ಇವರುಗಳು ಪಾಲ್ಗೊಳ್ಳುವರು.

300x250 AD

ನಂತರ ಆನಂದ ಶೀಗೆಹಳ್ಳಿ ಹಾಗೂ ಪ್ರತೀಕ ಬೆಂಗಳೆ ಇವರಿಂದ ಯಕ್ಷನೃತ್ಯ ಪ್ರದರ್ಶನಗೊಳ್ಳಲಿದ್ದು, ನಂತರ ಒಡ್ಡೋಲಗ ರಂಗ ಪರ್ಯಟನಾ (ರಿ) ಹಿತ್ಲಕೈ ಅರ್ಪಿಸುವ ಹೊಸನಾಟಕ, ‘ನಮ್ಮ ನಿಮ್ಮೊಳಗೊಬ್ಬ’ ಪ್ರದರ್ಶನಗೊಳ್ಳಲಿದೆ.

Share This
300x250 AD
300x250 AD
300x250 AD
Back to top