Slide
Slide
Slide
previous arrow
next arrow

ಎಂ.ಕೆ.ನಾಯ್ಕ ಹೊಸಳ್ಳಿಗೆ ಸಿದ್ಧಿಶ್ರೀ ಪ್ರಶಸ್ತಿ ಪ್ರದಾನ

300x250 AD

ಸಿದ್ದಾಪುರ: ಶಿಕ್ಷಣ ತಜ್ಞ ಪ್ರಾಚಾರ್ಯ ಎಂ. ಕೆ. ನಾಯ್ಕ ಹೊಸಳ್ಳಿ ಅವರಿಗೆ ಶ್ರೀ ಮಹಾಗಣಪತಿ ದೇವಾಲಯ ಬಾಳಗೋಡ ಇದರಿಂದ ನೀಡಲಾಗುವ 2023 ರ ‘ಸಿದ್ಧಿಶ್ರೀ ಪ್ರಶಸ್ತಿ’ ಯನ್ನು ನೀಡಿ ಗೌರವಿಸಲಾಯಿತು.

ಪ್ರಶಸ್ತಿ ಸ್ವೀಕರಿಸಿದ ಎಂ. ಕೆ. ನಾಯ್ಕ ಹೊಸಳ್ಳಿ ರವರು ಮಾತನಾಡಿ – ಪ್ರಶಸ್ತಿಯನ್ನು ದೇವರ ಹೆಸರಿನಲ್ಲಿ ನೀಡುತ್ತಿರುವುದು ಸಂತೋಷ. ತಾನು ಈ ಪ್ರಶಸ್ತಿಯನ್ನು ಅತ್ಯಂತ ವಿನೀತನಾಗಿ ಸ್ವೀಕರಿಸಿದ್ದೇನೆ. ಮನುಷ್ಯ ತನ್ನ ಜೀವನದ ಎಲ್ಲ ಕ್ಷಣಗಳಲ್ಲೂ ದೇವರಶಕ್ತಿಯನ್ನು ಗೌರವಿಸಬೇಕು. ಈ ಜಗತ್ತಿನಲ್ಲಿ ದೇವರ ಕೃಪೆ ಮನುಷ್ಯನ ಶ್ರಮ, ಸಾಧನೆ ಮೂಲಕ ಉನ್ನತ ಸ್ಥಾನ ಪಡೆಯಲು ಸಾಧ್ಯ ಎಂದು ಹೇಳಿದರು.

300x250 AD

ಅಧ್ಯಕ್ಷತೆಯನ್ನು ದೇವಾಲಯದ ಟ್ರಸ್ಟಿನ ಅಧ್ಯಕ್ಷ ರಾಜೇಂದ್ರ ರಾಮನಾಥ ಹೆಗಡೆ ಬಾಳಗೋಡ ವಹಿಸಿದ್ದರು. ಸಿದ್ಧಿಶ್ರೀ ಪ್ರಶಸ್ತಿ ಪ್ರಾಯೋಜಕ ಜಿ.ಜಿ. ಹೆಗಡೆ ಬಾಳಗೋಡ ಸ್ವಾಗತಿಸಿ ಪ್ರಾಸ್ತಾವಿಕ ಮಾತನ್ನಾಡಿದರು. ಲಕ್ಷ್ಮಿನಾರಾಯಣ ಹೆಗಡೆ ಬಾಳಗೋಡ ನಿರೂಪಿಸಿ ವಂದಿಸಿದರು. ಬಳಿಕ ಖ್ಯಾತ ಕಲಾವಿದರಿಂದ ಯಕ್ಷಗಾನ ಪ್ರದರ್ಶಿಸಲಾಯಿತು.

Share This
300x250 AD
300x250 AD
300x250 AD
Back to top