ಶಿರಸಿ: ಶಿರಸಿ ಉಪ ವಿಭಾಗದ ಗ್ರಾಮೀಣ-1 ಶಾಖಾ ವ್ಯಾಪ್ತಿಯಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಶಿರಸಿ 220/11 ಕೆ.ವಿ ಉಪಕೇಂದ್ರದಿಂದ ಹೊರಡುವ ಇಸಳೂರು ದಾಸನಕೊಪ್ಪ ಫೀಡರಿನ 11 ಕೆ.ವಿ ಮಾರ್ಗದ ಗೌಡಳ್ಳಿ, ಇಸಳೂರು, ಬಿಸಲಕೊಪ್ಪ, ಮಳಲಗಾಂವ, ಹುಬ್ಬಳ್ಳಿರಸ್ತೆ, ದನಗನಹಳ್ಳಿ, ದಾಸನಕೊಪ್ಪ ಹಾಗೂ ರಂಗಾಪುರ ಗ್ರಾಮಗಳಲ್ಲಿ ಮಾ.20, ಸೋಮವಾರ ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 6 ಘಂಟೆ ವಿದ್ಯುತ್ ಸರಬರಾಜು ಕಡಿತವಾಗಲಿದೆ.
ಕಾರಣ ಗ್ರಾಹಕರು ಸಹಕರಿಸಬೇಕೆಂದು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರು ಕಾರ್ಯ & ಪಾಲನಾ ಉಪ ವಿಭಾಗ, ಹೆಸ್ಕಾಂ ಶಿರಸಿ ತಿಳಿಸಿರುತ್ತಾರೆ.