Slide
Slide
Slide
previous arrow
next arrow

ಸ್ಕೊಡ್‌ವೆಸ್ ಸಂಸ್ಥೆಯಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರ

300x250 AD

ಶಿರಸಿ: ದೃಷ್ಟಿಯ ಸುರಕ್ಷತೆಗಾಗಿ ಶಿಬಿರದ ಪ್ರಯೋಜನ ಪಡೆದುಕೊಳ್ಳಿ ಎಂದು ರೋಟರಿ ಕ್ಲಬ್ ಅಧ್ಯಕ್ಷರಾದ ಗಣೇಶ್ ಹೆಗಡೆ ಸ್ಕೊಡ್ವೆಸ್ ಸಂಸ್ಥೆ ಶಿರಸಿ ದೇಸಾಯಿ ಫೌಂಡೆಶನ್ ಹಾಗೂ ಗಣೇಶ್ ನೇತ್ರಾಲಯ ಶಿರಸಿ ಇವರ ಸಹಯೋಗದಲ್ಲಿ ಮಾ.17 ರಂದು ಆಯೋಜಿಸಿದ ಉಚಿತ ಕಣ್ಣಿನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಸ್ಕೊಡ್ವೆಸ್ ಸಂಸ್ಥೆಯು ತಜ್ಞ ವೈದ್ಯರುಗಳಿಂದ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜಿಸುತ್ತಿರುವುದು ಹಲವಾರು ಜನರಿಗೆ ತುಂಬಾ ಪ್ರಯೋಜನಕಾರಿಯಾಗಲಿದೆ. ಪ್ರತಿಯೊಬ್ಬ ವ್ಯಕ್ತಿಗೂ ಕಣ್ಣು ಅತೀ ಪ್ರಮುಖವಾದ ಅಂಗವಾಗಿದೆ. ಕಣ್ಣಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸ್ಕೊಡವೆಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಡಾ.ವೆಂಕಟೇಶ್ ನಾಯ್ಕ್ ಮಾತನಾಡಿ, ಸ್ಕೊಡ್ವೆಸ್ ಸಂಸ್ಥೆಯು ಮಹಿಳೆಯರು ಮತ್ತು ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ಅವುಗಳಲ್ಲಿ ದೇಸಾಯಿ ಫೌಂಡೇಶನ್ ಗುಜರಾತ್ ಇವರ ಸಹಯೋಗದಲ್ಲಿ ಕಣ್ಣಿನ ಆರೋಗ್ಯದ ಕುರಿತು ಸಾರ್ವಜನಿಕರಿಗೆ ಚಿಕಿತ್ಸೆ ಹಾಗೂ ಅರಿವು ಮೂಡಿಸುವ ಯೋಜನೆಯನ್ನು ಗಣೇಶ್ ನೇತ್ರಾಲಯ ಸಹಭಾಗಿತ್ವದಲ್ಲಿ ಅನುಷ್ಠಾನ ಮಾಡಲಾಗುತ್ತಿದೆ. ಕಣ್ಣಿನ ಪರೀಕ್ಷೆ ಯಾಕೆ ಮಾಡಬೇಕು? ಇದರ ಪ್ರಯೋಜಗಳೇನು?ಕಣ್ಣಿನ ರಕ್ಷಣೆಗೆ ಅನುಸರಿಬೇಕಾದ ಕ್ರಮಗಳ ಕುರಿತು ತಜ್ಞ ವೈದ್ಯರುಗಳಿಂದ ಸಾರ್ವಜನಿಕರಿಗೆ ಸಲಹೆ ಸೂಚನೆಗಳನ್ನು ಒದಗಿಸಲಾಗುವುದು. ಇನ್ನೂ ಹೆಚ್ಚಿನ ತಪಾಸಣಾ ಶಿಬಿರಗಳನ್ನು ಗ್ರಾಮೀಣ ಭಾಗದ ಜನರಿಗೆ ತಲುಪಿಸುವಂತೆ ಆಯೋಜಿಸಲಾಗುವುದು ಎಂದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ.ಶಿವರಾಮ ಕೆ.ವಿ ಮಾತನಾಡಿ ಗ್ರಾಮೀಣ ಭಾಗದ ಜನರಿಗೆ ಕಣ್ಣಿನ ತಪಾಸಣೆ ಮತ್ತು ಮಾಹಿತಿ ಕಾರ್ಯಕ್ರಮ ಆಯೋಜಿಸುವ ಮೂಲಕ ಗ್ರಾಮೀಣ ಭಾಗದ ಜನರಲ್ಲಿ ದೃಷ್ಟಿ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲಾಗುವುದು. ಕಣ್ಣಿನ ತಪಾಸಣೆಯ ಮೊದಲು ಕಣ್ಣಿನ ಸುರಕ್ಷತೆಯ ಬಗೆಗಾಗಿ ಮಾಹಿತಿ ಪಡೆಯುವುದು ಅತೀ ಅವಶ್ಯಕ. ಈ ಒಂದು ಶಿಬಿರದ ಮೂಲಕ ಮೊದಲು ಸಾರ್ವಜನಿಕರಿಗೆ ಮಾಹಿತಿ ಕಾರ್ಯಕ್ರಮವನ್ನು ಆಯೋಜಿಸಿ ನಂತರ ನಿಗದಿತ ಸಮಯದಲ್ಲಿ ತಪಾಸಣೆಯನ್ನು ಮಾಡಲಾಗುವುದು. ಈ ಶಿಬಿರದಲ್ಲಿ ಸ್ಕೊಡ್ವೆಸ್ ಸಂಸ್ಥೆಯಿಂದ ಕಾರ್ಡಗಳನ್ನು ಪಡೆದ ಪ್ರತಿಯೊಬ್ಬರಿಗೂ ಉಚಿತವಾಗಿ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು.

300x250 AD

ಮತ್ತೋರ್ವ ಮುಖ್ಯ ಅತಿಥಿಗಳಾದ ಡಾ.ಮಾಧುರಿ ಶಿವರಾಮ ಮಾತನಾಡಿ ಇತ್ತಿಚೀನ ದಿನಗಳಲ್ಲಿ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಹೆಚ್ಚಾಗುತ್ತಿರುವುದು ವಿಶಾದನೀಯ. ಸ್ತನ ಕ್ಯಾನ್ಸರ್ ಪರಿಕ್ಷೆಯ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದಾಗ ಇದರಿಂದಾಗುವ ದುಷ್ಪರಿಣಾಮ ತಡೆಗಟ್ಟಬಹುದು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ತನುಶ್ರೀ ಹೆಗಡೆ ಕಣ್ಣಿನ ಸುರಕ್ಷತೆ ಕುರಿತು ಸವಿವರವಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ 60 ಕ್ಕೂ ಹೆಚ್ಚು ಜನ ಸಾರ್ವಜನಿಕರು ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಂಡರು.
ವೇದಿಕೆಯಲ್ಲಿ ಸ್ಕೊಡ್ವೆಸ್ ಸಂಸ್ಥೆಯ ಮುಖ್ಯ ಹಣಕಾಸು ಮತ್ತು ಆಡಳಿತಧಿಕಾರಿಗಳಾದ ಸರಸ್ವತಿ ಎನ್.ರವಿ, ದೇಸಾಯಿ ಫೌಂಡೇಶನ್ ಸಮನ್ವಯಾಧಿಕಾರಿಯಾದ ವಿನಯಾ ನಾಯ್ಕ್ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ಕೊಡವೆಸ್ ಸಂಸ್ಥೆಯ ಸಿಬ್ಬಂದಿಗಳು, ದೇಸಾಯಿ ಫೌಂಡೇಶನ್ ಸಿಬ್ಬಂದಿಗಳು, ಗಣೇಶ್ ನೇತ್ರಾಲಯದ ಸಿಬ್ಬಂದಿಗಳು ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಸ್ಕೊಡವೆಸ್ ಸಂಸ್ಥೆಯ ಹೇಲಮತಾ ಚೌಗಲೆ ನಿರೂಪಿಸಿ, ಉಮೇಶ್ ಮರಾಠಿ ಸ್ವಾಗತಿಸಿ, ದಿನೇಶ್ ಮಡಿವಾಳ ವಂದಿಸಿದರು.

Share This
300x250 AD
300x250 AD
300x250 AD
Back to top