ಶಿರಸಿ: ತಾಲೂಕಿನ ಇಸಳೂರಿನ ಸರಕಾರಿ ಪ್ರೌಢಶಾಲೆಯಲ್ಲಿ ಮಾ.12 ರವಿವಾರ ವ್ಯಕ್ತಿತ್ವ ವಿಕಸನ ಶಿಬಿರ ಮತ್ತು ಎಸ್.ಎಸ್.ಎಲ್.ಸಿ. ನಂತರದ ಕೋರ್ಸಗಳ ಮಾಹಿತಿಯನ್ನು ಕುರಿತು ಕುಮಾರಿ ಅರ್ಚನಾ ಬಿ. ಜಿ. ಎಂಟೆಕ್ ಬಂಜಾರಾ ಅಕಾಡೆಮಿ ಬೆಂಗಳೂರು ಇವರಿಂದ ನೆರವೇರಲ್ಪಟ್ಟಿತು. ವಿದ್ಯಾರ್ಥಿಗಳೊಂದಿಗೆ ಮುಕ್ತ ಸಂವಾದ ಏರ್ಪಟ್ಟಿತು. ಕುಮಾರಿ ಅನುಶ್ರೀ ಎಂ.ಕಾo. ಬೆಂಗಳೂರು ಇವರಿಂದ ವ್ಯಕ್ತಿತ್ವ ವಿಕಸನದ ಕುರಿತು ಉಪನ್ಯಾಸ ನಡೆಯಿತು. ಹತ್ತನೇ ತರಗತಿಯ ವಿದ್ಯಾರ್ಥಿಗಳಿಗೆ ವಿಶೇಷವಾಗಿಟ್ಟುಕೊಂಡು ರಾಷ್ಟ್ರೀಯ ಸೇವಾ ಯೋಜನೆ ಘಟಕದಡಿಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯಾಧ್ಯಾಪಕಿ ಸುಮಂಗಲಾ ಜೋಶಿ, ಶಾಂತಾರಾಮ ಗುನಗ, ಗಣೇಶ ಬಿ.ವಿ. ಕಾರ್ಯಕ್ರಮಾಧಿಕಾರಿ ಭಾಗವಹಿಸಿದ್ದರು.
ಇಸಳೂರಿನಲ್ಲಿ ವ್ಯಕ್ತಿತ್ವ ವಿಕಸನ, ವ್ಯಕ್ತಿ ಮಾರ್ಗದರ್ಶನ ಶಿಬಿರ
