Slide
Slide
Slide
previous arrow
next arrow

ಬ್ಲಾಕ್ ಕಾಂಗ್ರೆಸ್‌ನಿಂದ ದೇಶಪಾಂಡೆ ಜನ್ಮದಿನಾಚರಣೆ

300x250 AD

ದಾಂಡೇಲಿ: ನಗರದ ಬ್ಲಾಕ್ ಕಾಂಗ್ರೆಸ್ ಸಮಿತಿ ವತಿಯಿಂದ ಶಾಸಕ ಆರ್.ವಿ.ದೇಶಪಾಂಡೆಯವರ ಜನ್ಮದಿನಾಚರಣೆಯನ್ನು ಗುರುವಾರ ನಗರದ ಪಟೇಲ್ ವೃತ್ತದ ಸಮೀಪದಲ್ಲಿರುವ ಕಾಂಗ್ರೆಸ್ ಪಕ್ಷದ ಕಾರ್ಯಾಲಯದಲ್ಲಿ ಹಮ್ಮಿಕೊಳ್ಳಲಾಯಿತು.
ಕೇಕ್ ಕತ್ತರಿಸಿ ಜನ್ಮದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೋಹನ ಹಲವಾಯಿ ಇಡೀ ರಾಷ್ಟ್ರವೇ ಕೊಂಡಾಡುವOತಹ ಸಾಧನೆ ಮಾಡಿದ ಗೌರವಕ್ಕೆ ಆರ್.ವಿ.ದೇಶಪಾಂಡೆಯವರು ಪಾತ್ರರಾಗಿದ್ದಾರೆ. ಇಂತಹ ಜನಪರ ಕಾಳಜಿಯ ನಾಯಕನನ್ನು ಪಡೆದ ನಮ್ಮ ಕ್ಷೇತ್ರದ ಜನರು ನಿಜಕ್ಕೂ ಭಾಗ್ಯವಂತರು ಎಂದರು.
ಇನ್ನೋರ್ವ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕರ‍್ಯದರ್ಶಿ ಇಕ್ಬಾಲ್ ಶೇಖ ಅವರು ಮಾತನಾಡಿ, ದೇಶಪಾಂಡೆಯವರಿಗೆ ದೇಶಪಾಂಡೆಯವರೆ ಸಾಟಿ. ತಮ್ಮ ಇಷ್ಟು ವರ್ಷಗಳ ಸುಧೀರ್ಘ ರಾಜಕೀಯ ಜೀವನದಲ್ಲಿ ವಿಶಿಷ್ಟ ಮತ್ತು ವಿನೂತನ ದೂರದೃಷ್ಟಿ ವಿಚಾರಧಾರೆಗಳನ್ನು ಹೊಂದಿರುವ ಮತ್ತು ಪ್ರಯೋಗಶೀಲ ಅಭಿವೃದ್ಧಿ ಕರ‍್ಯಗಳನ್ನು ಮಾಡಿದ ಹೆಗ್ಗಳಿಕೆ ಆರ್.ವಿ.ದೇಶಪಾಂಡೆಯವರಿಗೆ ಸಲ್ಲುತ್ತದೆ. ಆರ್.ವಿ.ದೇಶಪಾಂಡೆಯವರ ದಣಿವರಿಯದ ಜನಸೇವೆಯಿಂದ ನಮ್ಮ ಕ್ಷೇತ್ರ ಅಭಿವೃದ್ಧಿಯಲ್ಲಿ ಪ್ರಗತಿಪಥದತ್ತ ಸಾಗಿದೆ, ಸಾಗುತ್ತಿದೆ. ಮುಂಬರಲಿರುವ ವಿಧಾನ ಸಭಾ ಚುನಾವಣೆಯಲ್ಲಿ ಅವರನ್ನು ಅತ್ಯಧಿಕ ಮತಗಳ ಅಂತರದಿOದ ಗೆಲ್ಲಿಸಲು ಕಂಕಣಬದ್ಧರಾಗಿ ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿ, ಜನ್ಮದಿನದ ಶುಭಾಶಯಗಳನ್ನು ಕೋರಿದರು.
ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಉಸ್ಮಾನ್ ಮುನ್ನಾ ವಹಾಬ್ ಅವರು ಮಾತನಾಡಿ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಹೊಸ ಆಯಾಮವನ್ನು ದೊರಕಿಸಿಕೊಡುವುದರ ಮೂಲಕ ದಾಂಡೇಲಿಯು ಜಾಗತಿಕ ಮಟ್ಟದಲ್ಲಿ ಗುರುತಿಸುವಂತಾಗಲೂ ದೇಶಪಾಂಡೆಯವರ ಕೊಡುಗೆ ಅಪಾರ ಮತ್ತು ಅನನ್ಯ. ಇಂತಹ ಮಹಾನ್ ನಾಯಕರ ಜನ್ಮದಿನಾಚರಣೆಯನ್ನು ಆಚರಿಸಲು ಹೆಮ್ಮೆಯೆನಿಸುತ್ತದೆ. ವಿಶಾಲ ಹೃದಯದ ತನ್ನದೇ ಆದ ಸಾಮಾಜಿಕ ಪರಿಕಲ್ಪನೆಯ ಮುತ್ಸದ್ಧಿ ಜನನಾಯಕರಾದ ಆರ್.ವಿ.ದೇಶಪಾಂಡೆಯವರನ್ನು ಪ್ರಚಂಡ ಮತಗಳ ಅಂತರದಿಂದ ಗೆಲ್ಲಿಸುವ ಹೊಣೆಗಾರಿಕೆ ನಮ್ಮೆಲ್ಲರದ್ದಾಗಿದೆ ಎಂದರು.
ಅಧ್ಯಕ್ಷತೆಯನ್ನು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿ.ಆರ್.ಹೆಗಡೆ ವಹಿಸಿದ್ದರು. ಈ ಸಂದರ್ಭದಲ್ಲಿ ನಗರ ಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್, ಉಪಾಧ್ಯಕ್ಷರಾದ ಸಂಜಯ್ ನಂದ್ಯಾಳ್ಕರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅನಿಲ್ ನಾಯ್ಕರ್, ನಗರ ಸಭಾ ಸದಸ್ಯೆ ಯಾಸ್ಮಿನ್ ಕಿತ್ತೂರು, ಪಕ್ಷದ ಮುಖಂಡರುಗಳಾದ ಮುನ್ನಾ ವಹಾಬ್ ಶೇಖ, ತಸ್ವರ್ ಸೌದಾಗರ್, ಕರೀಂ ಅಜ್ರೇಕರ್, ಗೌಸ್ ಖತೀಬ್, ಎಸ್.ಎಸ್.ಪೂಜಾರ್, ಬಶೀರ್ ಗಿರಿಯಾಳ, ಆರ್.ಪಿ.ನಾಯ್ಕ, ದಿವಾಕರ ನಾಯ್ಕ, ಕೀರ್ತಿ ಗಾಂವಕರ, ರೇಣುಕಾ ಬಂದ, ಮೀನಾಕ್ಷಿ ಕನ್ಯಾಡಿ, ವಿಜಯಾ ಮಾನೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕರ‍್ಯಕ್ರಮದಲ್ಲಿ ಪಕ್ಷದ ನಗರ ಸಭಾ ಸದಸ್ಯರು, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top