ಕಾರವಾರ: ನಾವೆಲ್ಲರೂ ಹೆಣ್ಣು- ಗಂಡು ಎಂಬ ಭೇದವಿಲ್ಲದೆ ಸಮಾಜವನ್ನು ಕಟ್ಟಲು ಮುಂದಾಗೋಣ ಎಂದು ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ್ ಹೇಳಿದರು.
ಕೈಗಾ ಅಣು ಸ್ಥಾವರದ ಮಹಿಳಾ ಉದ್ಯೋಗಿಗಳ ವೇದಿಕೆ ಆಯೋಜಿಸಿದ್ದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದಲ್ಲಿ ಹೆಣ್ಣಿನ ಪಾತ್ರ ಮತ್ತು ಜವಾಬ್ದಾರಿಯು ಅಪರವಾದುದು. ಪ್ರತಿ ಕ್ಷೇತ್ರದಲ್ಲಿ ಇಂದು ಹೆಣ್ಣು ತನ್ನದೇ ಆದ ಸ್ಥಾನಮಾನ ಹೊಂದಿದ್ದು, ಎಲ್ಲ ರಂಗದಲ್ಲೂ ತನ್ನದೇ ಆದ ಛಾಪು ಮೂಡಿಸುತ್ತಿದ್ದಾಳೆ. ಇದು ಉತ್ತಮ ಸಮಾಜದ ಬೆಳವಣಿಗೆಗೆ ಸಹಕರಿಯಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಸ್ಥಳ ನಿರ್ದೇಶಕ ಪಿ.ಜಿ.ರಾಯಚೂರ್, ಕೇಂದ್ರ ನಿರ್ದೇಶಕ ಬಿ.ವಿನೋದಕುಮಾರ್, ಘಟಕ-1&2ರ ಕೇಂದ್ರ ನಿರ್ದೇಶಕ ವೈ.ವಿ.ಭಟ್, ಕೈಗಾ-5&6ರ ಯೋಜನಾ ನಿರ್ದೇಶಕ ಬಿ.ಕೆ.ಚೆನ್ನಕೇಶವ, ಮಾನವ ಸಂಪನ್ಮೂಲ ಮುಖ್ಯಸ್ಠೆ ಸುವರ್ಣ ಎಸ್.ಗಾವಕರ್, ವಿ. ನಾಗರತ್ನ, ವಿಜಯಲಕ್ಶ್ಮಿ ರಾಯಚೂರ್, ಕವಿತಾ ವಿನೋದ ಕುಮಾರ್, ರೀತಾ ಭಟ್, ಕವಿತಾ ಚನ್ನಕೇಶವ ಹಾಗೂ ಮಹಿಳಾ ವೇದಿಕೆಯ ಕಾರ್ಯದರ್ಶಿಗಳು ಇದ್ದರು.