Slide
Slide
Slide
previous arrow
next arrow

ಅಪ್ಪು ಬರ್ತಡೇಗೆ‌ ಅಭಿಮಾನಿಗಳಿಗೆ‌ ಗಿಫ್ಟ್: ಅಮೇಜಾನ್ ಪ್ರೈಂನಲ್ಲಿ ‘ಗಂಧದಗುಡಿ’ ರಿಲೀಸ್

300x250 AD

ಬೆಂಗಳೂರು: ‘ಕರ್ನಾಟಕ ರತ್ನ’ ಡಾ. ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದು ಅಭಿಮಾನಿಗಳಿಗೆ ವಿಶೇಷ ಉಡುಗೊರೆ ಸಿಗಲಿದೆ.

ನಟ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಕನಸಿನ ಕೂಸು ಗಂಧದ ಗುಡಿ ಡಾಕ್ಯುಮೆಂಟ್ ಚಿತ್ರ ಇದೇ ಮಾರ್ಚ್ 17ರಂದು ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆಗೆ ಸಜ್ಜಾಗಿದೆ.

ಅಮೋಘವರ್ಷ ನಿರ್ದೇಶಿಸಿರುವ ಪುನೀತ್ ರಾಜ್‌ಕುಮಾ‌ರ್ ಅಭಿನಯಿಸಿದ ಕೊನೆಯ ಸಿನಿಮಾ ‘ಗಂಧದ ಗುಡಿ’ ಕಳೆದ ವರ್ಷ ಅಕ್ಟೋಬರ್ 28ರಂದು ತೆರೆ ಕಂಡಿತ್ತು. ಸುಮಾರು 90 ನಿಮಿಷಗಳ ‘ಗಂಧದಗುಡಿ’ಯನ್ನು ಅದ್ದೂರಿಯಾಗಿ ಬಿಗ್ ಬಜೆಟ್ ಸಿನಿಮಾ ರೀತಿಯಲ್ಲೇ ತೆರೆಗೆ ತರಲಾಗಿತ್ತು.

300x250 AD

ಇದೀಗ ‘ಗಂಧದಗುಡಿ’ಯನ್ನು ಓಟಿಟಿಯಲ್ಲಿ ರಿಲೀಸ್ ಮಾಡಲು ಅಶ್ವಿನಿ ಪುನೀತ್ ರಾಜ್‌ಕುಮಾರ್ ಮುಂದಾಗಿದ್ದು, ಪುನೀತ್ ಹುಟ್ಟುಹಬ್ಬದ (ಮಾ.17) ವಿಶೇಷ ದಿನದಂದು ‘ಗಂಧದಗುಡಿ’ ಓಟಿಟಿ ರಿಲೀಸ್ ಡೇಟ್ ಘೋಷಣೆ ಮಾಡಲಾಗಿದೆ.

ಮಾರ್ಚ್ 17ರಿಂದ ಅಮೆಜಾನ್ ಪ್ರೈಮ್‌ನಲ್ಲಿ ‘ಗಂಧದಗುಡಿ’ ಪ್ರಸಾರ ಆರಂಭಿಸಲಿದೆ.

Share This
300x250 AD
300x250 AD
300x250 AD
Back to top