ದಾಂಡೇಲಿ: ನಗರದ ಜೆ.ಎನ್.ರಸ್ತೆಯಿಂದ ಸಂಡೆ ಮಾರ್ಕೆಟಿನಲ್ಲಿರುವ ಮೀನು ಮಾರುಕಟ್ಟೆ ಮತ್ತು ಶೌಚಾಲಯಕ್ಕೆ ಹೋಗುವ ರಸ್ತೆ ಕಾಮಗಾರಿಗೆ ಸೋಮವಾರ ಚಾಲನೆ ನೀಡಲಾಗಿದೆ.
ಸ್ಥಳೀಯ ನಗರಸಭಾ ಸದಸ್ಯೆ ಪದ್ಮಜಾ ಜನ್ನು ಭೂಮಿಪೂಜೆ ನೆರವೇರಿಸಿ ಮಾತನಾಡಿ, ಸ್ಥಳೀಯ ವ್ಯಾಪಾರಸ್ಥರ ಮತ್ತು ಸಾರ್ವಜನಿಕರ ಬಹುದಿನಗಳ ಬೇಡಿಕೆಯಂತೆ ಆಧ್ಯತೆಯಡಿ ಈ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. 21 ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಾಣವಾಗಲಿದೆ ಎಂದರು. ವಾರ್ಡಿನ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ವಿಶೇಷ ಪ್ರಾಧಾನ್ಯತೆಯಲ್ಲಿ ಕೆಲಸ ನಿರ್ವಹಿಸಲಾಗುತ್ತಿದ್ದು, ನನ್ನ ವಾರ್ಡ್ ನನ್ನ ಹೆಮ್ಮೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ವಿಷ್ಣು ನಾಯರ್ ಮಾತನಾಡಿ, ನಗರಸಭಾ ಸದಸ್ಯರಾದ ಪದ್ಮಜಾ ಜನ್ನು ಅವರಿಗೆ ಈ ರಸ್ತೆ ಕಾಮಗಾರಿಯ ಬಗ್ಗೆ ಗಮನಕ್ಕೆ ತಂದಾಗ ತಕ್ಷಣವೆ ಸ್ಪಂದಿಸಿದ್ದಾರೆ. ವಾರ್ಡಿನ ಜನತೆಯ ಸಮಸ್ಯೆಗಳಿಗೆ ತಡವರಿಯದೇ ಸ್ಪಂದಿಸುವ ಮೂಲಕ ವಾರ್ಡಿನ ಜನತೆಯ ಅಭಿಮಾನಕ್ಕೆ ಪಾತ್ರರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಪ್ರವೀಣ ಜನ್ನು, ಜಾನಿ ಡಿಸಿಲ್ವಾ, ಪಾಂಡುರಂಗ ಮೊಟ್ರಾಚೆ, ಗೋಪಿ, ಮಹಮ್ಮದ್ ಮುಸ್ತಾಕ್ ಶೇಖ, ಅಬ್ಬಾಸ್ ಬಾಳೆಕುಂದ್ರಿ, ಮನೋಹರ್ ತೇರದಾಳ ಸೇರಿದಂತೆ ಸ್ಥಳೀಯ ವ್ಯಾಪಾರಸ್ತರು ಮತ್ತು ಸಾರ್ವಜನಿಕರು ಇದ್ದರು.