Slide
Slide
Slide
previous arrow
next arrow

ದಾಂಡೇಲಿಯಲ್ಲಿ 821 ಫಲಾನುಭವಿಗಳಿಗೆ ಜಿ+2 ಆಶ್ರಯ ಮನೆಗಳ ಹಂಚಿಕೆ

300x250 AD

ದಾಂಡೇಲಿ: ನಗರದಲ್ಲಿ ಈಗಾಗಲೆ ನಿರ್ಮಾಣಗೊಂಡು ಮತ್ತು ನಿರ್ಮಾಣಗೊಳ್ಳುತ್ತಿರುವ ಜಿ+2 ಆಶ್ರಯ ಮನೆಗಳನ್ನು ಅರ್ಹ 821 ಫಲಾನುಭವಿಗಳಿಗೆ ಹಂಚಿಕೆ ಮಾಡುವ ಕಾರ್ಯಕ್ರಮವನ್ನು ಶುಕ್ರವಾರ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಶಾಸಕರಾದ ಆರ್.ವಿ.ದೇಶಪಾಂಡೆಯವರು ದಾಂಡೇಲಿ ನಗರದಲ್ಲಿ ಒಟ್ಟು 1100 ಅರ್ಹ ಫಲಾನುಭವಿಗಳಿಗೆ ಜಿ+2 ಆಶ್ರಯ ಮನೆಗಳನ್ನು ವಿತರಿಸುವ ನಿಟ್ಟಿನಲ್ಲಿ ಕ್ರಮವನ್ನು ಕೈಗೊಳ್ಳಲಾಗಿದ್ದು, ಅದರ ಮೊದಲ ಭಾಗವಾಗಿ ಇಂದು 821 ಫಲಾನುಭವಿಗಳಿಗೆ ಆಶ್ರಯ ಮನೆಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಿ ಹಂಚಿಕೆ ಮಾಡಲಾಗುತ್ತದೆ. ಜಿ+2 ಆಶ್ರಯ ಮನೆಗಳ ನಿರ್ಮಾಣ ಕಾರ್ಯ ಇನ್ನೂ ಪೂರ್ಣ ಪ್ರಮಾಣದಲ್ಲಿ ಮುಗಿಯದಿದ್ದರೂ, ಫಲಾನುಭವಿಗಳಿಗೆ ಅತೀ ಶೀಘ್ರದಲ್ಲಿ ತಮ್ಮ ತಮ್ಮ ಮನೆಗಳು ಸಿಗಬೇಕೆಂಬ ಉದ್ದೇಶದಿಂದ ಸಕಾಲದಲ್ಲಿ ಬ್ಯಾಂಕ್ ಸಾಲ ಮಂಜೂರಾತಿಗಾಗಿ ಹಂಚಿಕೆ ಕಾರ್ಯವನ್ನು ಮಾಡಲಾಗಿದೆ. ಆದರೆ ನಾನೆಲ್ಲಿಯೂ ಮನೆಗಳ ವಿತರಣೆ ಮಾಡುತ್ತೇನೆಂದು ಹೇಳಿಲ್ಲ. ಆದರೆ ಮಾಜಿ ಶಾಸಕರು ಮನಸೋ ಇಚ್ಚೆ ಹೇಳಿಕೆ ಕೊಡುವ ಮುನ್ನ ಆಶ್ರಯ ಮನೆ ಫಲಾನುಭವಿಗಳ ಬಗ್ಗೆ ಕಿಂಚಿತ್ತು ಯೋಚನೆ ಮಾಡಲಿಲ್ಲ. ಆಶ್ರಯ ಮನೆಗಳು ಹಂಚಿಕೆಯಾದರೇ ಮಾತ್ರ ಸಾಲ ಮಂಜೂರಾಗುತ್ತದೆ. ಸಾಲ ಮಂಜೂರಾದರೆ ಮಾತ್ರ ಆಶ್ರಯ ಮನೆಗಳ ನಿರ್ಮಾಣ ಕಾರ್ಯ ಪೂರ್ಣವಾಗುತ್ತದೆ. ಇದು ಫಲಾನುಭವಿಗಳ ಅನುಕೂಲಕ್ಕಾಗಿಯೆ ವಿನ: ಬೇರೆ ಯಾವ ಉದ್ದೇಶವೂ ಇಲ್ಲ. ಆದರೆ ಹೇಳಿಕೆಗಳನ್ನು ಕೊಡುವ ಮತ್ತು ಆರೋಪಗಳನ್ನು ಮಾಡುವ ಮುನ್ನ ಬಡವರ ಬಗ್ಗೆ ಕಿಂಚಿತ್ತು ಯೋಚನೆ ಮಾಡಬೇಕೆಂದು ಮಾಜಿ ಶಾಸಕರಾದ ಸುನೀಲ ಹೆಗಡೆಯವರ ಆರೋಪಕ್ಕೆ ತೀಕ್ಷ್ಣವಾಗಿ ತಿರುಗೇಟು ನೀಡಿದರು.
ಆರಂಭದಲ್ಲಿ ವಿಶೇಷಚೇತನರಿಗೆ ಮತ್ತು ಹಿರಿಯ ನಾಗರಿಕರಿಗೆ, ಆನಂತರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ನಂತರ ಉಳಿದೆಲ್ಲಾ ಫಲಾನುಭವಿಗಳಿಗೆ ಲಾಟರಿ ಮೂಲಕ ಮನೆಗಳ ಹಂಚಿಕೆ ಕಾರ್ಯ ನಡೆಯಿತು. ವೇದಿಕೆಯಲ್ಲಿ ನಗರಸಭೆಯ ಅಧ್ಯಕ್ಷೆ ಸರಸ್ವತಿ ರಜಪೂತ್, ಉಪವಿಭಾಗಾಧಿಕಾರಿ ಜಯಲಕ್ಷ್ಮಿ ರಾಯಕೋಡ, ಜಿಲ್ಲಾ ಪಂಚಾಯತಿ ಯೋಜನಾ ನಿರ್ದೇಶಕಿ ಸ್ಟೆಲ್ಲಾ ವರ್ಗಿಸ್, ತಹಶೀಲ್ದಾರ್ ಅಶೋಕ್ ಶಿಗ್ಗಾವಿ, ಕರ್ನಾಟಕ ಗೃಹ ಮಂಡಳಿಯ ಅಧಿಕಾರಿ ಜ್ಯೋತಿ ಉಪಸ್ಥಿತರಿದ್ದರು. ನಗರ ಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರು ಸ್ವಾಗತಿಸಿದರು. ನಗರಸಭೆಯ ಅಧಿಕಾರಿ ಮೈಕಲ್ ಫರ್ನಾಂಡಿಸ್ ವಂದಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top