Slide
Slide
Slide
previous arrow
next arrow

ಮಕ್ಕಳು ಶಿಕ್ಷಣದ ಕಡೆಗೆ ಆಸಕ್ತಿ ವಹಿಸಬೇಕು: ರವಿ ರೇಡ್ಕರ್

300x250 AD

ಜೊಯಿಡಾ: ಇಂದಿನ ಮಕ್ಕಳು ಶಿಕ್ಷಣದ ಕಡೆಗೆ ಹೆಚ್ಚು ಆಸಕ್ತಿ ವಹಿಸುತ್ತಿಲ್ಲ, ಮೊಬೈಲ್, ಟಿವಿ, ಇಂಟರ್ನೆಟ್ ಬಳಕೆ ಹೆಚ್ಚಾಗಿದೆ ಮಕ್ಕಳು ಶಿಕ್ಷಣದ ಕಡೆಗೆ ಹೆಚ್ಚಿನ ಆಸಕ್ತಿ ವಹಿಸಿ ಜೀವನದಲ್ಲಿ ಸಾಧನೆ ಮಾಡುವತ್ತ ಗಮನ ಹರಿಸಬೇಕು ಎಂದು ರಾಜ್ಯ ಕಿಸಾನ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರವಿ ರೇಡ್ಕರ್ ಹೇಳಿದರು.
ಅವರು ತಾಲೂಕಿನ ಜಗಲಬೇಟ ಪ್ರೌಢಶಾಲೆಯಲ್ಲಿ ಹಣತೆ ಎಂಬ ಪುಸ್ತಕವನ್ನು ಬಿಡುಗಡೆ ಮಾಡಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ, ಇಂದಿನ ಮಕ್ಕಳು ಮೊಬೈಲ ಮತ್ತು ಇಂಟರ್ನೆಟ್‌ಗಳಲ್ಲಿ ಮುಳುಗಿ ಹೋಗುತ್ತಿದ್ದಾರೆ. ಶಿಕ್ಷಣ ಕುಸಿಯುತ್ತಿದೆ, ಆಟೋಟಗಳು ಕಡಿಮೆಯಾಗುತ್ತಿವೆ; ಹೀಗಾಗಬಾರದು. ಇಂದಿನ ಮಕ್ಕಳು ಶಿಕ್ಷಣವನ್ನು ಉತ್ತಮವಾಗಿ ಪಡೆಯಬೇಕು. ಶಿಕ್ಷಕರ ಮತ್ತು ಹಿರಿಯರ ಮಾರ್ಗದರ್ಶನ ಪಡೆದು ಜೀವನದಲ್ಲಿ ಸಾಧನೆ ಮಾಡಬೇಕು. ನಮ್ಮ ತಾಲೂಕಿನಲ್ಲಿ ಶಿಕ್ಷಣದ ಪ್ರಮಾಣ ಕಡಿಮೆ ಇದೆ ಆದರೂ ಸದ್ಯ ತಾಲೂಕಿನಲ್ಲಿ ಎಸ್.ಎಸ್.ಎಲ್.ಸಿಯಲ್ಲಿ ಉತ್ತಮ ಫಲಿತಾಂಶ ಬರುತ್ತಿದೆ. ಮಕ್ಕಳು ಹೆಚ್ಚಿನ ಅಂಕ ಪಡೆಯುವುದರ ಜೊತೆಗೆ ಸಾಮಾನ್ಯ ಜ್ಞಾನವನ್ನು ಪಡೆದುಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಶಿಕ್ಷಕರಾದ ಸದಾನಂದ ಗಾವಡಿ, ಗಿರೀಶ ಕೋಟೆಮನೆ, ಕಾಳಿ ಬ್ರಿಗೇಡ್ ಸದಸ್ಯರಾದ ವಿನಾಯಕ ಕರಂಜೊಳಕರ್ ಹಾಗೂ ದಿನೇಶ್ ದೇಸಾಯಿ, ಹಿರಿಯ ನಿವೃತ್ತ ಶಿಕ್ಷಕ ದಾಮಾಜಿ ಬಿರಜೆ ಇತರರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top