ಕುಮಟಾ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಜ್ಞಾನ ವಿಕಾಸ ಕಾರ್ಯಕ್ರಮದ ಅಡಿಯಲ್ಲಿ ಮಹಿಳಾ ವಿಚಾರಗೋಷ್ಠಿ ಹಾಗೂ ಮಹಿಳಾ ಸಮಾವೇಶ ಇಲ್ಲಿನ ಶ್ರೀಕ್ಷೇತ್ರ ಶಾಂತಿಕಾ ಸಭಾಭವನದಲ್ಲಿ ವಿಜೃಂಭಣೆಯಿoದ ನೆರವೇರಿತು.
ಉಡುಪಿಯ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ವಸಂತ ಸಾಲ್ಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹಲವಾರು ಕಾರ್ಯಕ್ರಮಗಳ ಬಗ್ಗೆ ಸವಿಸ್ತಾರವಾಗಿ ವಿವರಿಸಿ, ಮಹಿಳೆಯರು ದುರ್ಬಲರಲ್ಲ; ಪ್ರಬಲರು. ಮಹಿಳೆಯರು ಯಾವ ಪುರುಷರಿಗೂ ಕಡಿಮೆ ಇಲ್ಲ. ಸಾಮಾನ್ಯ ಮನೆ ಕೆಲಸದಿಂದ ಹಿಡಿದು ಉನ್ನತ ಮೇಲ್ದರ್ಜೆಯ ಕೆಲಸದವರೆಗೂ ಮಹಿಳೆಯರು ಏನು ಬೇಕಾದರೂ ಸಾಧಿಸಬಹುದು ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿ ಮಮತಾ ಮಾತನಾಡಿ, ಮಹಿಳೆಯರು ಕುಟುಂಬದ ನಿರ್ವಹಣೆ ಹೇಗೆ ಮಾಡಬೇಕು ಮತ್ತು ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಯಾವ ರೀತಿ ಬಹುಮುಖ್ಯ ಪಾತ್ರ ವಹಿಸುತ್ತಾರೆ ಎನ್ನುವುದರ ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಪುರಸಭೆಯ ಅಧ್ಯಕ್ಷೆ ಅನುರಾಧ ಬಾಳೇರಿ ಮಾತನಾಡಿ, ಮಹಿಳೆಯರು ಸಂಸಾರದ ಕಣ್ಣು. ಮಹಿಳೆಯರು ದಿನವಿಡೀ ಹೊರಗಡೆ ಕೆಲಸವನ್ನು ಮಾಡುತ್ತಾ ಹೇಗೆ ಮನೆಯನ್ನು ನಡೆಸುತ್ತಾರೆ. ಇದಕ್ಕೆ ಧ.ಗ್ರಾ.ಯೋಜನೆಯು ಕೂಡ ಯಾವ ರೀತಿ ಪೂರಕವಾಗಿ ನಿಂತಿದೆ ಎಂಬುದರ ಕುರಿತು ವಿವರಣೆ ನೀಡಿದರು.
ಕಾರ್ಯಕ್ರಮವನ್ನು ಬಾಡ ವಲಯದ ಮೇಲ್ವಿಚಾರಕ ಕೇಶವ ನಿರ್ವಹಿಸಿದರು. ತಾಲೂಕಿನ ಯೋಜನಾಧಿಕಾರಿ ಕಲ್ಮೇಶ್ ಎಮ್. ಅವರು ಸ್ವಾಗತಿಸಿದರು ಹಾಗೂ ಜ್ಞಾನವಿಕಾಸ ಸಮನ್ವಾಧಿಕಾರಿ ವೀಣಾ ವಂದಿಸುತ್ತಾ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅನುವು ಮಾಡಿಕೊಟ್ಟರು. ತಾಲೂಕು ಆರೋಗ್ಯಾಧಿಕಾರಿ ಡಾ.ಆಜ್ಞಾ ನಾಯಕ, ಪುರಸಭೆಯ ಮುಖ್ಯಾಧಿಕಾರಿ ಅಜಯ ಭಂಡಾರಕರ, ಸಂಪನ್ಮೂಲ ವ್ಯಕ್ತಿಗಳಾಗಿ ಮಮತಾ ನಾಯ್ಕ, ಜಿಲ್ಲಾ ಜನಜಾಗೃತಿ ಸಮಿತಿ ಸದಸ್ಯರಾದ ದಯಾನಂದ ದೇಶಭಂಡಾರಿ, ಯೋಗಾನಂದ ಗಾಂಧಿ, ಸಮಿತಿಯ ಮಾಜಿ ಅಧ್ಯಕ್ಷ ವಾಸುದೇವ ನಾಯಕ ಉಪಸ್ಥಿತರಿದ್ದರು.
ಮೂರು ರೀತಿಯ ಸಾಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿದ್ದು, ಪುಷ್ಪಗುಚ್ಛ ಸ್ಫರ್ಧೆ, ನೃತ್ಯ ಮತ್ತು ಕೋಲಾಟ ಸ್ಫರ್ಧೆ, ದೇವಗಿತೆ ಮತ್ತು ಧ್ಯೇಯಗೀತೆ ಸ್ಫರ್ಧೆ, 60 ವರ್ಷ ಮೇಲ್ಪಟ್ಟ ಮಹಿಳೆಯರು ಕೂಡ ಸ್ವಇಚ್ಛೆಯಿಂದ ಎಲ್ಲಾ ಸ್ಫರ್ಧೆಗಳಲ್ಲಿ ಭಾಗವಹಿಸಿದರು.
ಯಕ್ಷಗಾನ ಕಾರ್ಯಕ್ರಮವು ಎಲ್ಲರ ತನುಮನ ಸೆಳೆಯಿತು. ಪುಷ್ಫಗುಚ್ಚ ಸ್ಫರ್ಧೆಯಲ್ಲಿ ಶಿವಗಂಗಾ ಜ್ಞಾನ ವಿಕಾಸ ಕೇಂದ್ರ ಸಿವಗಿ ಪ್ರಥಮ ಸ್ಥಾನ, ರತ್ನಮ್ಮ ಜ್ಞಾನ ವಿಕಾಸ ಕೇಂದ್ರ ಬರ್ಗಿ ದ್ವಿತೀಯ ಸ್ಥಾನ, ಮಾತೃಶ್ರೀ ಜ್ಞಾನ ವಿಕಾಸ ಕೇಂದ್ರ ಕೋಡ್ಕಣಿ ತೃತೀಯ ಸ್ಥಾನ ಪಡೆದರು. ನೃತ್ಯ ಮತ್ತು ಕೋಲಾಟ ಸ್ಫರ್ಧೆಯಲ್ಲಿ ದಿವ್ಯಜ್ಯೋತಿ ಜ್ಞಾನ ವಿಕಾಸ ಕೇಂದ್ರ ತಾರಿಬಾಗಿಲು (ಪ್ರಥಮ ಸ್ಥಾನ), ಖುಷಿ ಜ್ಞಾನ ವಿಕಾಸ ಕೇಂದ್ರ ಸಿದ್ದನಬಾವಿ (ದ್ವಿತೀಯ ಸ್ಥಾನ), ಶಿವಗಂಗಾ ಜ್ಞಾನ ವಿಕಾಸ ಕೇಂದ್ರ ದೀವಗಿ ತೃತೀಯ ಸ್ಥಾನ ಪಡೆದರು.
ದೇವಗೀತೆ ಮತ್ತು ಧ್ಯೇಯಗೀತೆ ಸ್ಫರ್ಧೆಯಲ್ಲಿ ಖುಷಿ ಜ್ಞಾನ ವಿಕಾಸ ಕೇಂದ್ರ ಸಿದ್ದನಬಾವಿ ಪ್ರಥಮ, ಶಿವಗಂಗಾ ಜ್ಞಾನ ವಿಕಾಸ ಕೇಂದ್ರ ದ್ವಿತೀಯ, ಮಾತೃಛಾಯ ಜ್ಞಾನವಿಕಾಸ ಕೇಂದ್ರ ತೃತೀಯ ಸ್ಥಾನವನ್ನು ಪಡೆದರು. ಎಲ್ಲರಿಗೂ ಬಹುಮಾನವನ್ನು ವಿತರಣೆ ಮಾಡುವುದರು ಮೂಲಕ ಕಾರ್ಯಕ್ರಮವನ್ನು ಪೂರ್ಣಗೊಳಿಸಲಾಯಿತು.