ಭಟ್ಕಳ: ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಬುಲೆರೋ ವಾಹನವನ್ನು ವಶಕ್ಕೆ ಪಡೆದ ಘಟನೆ ಇಲ್ಲಿನ ನಗರ ಠಾಣೆಯ ವ್ಯಾಪ್ತಿಯ ಬಂದರ್ ರಸ್ತೆ ಡೊಂಗರಪಟ್ಟಿ ಕ್ರಾಸ್ ಬಳಿ ನಡೆದಿದೆ.
ಬಂದರ್ ರಸ್ತೆ ಡೊಂಗರಪಟ್ಟಿ ಕ್ರಾಸ್ ಹತ್ತಿರ ಯಾರಿಗೂ ಅನುಮಾನ ಬರದಂತೆ ಮೇಲ್ಗಡೆ ಹುಲ್ಲನ್ನು ತುಂಬಿಕೊoಡು ಮಾಂಸವನ್ನು ಮಾರಾಟ ಮಾಡುವ ಉದ್ದೇಶದಿಂದ ಗೋ ಮಾಂಸವನ್ನು ವಧೆ ಮಾಡಿ ಸುಮಾರು 1,40,000/ ರೂಪಾಯಿ ಮೌಲ್ಯದ ಸುಮಾರು 700 ಕೆ.ಜಿ ಆಗುವಷ್ಟು ಮಾಂಸವನ್ನು ಕಟಾವು ಮಾಡಿ ಯಾವುದೇ ಪರವಾನಗಿ ಇಲ್ಲದೇ ಸಾಗಾಟ ಮಾಡುವಾಗ ಪೊಲೀಸರು ಅನುಮಾನಗೊಂಡು ವಾಹನವನ್ನು ತಡೆದು ಪರಿಶೀಲಿಸಿದಾಗ ಗೋಮಾಂಸ ಪತ್ತೆಯಾಗಿದೆ. ಆರೋಪಿ ಬುಲೆರೋ ಚಾಲಕ, ಮೂಸಾನಗರ ನಿವಾಸಿ ಮುಜಫರ್ ಫಕ್ರು ವಾಹನವನ್ನು ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದು, ತನಿಖೆ ಮುಂದುವರಿಸಿದ್ದಾರೆ.
ಗೋಮಾಂಸ ಸಾಗಾಟ; ಆರೋಪಿ ಪರಾರಿ
