Slide
Slide
Slide
previous arrow
next arrow

ಸಿದ್ದರಾಮಯ್ಯನವರು ಬಂದು ಹೋದಲ್ಲೆಲ್ಲಾ ನಾವು ಗೆದ್ದಿದ್ದೇವೆ: ಸಚಿವ ಪೂಜಾರಿ

300x250 AD

ಕಾರವಾರ: ಸಿದ್ದರಾಮಯ್ಯನವರು ಬಂದು ಹೋದಲ್ಲೆಲ್ಲಾ ನಾವು ಗೆದ್ದಿದ್ದೇವೆ. ಹೀಗಾಗಿ ಅವರು ನಮ್ಮ ಜಿಲ್ಲೆಗೆ ಬರಲಿ ಅನ್ನೋದೇ ನಮ್ಮ ಹರಕೆ. ಅವರದೇ ಆದ ವೇದಿಕೆಯಲ್ಲಿ ಭಾಷಣ ಮಾಡಿ ಎಲ್ಲರಿಗೂ ಬೈದು ಹೋಗುತ್ತಾರೆ. ಇದು ನಮ್ಮ ಗೆಲುವಿಗೆ ಸಹಕಾರಿಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ಹೇಳಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉತ್ತರ ಕನ್ನಡ ಜಿಲ್ಲೆಗೆ ವಿಧಾನಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಚಾರಕ್ಕಾಗಿ ಆಗಮಿಸುತ್ತಿದ್ದು, ಈ ವಿಚಾರವಾಗಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಕಾರವಾರದಲ್ಲಿ ಅವರು ಪ್ರತಿಕ್ರಿಯಿಸಿದರು. ಇನ್ನು ಸಚಿವ ನಾರಾಯಣ ಗೌಡ ಕಾಂಗ್ರೆಸ್‌ಗೆ ವಾಪಸ್ಸಾಗುವ ವಿಚಾರವಾಗಿ ಮಾತನಾಡಿದ ಅವರು, ನಾರಾಯಣ ಗೌಡ ಸೇರಿ ಉಳಿದವರೆಲ್ಲರೂ ನಮ್ಮ ಪಕ್ಷಕ್ಕೆ ಬೆನ್ನೆಲುಬಾಗಿ, ಗೆದ್ದು ಅಧಿಕಾರ ನಡೆಸಿದ್ದಾರೆ. ಅವರು ಬಿಜೆಪಿ ಬಿಟ್ಟು ಹೋಗಲ್ಲ ಎನ್ನುವ ನಂಬಿಕೆ ಇದೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ, ಒಟ್ಟಾಗಿ ಸರ್ಕಾರವನ್ನ ನಡೆಸುತ್ತಿದ್ದೇವೆ. ಮತ್ತೆ ಈ ಚುನಾವಣೆಯಲ್ಲಿ ನಿಶ್ಚಯವಾಗಿ ಬಹುಮತವನ್ನ ಪಡೆಯುತ್ತೇವೆ. ಯಾರೂ ಸಹ ಪಕ್ಷ ಬಿಡುತ್ತೇವೆ ಎಂದು ಹೇಳಿಲ್ಲ. ಕೇವಲ ಮಾಧ್ಯಮಗಳಲ್ಲಿ ಅವರ ಬಗ್ಗೆ ಊಹಾಪೋಹಗಳು ಬರುತ್ತಿವೆ, ಎಲ್ಲವೂ ಸರಿಯಾಗತ್ತೆ. ಅವರು ನಮ್ಮ ಜೊತೆ ಇದ್ದಾರೆ, ನಮ್ಮ ಜೊತೆಗೇ ಇರ್ತಾರೆ ಎನ್ನುವ ವಿಶ್ವಾಸ ನಮಗಿದೆ ಎಂದರು.
ಶಾಸಕಿ ರೂಪಾಲಿ ನಾಯ್ಕಗೆ ಜೀವ ಬೆದರಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಯಾವ ಬೆದರಿಕೆಗೂ ಬಗ್ಗಬೇಡಿ ಎನ್ನುವುದು ನಮ್ಮ ಅಭಿಪ್ರಾಯ, ಅವರು ಬಗ್ಗುವುದೂ ಇಲ್ಲ. ಒಬ್ಬ ಮಹಿಳೆಯಾಗಿ ಬಡವರ, ದುರ್ಬಲರ, ಧ್ವನಿ ಇಲ್ಲದೇ ಇದ್ದ ಜನರ ಪರವಾಗಿ ಅವರು ಕೆಲಸ ಮಾಡುತ್ತಿದ್ದಾರೆ. ಅವರ ರಾಜಕೀಯ ಚಟುವಟಿಕೆಗಳು, ಏಳಿಗೆಗಳನ್ನ ಕಂಡು ವಿರೋಧ ಪಕ್ಷದವರು ಟೀಕೆ ಮಾಡುತ್ತಾರೆ. ನಮಗೆ ಭರವಸೆ ಇದೆ, ಕಾರವಾರದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಲಿದೆ. ವಿರೋಧ ಪಕ್ಷಗಳ ಟೀಕೆ, ಟಿಪ್ಪಣಿಗಳಿಗೆ ನಾವು ಉತ್ತರ ಕೊಡುತ್ತೇವೆ. ಯಾವ ಬೆದರಿಕೆಗೂ ಜಗ್ಗುವ ಮಾತೇ ಇಲ್ಲ, ಸೂಕ್ತ ಭದ್ರತೆಯನ್ನ ಅವರಿಗೆ ಒದಗಿಸುತ್ತೇವೆ. ಮಹಿಳೆಯಾಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ, ಶಾಸಕಿಯಾಗಿ ರೂಪಾಲಿ ಯಶಸ್ವಿಯಾಗಿದ್ದಾರೆ. ಬೆದರಿಕೆ ಇರುವ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ, ಅಗತ್ಯ ಕ್ರಮ ಕೈಗೊಳ್ಳುತ್ತಾರೆ. ಯಾವುದೇ ತೊಂದರೆಯಾಗಲ್ಲ ಎಂದರು.
ಇನ್ನು ಎರಡು- ಮೂರು ಬಾರಿ ಶಾಸಕರಾದವರಿಗೆ ಟಿಕೆಟ್ ಕೈತಪ್ಪುವ ವಿಚಾರಕ್ಕೆ, ಎಲ್ಲಾ ಕ್ಷೇತ್ರಗಳಲ್ಲೂ ಒಂದಕ್ಕಿoತ ಹೆಚ್ಚು ಆಕಾಂಕ್ಷಿಗಳಿರುವುದು ಸಹಜ. ರಾಜ್ಯಾಧ್ಯಕ್ಷರು, ಕೇಂದ್ರದ ನಾಯಕರು ಈಗಾಗಲೇ ಸಮೀಕ್ಷೆಯನ್ನ ಮಾಡುತ್ತಿದ್ದಾರೆ. ಗೆಲುವು, ಶಾಸಕರ ಕಾರ್ಯವೈಖರಿ ಸೇರಿ ಎಲ್ಲವನ್ನೂ ಗಮನದಲ್ಲಿಟ್ಟುಕೊಂಡು ಟಿಕೆಟ್ ಹಂಚಿಕೆ ಮಾಡಲಾಗುತ್ತದೆ. ಬಹುತೇಕ ಒಳ್ಳೆಯ ಕೆಲಸ ಮಾಡಿದ ಶಾಸಕರಿಗೆ, ಜನಪ್ರಿಯತೆ ಉಳಿಸಿಕೊಂಡವರಿಗೆ ಯಾವುದೇ ತೊಂದರೆಯಾಗಲ್ಲ ಎನ್ನುವ ವಿಶ್ವಾಸವಿದೆ ಎಂದರು.

300x250 AD
Share This
300x250 AD
300x250 AD
300x250 AD
Back to top