Slide
Slide
Slide
previous arrow
next arrow

ಲಲಿತ ಕಲೆಗಳ ಮೂಲಕ ಭಟ್ಕಳದ ಕೀರ್ತಿ ಪಸರಿಸಿದ ಹೆಗ್ಗಳಿಕೆ ಝೇಂಕಾರದ್ದು: ಡಾ.ಸವಿತಾ ಕಾಮತ

300x250 AD

ಭಟ್ಕಳ: ಶ್ರೀಮಂತ ವರ್ಗದವರು ಮಾತ್ರ ಕಲಿಯುತ್ತಿದ್ದ ಲಲಿತಕಲಾ ಕಲಿಕೆಗಳನ್ನು ಸಾಮಾನ್ಯ ಬಡ ವರ್ಗದವರು ಕಲಿಯುವಂತೆ ಮಾಡಿದ ಝೇಂಕಾರ ಸಂಸ್ಥೆಯ ಕಾರ್ಯ ಶ್ಲಾಘನಾರ್ಹ ಎಂದು ಸರಕಾರಿ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಸವಿತಾ ಕಾಮತ ಅಭಿಪ್ರಾಯಪಟ್ಟರು.
ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಶ್ರಯದಲ್ಲಿ ಜರುಗಿದ ಝೇಂಕಾರ ಸಾಂಸ್ಕೃತಿಕ ಸಂಭ್ರಮ ಉದ್ಘಾಟಿಸಿ ಮಾತನಾಡಿ, ಲಲಿತ ಕಲೆಗಳ ಮೂಲಕ ಭಟ್ಕಳದ ಕೀರ್ತಿಯನ್ನು ರಾಜ್ಯ ಮಟ್ಟಕ್ಕೆ ಪಸರಿಸಿದ ಹೆಗ್ಗಳಿಕೆ ಝೇಂಕಾರ ಸಂಸ್ಥೆಗೆ ಸಲ್ಲುತ್ತದೆ ಎಂದರು.
ಸoಜಯ ಗುಡಿಗಾರ ನಿರ್ದೇಶನದಲ್ಲಿ ಏರ್ಪಡಿಸಿದ ಚಿತ್ರಕಲಾ ಪ್ರದರ್ಶನವನ್ನು ಶಿರಾಲಿಯ ಸಮಾಜ ಸೇವಕ ವಿಷ್ಣು ಶ್ಯಾನಭಾಗ ಉದ್ಘಾಟಿಸಿ ಮಾತನಾಡಿದರು. ಕಲಾ ಶಿಕ್ಷಕ ಸಂಜಯ ಗುಡಿಗಾರ ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ಪ್ರಸಕ್ತ ಸಾಲಿನಲ್ಲಿ ಝೇಂಕಾರ ಸಂಸ್ಥೆಯ ವಿದ್ಯಾರ್ಥಿಗಳು ಮಾಡಿದ ಸಾಧನೆಯನ್ನು ಸಭೆಯಲ್ಲಿ ವಿವರಿಸಿದರು.
ಪ್ರಾಂಶುಪಾಲ ಎ.ಬಿ.ರಾಮರಥ ಮಾತನಾಡಿ, ಮೊಬೈಲ್ ನೋಡಿ ಸಮಯ ವ್ಯರ್ಥ ಮಾಡುವ ಮಕ್ಕಳ ಮನಸ್ಸಿನಲ್ಲಿ ಸಂಗೀತ ನೃತ್ಯ ಕಲೆಗಳ ಮೇಲೆ ಆಸಕ್ತಿ ಮೂಡಿಸುವ ಕೆಲಸ ಝೇಂಕಾರ ಕಲಾ ಸಂಘ ಮಾಡುತ್ತಿದೆ ಎಂದರು. ಸಂಸ್ಥೆಯ ಅಧ್ಯಕ್ಷ ಪ್ರಸನ್ನ ಪ್ರಭು ತಮ್ಮ ಅಧ್ಯಕ್ಷೀಯ ಮಾತುಗಳನ್ನಾಡುತ್ತಾ, ಲಲಿತ ಕಲೆಗಳು ವಿದ್ಯಾರ್ಥಿಗಳ ಏಕಾಗ್ರತೆಯನ್ನು ಹೆಚ್ಚಿಸುವ ಮೂಲಕ ಶಿಕ್ಷಣಕ್ಕೂ ಸಹಕಾರಿಯಾಗಿವೆ ಎನ್ನುತ್ತಾ, ಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಕರೆನೀಡಿದರು.
ಮೃದಂಗ ವಾದಕ ಪದ್ಮರಾಜ ಭಟ್ಟ ಕಲಾ ಸೇವೆಯನ್ನು ಗುರುತಿಸಿ ಝೇಂಕಾರ ಕಲಾಶ್ರೀ- 2023 ಪ್ರಶಸ್ತಿಯನ್ನು ನೀಡಿ ಪುರಸ್ಕರಿಸಲಾಯಿತು. ಸಾಮಾಜಿಕ ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಸೇವೆಯನ್ನು ಗುರುತಿಸಿ ಬಹುಮುಖ ಪ್ರತಿಭೆಯ ಕಲಾವಿದೆ ಡಾ.ಸವಿತಾ ಕಾಮತ ಅವರನ್ನೂ ಗೌರವಿಸಿ ಸನ್ಮಾನಿಸಲಾಯಿತು. ಸಭಾ ಕಾರ್ಯಕ್ರಮದ ನಂತರ ಜರುಗಿದ ನೃತ್ಯ ವಿದೂಷಿ ನಯನಾ ಪ್ರಸನ್ನ ನಿರ್ದೇಶನದ ಭರತನಾಟ್ಯ ನೃತ್ಯ ರೂಪಕಗಳು ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ಕಲಾಸಕ್ತರ ಮನರಂಜಿಸಿತು. ಸಂಸ್ಥೆಯ ಸದಸ್ಯರಾದ ರಾಮದಾಸ ದೇವಾಡಿಗ ಸ್ವಾಗತಿಸಿದರು. ಸಂಜಯ ಗುಡಿಗಾರ ಹಾಗೂ ನಯನಾ ಪ್ರಸನ್ನ ಕಾರ್ಯಕ್ರಮವನ್ನು ನಿರ್ವಹಿಸಿದರು.

300x250 AD
Share This
300x250 AD
300x250 AD
300x250 AD
Back to top