• Slide
    Slide
    Slide
    previous arrow
    next arrow
  • ಬಿಇಎಲ್‌ನಿಂದ ಆರೋಗ್ಯ ಸೇವೆಗೆ ಬಹುದೊಡ್ಡ ಕೊಡುಗೆ: ಶಾಸಕ ದಿನಕರ ಶೆಟ್ಟಿ

    300x250 AD

    ಕುಮಟಾ: ತಾಲೂಕಿನ ಜನತೆಗೆ ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪನಿಯು ಆರೋಗ್ಯ ಸೇವೆಗೆ ಬಹುದೊಡ್ಡ ಕೊಡುಗೆ ನೀಡಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.
    ಪಟ್ಟಣದ ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ ಮತ್ತು ಆಘಾತ ಚಿಕಿತ್ಸಾ ಘಟಕದ ನೂತನ ಕಟ್ಟಡ ನಿರ್ಮಾಣದ ಭೂಮಿಪೂಜೆ ನೆರವೇರಿಸಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಿಇಎಲ್ ಅಪಘಾತದಲ್ಲಿ ಮೂಳೆ ಮುರಿತ, ಶಸ್ತ್ರಚಿಕಿತ್ಸೆಗೆ ಅನುಕೂಲವಾಗುವಂತೆ ಟ್ರೋಮಾ ಸೆಂಟರ್, ಶಸ್ತ್ರಚಿಕಿತ್ಸೆ ಹಾಗೂ ವಿವಿಧ ಪರೀಕ್ಷೆಗಳನ್ನು ನಡೆಸಲು ಉಪಕರಣಗಳ ಖರೀದಿಗೆ ಒಟ್ಟು 2.73 ಕೋಟಿ ರೂ. ಮಂಜೂರು ಮಾಡಿದೆ. ಕಂಪನಿಯಿಂದ ಈ ಕೊಡುಗೆ ಪಡೆಯಲು ನಾನು ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಗಣೇಶ ನಾಯ್ಕ ಅವಿರತ ಪ್ರಯತ್ನ ಮಾಡಿದ್ದೇವೆ. ಬಿಇಎಲ್ ಸಹ ನಮ್ಮ ಪ್ರಯತ್ನಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದೆ. ಇಂತಹ ಸಂಸ್ಥೆಗಳ ವಿಶೇಷ ಕಾಳಜಿಯಿಂದ ರೋಗಿಗಳಿಗೆ ಕೇವಲ 150 ರೂ.ಗಳಲ್ಲಿ ವಿಶೇಷ ಪರಿಕ್ಷೆಗಳನ್ನು ಸಾಧ್ಯವಾಗಲಿದೆ. ವೈಜ್ಞಾನಿಕ ಉಪಕರಣಗಳ ಸಮರ್ಪಕ ಬಳಕೆಗಾಗಿ ನ್ಯೂರೋ, ಓರ್ಥೋ ವೈದ್ಯರನ್ನು ತರುವ ಪ್ರಯತ್ನವೂ ನಡೆಯಬೇಕಾಗಿದೆ ಎಂದರು.
    ಭಾರತ ಎಲೆಕ್ಟ್ರಾನಿಕ್ಸ್ ಲಿ.ನ ಡಾ.ಶಶಿಭೂಶಣ ಹೆಗಡೆ ಮಾತನಾಡಿ, ಬಿಇಎಲ್ ಸಾಮಾಜಿಕ ಹೊಣೆಗಾರಿಕೆ ನಿಟ್ಟಿನಲ್ಲಿ ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಆಪಾರ ಕೊಡುಗೆ ನೀಡುತ್ತಿದೆ. ದೇಶದ ರಕ್ಷಣಾ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆ ದೇಶದ 9 ಘಟಕಗಳಲ್ಲಿ ಇಂತಹ ಸಾಮಾಜಿಕ ಚಟುವಟಿಕೆಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಸಾರ್ವಜನಿಕ ಬೇಡಿಕೆಗಳನ್ನು ಪ್ರಾಶಸ್ತ್ಯದ ಮೇರೆಗೆ ಪರಿಗಣಿಸಲಾಗುತ್ತದೆ. ಕುಮಟಾದಲ್ಲಿ ಇದರ ಅವಶ್ಯಕತೆ ಇರುವುದರಿಂದ ಮುಂದಿನ 15 ತಿಂಗಳಲ್ಲಿ ಈ ಆರೋಗ್ಯ ಕೇಂದ್ರ ಸಜ್ಜಾಗಿ ನಿಲ್ಲಲಿದೆ ಎಂದರು.
    ಡಾ.ಜಿ.ಜಿ.ಹೆಗಡೆ ಮಾತನಾಡಿ ಕೇವಲ ಆಸ್ಪತ್ರೆ ಕಟ್ಟದರೆ ಸಾಲದು. ನುರಿತ ಸಿಬ್ಬಂದಿ ವೈದ್ಯರುಗಳು ಬೇಕು. ಟ್ರೋಮಾ ಸೆಂಟರ್‌ನಿಂದ ಜನರರಿಗೆ ಪ್ರಯೋಜನವಾಗಲಿ ಎಂದರು.
    ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಗಣೇಶ ನಾಯ್ಕ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿ, ತುರ್ತು ಸಂದರ್ಭಗಳಲ್ಲಿ ಆಸ್ಪತ್ರೆಯಲ್ಲಿ ಬೆಡ್‌ಗಳ ಕೊರತೆಯಾಗುತ್ತಿತ್ತು. ಇನ್ನುಮುಂದೆ ಈ ಸಮಸ್ಯೆ ಪರಿಹಾರಗೊಳ್ಳಲಿದೆ ಎಂದರು. ಪುರಸಭೆ ಅಧ್ಯಕ್ಷೆ ಅನುರಾಧಾ ಭಾಳೇರಿ ಶುಭ ಕೋರಿದರು. ರವಿಕಾಂತ ಬಿಜೆಪಿ ಮಂಡಳಾಧ್ಯಕ್ಷ ಹೇಮಂತ ಗಾಂವಕರ, ಪ್ರಶಾಂತ ನಾಯ್ಕ, ಜಿ.ಐ.ಹೆಗಡೆ, ನಾರಾಯಣ ಉಡದಂಗಿ ಮೊದಲಾದವರು ಇದ್ದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top