ಯಲ್ಲಾಪುರ: ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಬುಧವಾರ ಗ್ರಾಮದೇವಿ ಜಾತ್ರೆಗೆ ಆಗಮಿಸಿದ್ದು, ಗ್ರಾಮದೇವಿ ಗದ್ದುಗೆಯಲ್ಲಿ ದೇವಿಯರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಗ್ರಾಮದೇವಿ ದೇವಸ್ಥಾನದ ಆಡಳಿತ ಮಂಡಳಿಯವರು ದೇಶಪಾಂಡೆಯವರನ್ನು ಗೌರವಿಸಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ರಾಜೇಂದ್ರಪ್ರಸಾದ ಭಟ್ಟ, ಪ್ರಧಾನ ಅರ್ಚಕ ಪರಶುರಾಮ ಆಚಾರಿ, ಆಯಗಾರ ಮುಖ್ಯಸ್ಥ ಮನೋಹರ ಹೆಗಡೆ, ಮಾಜಿ ಶಾಸಕ ವಿ.ಎಸ್. ಪಾಟೀಲ, ಪ್ರಮುಖರಾದ ಶ್ರೀನಿವಾಸ ಭಟ್ಟ, ದೀಪಕ ದೊಡ್ಡೂರು, ಡಿ.ಎನ್.ಗಾಂವ್ಕರ, ಉಲ್ಲಾಸ ಶಾನಭಾಗ ಇದ್ದರು.