Slide
Slide
Slide
previous arrow
next arrow

ರಾಜಕಾರಣಿಗಳು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ: ಶಿವಲಿಂಗ ಮಹಾಸ್ವಾಮಿ

300x250 AD

ಮುಂಡಗೋಡ: ವೀರಶೈವರು ಒಗ್ಗಟ್ಟಾದರೆ ತಮಗೆ ರಾಜಕೀಯ ಭವಿಷ್ಯವಿಲ್ಲ ಎಂದ ಅರಿತಿರುವ ರಾಜಕಾರಣಿಗಳು ನಮ್ಮನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಶಿರಸಿಯ ಬಣ್ಣದಮಠ, ಚೌಕಿಮಠದ ಮ.ನಿ.ಪ್ರ ಶಿವಲಿಂಗ ಮಹಾಸ್ವಾಮಿಗಳು ಹೇಳಿದರು.

ಅವರು ಪಟ್ಟಣದ ವಿವೇಕಾನಂದ ಮಂಟಪದಲ್ಲಿ ಬೇಡಜಂಗಮ ಜಿಲ್ಲಾ ಒಕ್ಕೂಟ ಸಮಾವೇಶದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು. ನಮ್ಮಲ್ಲಿದ್ದಾಗ ನಮ್ಮ ಜನಾಂಗದ ಮಕ್ಕಳ ಶಿಕ್ಷಣಕ್ಕೆ ಸಮಾಜ ಉದ್ದಾರಕ್ಕೆ ವಿನಿಯೋಗಿಸುವಂತ ಕಾರ್ಯನಡೆಯಬೇಕು. ಚುನಾವಣೆಯ ತಮ್ಮ ಗೆಲುವಿಗಾಗಿ ನಮ್ಮನ್ನು ಉಪಯೋಗಿಸಿಕೊಂಡು ಅಧಿಕಾರಕ್ಕೆ ಬಂದಮೇಲೆ ನಮ್ಮ ಮರೆಯುವ ರಾಜಕಾರಣಿಗಳಿಗೆ ಬುದ್ದಿ ಕಲಿಸಬೇಕು. ನಮ್ಮ ಜನಾಂಗದ ಕೆಲಸ ಮಾಡುವ ರಾಜಕಾರಣಿಗಳಿಗೆ ಮತ ಚಲಾಯಿಸಬೇಕು ಎಂದರು.
ಗೋಕರ್ಣದ ಹನ್ನೆರಡು ಮಠದ ರೇವಣಸಿದ್ದ ಶಿವಾಚಾರ್ಯ ಶ್ರೀಗಳು ಮುಂಡಗೋಡದ ಹನಮಾಪುರ ಮಠದ ಸೋಮಶೇಖರ ಶಿವಾಚಾರ್ಯ ಶ್ರೀಗಳು ಆಶೀರ್ವಚನ ನೀಡಿದರು.
ಸಚಿವ ಶಿವರಾಮ ಹೆಬ್ಬಾರ್ ಮಾತನಾಡಿ, ತಮ್ಮ ಮೀಸಲಾತಿ ನೀಡುವ ಕುರಿತು ನಾನು ಮತ್ತು ಶಾಸಕ ರೇಣುಕಾಚಾರ್ಯ ಜತೆಗೂಡಿ ಸಿ.ಎಂ ಬಸವರಾಜ ಬೊಮ್ಮಾಯಿ ಜತೆ ಮಾತನಾಡಿ ತಮ್ಮ ಸಮಸ್ಯೆ ಇತ್ಯರ್ಥ ಬಗ್ಗೆ ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಪಂಚಾಕ್ಷರಿ ಹಿರೇಮಠ ಪ್ರಾರ್ಥಿಸಿದರು ಉತ್ತರಕನ್ನಡ ಜಿಲ್ಲಾಧ್ಯಕ್ಷ ಸಿದ್ದಾಪುರದ ಪರಮೇಶ್ವರಯ್ಯ ಕಾನಳ್ಳಿಮಠ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದ ನಿರೂಪಣೆ ಬಸಯ್ಯ ನಾಗಶೆಟ್ಟಿಕೊಪ್ಪ ಮಾಡಿದರು. ಈ ಸಂದರ್ಭದಲ್ಲಿ ರುದ್ರಮುನಿ ಹಿರೇಮಠ, ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಹೇಮಲತಾ ಹಿರೇಮಠ, ಗೌರವಾಧ್ಯಕ್ಷ ಎಸ್.ಬಿ.ಹಿರೇಮಠ, ತಾಲುಕಾಧ್ಯಕ್ಷ ಮಂಜಯ್ಯ ಹಿರೇಮಠ, ಬಸಯ್ಯ ನಡುವಿನಮನಿ, ಬಿ.ಸಿ. ಹಿರೇಮಠ, ಬಸವರಾಜ ಓಶಿಮಠ, ಶರಣಬಸಯ್ಯ ನಡುವಿನಮನಿ, ಮಲ್ಲಿಕಾರ್ಜುನ ಉಪ್ಪಿನಮಠ, ಶಿವದೇವ ದೇಸಾಯಿ ಸ್ವಾಮಿಜಿ, ಶರಣಬಸಯ್ಯ ಹಿರೇಮಠ (ರಾಯಚೂರ) ಹಾಗೂ ಮುಂತಾದವರು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top