Slide
Slide
Slide
previous arrow
next arrow

ಮಟ್ಕಾ ಆಡಿಸುತ್ತಿದ್ದ ವ್ಯಕ್ತಿ ಪೊಲೀಸರ ವಶಕ್ಕೆ

300x250 AD

ದಾಂಡೇಲಿ: ನಗರದ ಸೋಮಾನಿ ವೃತ್ತದ ಹತ್ತಿರದಲ್ಲಿರುವ ನಂದಗೋಕುಲ ಗಾರ್ಡನ್‌ನ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ಆಡಿಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು, ಮಟ್ಕಾ ಜುಗರಾಟಕ್ಕೆ ಬಳಸುತ್ತಿದ್ದ ನಗದನ್ನು ಜಪ್ತಿಪಡಿಸಿಕೊಂಡಿದ್ದಾನೆ.
ನಗರದ ಸಮೀಪದಲ್ಲಿರುವ ಕೋಗಿಲಬನದ ನಿವಾಸಿಯಾಗಿರುವ ಖಾಲೀದ್ ಅಹಮ್ಮದ್ ಇಬ್ರಾಹಿಂ ಎಂಬಾತನು ಸೋಮಾನಿ ವೃತ್ತದ ಹತ್ತಿರದ ನಂದಗೋಕುಲ ಗಾರ್ಡನ್‌ನ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ನಿಂತುಕೊAಡು ತಮ್ಮ ಲಾಭಕ್ಕಾಗಿ ಅಂಕೆ ಸಂಖ್ಯೆ ಮೇಲೆ ಹಣವನ್ನು ಪಂಥಕ್ಕೆ ಕಟ್ಟಿಸಿಕೊಂಡು ಓ.ಸಿ, ಮಟ್ಕಾ ಜೂಜಾಟ ಆಡಿಸುತ್ತಿದ್ದನು. ಈ ಸಂದರ್ಭದಲ್ಲಿ ದಾಂಡೇಲಿ ನಗರ ಪೊಲೀಸರು ದಾಳಿ ನಡೆಸಿ ಮಟ್ಕಾ ಬರೆದಿರುವ ಚೀಟಿ ಹಾಗೂ ನಗದು ರೂ.1340 ಮತ್ತು ಆರೋಪಿಯನ್ನು ವಶಕ್ಕೆ ಪಡೆದು ಕಲಂ 78(3)ರ ಕೆ.ಪಿ.ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪಿಎಸೈ ಐ.ಆರ್.ಗಡ್ಡೇಕರ್ ಅವರು ದಾಳಿ ನಡೆಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

300x250 AD
Share This
300x250 AD
300x250 AD
300x250 AD
Back to top