• Slide
    Slide
    Slide
    previous arrow
    next arrow
  • ಸಿಲಿಂಡರ್ ದರ ಏರಿಕೆ: ಜನ ವಿರೋಧಿ ನಿರ್ಣಯ ವಾಪಸ್ಸಾತಿಗೆ ಆಗ್ರಹ

    300x250 AD

    ಅಂಕೋಲಾ: ಅಡುಗೆ ಅನಿಲ ಸಿಲಿಂಡರ್ ದರ 50 ಮತ್ತು ವಾಣಿಜ್ಯ ಬಳಕೆ ಸಿಲಿಂಡರ್‌ಗೆ 350 ದರ ಏರಿಸಿರುವದು ತೀವ್ರ ಖಂಡನೀಯ. ಇದು ಬಡವರ ರಕ್ತ ಹೀರಲು ಕೇಂದ್ರ ಬಿಜೆಪಿ ಸರಕಾರ ತಯಾರಿಯಾಗಿ ನಿಂತಿರುವುದನ್ನು ತೋರಿಸುತ್ತದೆ. ಈ ಜನ ವಿರೋಧಿ ನಿರ್ಣಯವನ್ನು ವಾಪಸ್ಸು ಪಡೆಯಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ ಎಂದು ಜಿಲ್ಲಾಧ್ಯಕ್ಷ ಶಾಂತಾರಾಮ ನಾಯಕ ತಿಳಿಸಿದ್ದಾರೆ.


    ಅಕ್ಕಿ, ಬೇಳೆ, ಅಡುಗೆ ಎಣ್ಣೆ ಮುಂತಾದ ನಿತ್ಯೋಪಯೋಗಿ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯ  ತತ್ತರಿಸಿದ್ದಾರೆ, ಒಂದು ಕಡೆ ಜಿ.ಎಸ್.ಟಿ. ಹೇರಿಕೆ ,ಇನ್ನೊಂದು ಕಡೆ ಭ್ರಷ್ಟಾಚಾರ, ಡಬಲ್ ಇಂಜಿನ್ ಬಿಜೆಪಿ ಸರಕಾರ ಕಿತ್ತೊಗೆಯುವದೇ ಇವೆಲ್ಲಕ್ಕೂ ಪರಿಹಾರ ಆಗಬಹುದು ಎಂದು ಶಾಂತಾರಾಮ ನಾಯಕ ಅಭಿಪ್ರಾಯಪಟ್ಟಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top