• Slide
    Slide
    Slide
    previous arrow
    next arrow
  • ಕದಂಬೋತ್ಸವದಲ್ಲಿ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಸಿದ ರವಿ ಮೂರೂರು ಗಾಯನ

    300x250 AD

    ಶಿರಸಿ: ಬನವಾಸಿಯ ಕದಂಬೋತ್ಸವದ ಎರಡನೇ‌ದಿನ ಸಮಾರೋಪ ಸಮಾರಂಭದ ನಂತರ ನಡೆದ ಸಾಂಸ್ಕೃತಿಕ ವೈಭವದಲ್ಲಿ ಚಿತ್ರ ನಟ, ಗಾಯಕ, ಖ್ಯಾತ ಮಿಮಿಕ್ರಿ‌ ಕಲಾವಿದ ರವಿ ಮೂರೂರು ಮತ್ತವರ ತಂಡ ಗಾಯನ ಕಾರ್ಯಕ್ರಮ ನೀಡಿ ನೆರೆದಿದ್ದ ಸಾವಿರಾರು‌ ಪ್ರೇಕ್ಷಕರ ಮನತಣಿಸಿ, ಒಟ್ಟಾರೆ ಕದಂಬೋತ್ಸವಕ್ಕೊಂದು ಮೆರಗು ನೀಡಿದರು.


    ಗಾಯಕ‌ ರವಿ ಮೂರುರು ಸಿ.ಅಶ್ವತ್’ರವರ ಜನಪ್ರಿಯ ಹಾಡುಗಳನ್ನು ತಮ್ಮ ಕಂಠಸಿರಿಯಲ್ಲಿ ಉತ್ತಮವಾಗಿ ಪ್ರದರ್ಶಿಸಿದರು. ನಂತರ ಹಾಡಿದ ಜಿ.ಪಿ.ರಾಜರತ್ನಂರವರ ‘ಬೆಳ್ದಿಂಗಳ ರಾತ್ರಿಲಿ’ ಎಂಬ ಹಾಸ್ಯದ ಹಾಡು ಪ್ರೇಕ್ಷಕರನ್ನು  ಹುಚ್ಚೆದ್ದು ಕುಣಿಸುವಲ್ಲಿ ಯಶಸ್ವಿಯಾಯಿತು. ಕೊನೆಯಲ್ಲಿ ಶಿಶುನಾಳ ಷರೀಫರ ಹಾಡನ್ನು ಹಾಡಿ ತಮ್ಮ ಗಾನ ವೈಭವಕ್ಕೆ ಮುಕ್ತಾಯವನ್ನು ನೀಡಿದರು. ರವಿ ಮೂರೂರವರ ಕಾರ್ಯಕ್ರಮಕ್ಕೆ ಇನ್ನಷ್ಟು ಸಮಯ ನೀಡಬೇಕಾಗಿತ್ತು ಎನ್ನುವ ಮಾತುಗಳು ಪ್ರೇಕ್ಷಕರ ಗ್ಯಾಲರಿಯಿಂದ ಕೇಳಿಬಂದಿದ್ದು ಕಾರ್ಯಕ್ರಮದ ಯಶಸ್ಸನ್ನು ತೋರಿಸಿದಂತಿತ್ತು.

    300x250 AD


    ಗಾನ ವೈಭವಕ್ಕೆ ಹಿನ್ನೆಲೆಯಲ್ಲಿ ಕೀಬೋರ್ಡ್’ನಲ್ಲಿ ನಟರಾಜ ಗೋಗಟೆ, ಡೋಲಕ್’ನಲ್ಲಿ ಗಣೇಶ ಗುಂಡ್ಕಲ್, ತಬಲಾದಲ್ಲಿ ಗುರುರಾಜ ಆಡುಕಳಾ, ರಿದಂ‌ಪ್ಯಾಡ್’ನಲ್ಲಿ ವಿಠಲ ರಂಗದೋಳ ಸಮರ್ಥವಾಗಿ‌ ಸಾಥ್ ನೀಡಿ ಕಾರ್ಯಕ್ರಮದ ಯಶಸ್ಸಿಗೆ ತಮ್ಮ ಕೊಡುಗೆ ನೀಡಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top