Slide
Slide
Slide
previous arrow
next arrow

ರಾಷ್ಟ್ರೀಯ ಯುವ ಸಂಸತ್ ಉತ್ಸವ: ಯುವಜನತೆಯೇ ದೇಶದ ಭವಿಷ್ಯವೆಂದ ಕಾರವಾರದ ಚೇತನಾ

300x250 AD

ಕಾರವಾರ: ನವದೆಹಲಿಯ ಸಂಸತ್ ಭವನದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಯುವ ಸಂಸತ್ ಉತ್ಸವದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿ ಕಾರವಾರದ ಹುಡುಗಿ ಚೇತನಾ ಕೊಲ್ವೇಕರ್ ಕೆಚ್ಚೆದೆಯ ಭಾಷಣ ಮಾಡಿದ್ದಾಳೆ.
ಕೇಂದ್ರ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯದ ಆಯೋಜನೆಯ ನಾಲ್ಕನೇ ಆವೃತ್ತಿಯ ರಾಷ್ಟ್ರೀಯ ಯುವ ಸಂಸತ್ ಉತ್ಸವ ನವದೆಹಲಿಯ ಸಂಸತ್ ಭವನದಲ್ಲಿ ನಡೆಯುತ್ತಿದ್ದು, ಪ್ರತಿ ರಾಜ್ಯಗಳಿಂದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಮೂರು ಸ್ಥಾನ ಪಡೆದ ಸ್ಪರ್ಧಿಗಳು ಭಾಗವಹಿಸಿದ್ದಾರೆ. ಕರ್ನಾಟಕದಿಂದಲೂ ಮೂವರು ಭಾಗವಹಿಸಿದ್ದು, ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದ ಕಾರವಾರದ ಚೇತನಾ ಕೊಲ್ವೇಕರ್ ಭಾಷಣ ನೀಡಿದ್ದಾರೆ.
ಚೇತನಾ ಕಾರವಾರದ ಕಲಾ ಮತ್ತು ವಿಜ್ಞಾನ ಕಾಲೇಜಿನ ಕಲಾ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಯಾಗಿದ್ದಾಳೆ. ಈ ಹಿಂದೆ ಕೂಡ ಯುವ ಸಂಸತ್ ಉತ್ಸವದಲ್ಲಿ ಸಭಿಕಳಾಗಿ ಸಂಸತ್ ಭವನದಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿದ್ದ ಈಕೆ, ಈ ಬಾರಿ ತಾನೇ ಭಾಷಣ ನೀಡಲು ಅವಕಾಶ ಪಡೆಯುವ ಮೂಲಕ ಯುವಜನತೆಗೆ ಸ್ಫೂರ್ತಿ ತುಂಬುವ ಕಾರ್ಯ ಮಾಡಿದ್ದಾಳೆ.
ಈ ಯುವ ಸಂಸತ್ ಉತ್ಸವದಲ್ಲಿ ಹಿಂದಿ ಮತ್ತು ಇಂಗ್ಲಿಷ್ ಎರಡು ಭಾಷೆಗಳಲ್ಲಿ ಮಾತ್ರ ಮಾತನಾಡಲು ಅವಕಾಶವಿದೆ. ಆದರೆ ಚೇತನಾ ಮಾತೃ ಭಾಷೆ ಕೊಂಕಣಿಯಲ್ಲೇ ಭಾಷಣ ಪ್ರಾರಂಭಿಸಿ ಮೆಚ್ಚುಗೆಗಳಿಸಿದ್ದಾಳೆ. ‘ಕರ್ನಾಟಕದ ಕಾಶ್ಮೀರ ಕಾರವಾರದ ಹುಡುಗಿಯಿಂದ ಎಲ್ಲರಿಗೂ ಬೆಳಗಿನ ವಂದನೆಗಳು’ ಎಂದು ಕೊಂಕಣಿಯಲ್ಲಿ ಪ್ರಜಾಪ್ರಭುತ್ವ ಮತ್ತು ಸರ್ಕಾರದಲ್ಲಿ ಯುವಜನತೆಯ ಪಾತ್ರದ ಕುರಿತು ಭಾಷಣ ಪ್ರಾರಂಭಿಸಿದ್ದಾರೆ. ಯುವಜನತೆಯೇ ದೇಶದ ಭವಿಷ್ಯ. ಮುಂದಿನ ಪೀಳಿಗೆಯ ಅಂತಿಮ ಭರವಸೆ. ಉಪ್ಪಿಗಿಂತ ರುಚಿಯಿಲ್ಲ, ತಾಯಿಗಿಂತ ಬಂಧುವಿಲ್ಲ ಎಂಬಂತೆ ಯುವಕರಿಲ್ಲದೆ ದೇಶವಿಲ್ಲ ಎನ್ನುವುದನ್ನ ಚೇತನಾ ಹೇಳಿದ್ದಾಳೆ.

300x250 AD
Share This
300x250 AD
300x250 AD
300x250 AD
Back to top