Slide
Slide
Slide
previous arrow
next arrow

ರಾಷ್ಟ್ರ, ಧರ್ಮಕ್ಕಾಗಿ ಮಕ್ಕಳನ್ನು ಸಜ್ಜುಗೊಳಿಸುವ ಜೀಜಾಮಾತೆ ಬರಬೇಕು: ಪ್ರಮೋದ್ ಮುತಾಲಿಕ್

300x250 AD

ಶಿರಸಿ: ಹಿಂದುಗಳ ಹೆಸರಿನಲ್ಲಿ ಗೆದ್ದು, ಗೋಮಾತೆಯ ಹತ್ಯೆಯನ್ನು ಖಂಡಿಸದ, ಭ್ರಷ್ಟಾಚಾರವನ್ನು ವಿರೋಧಿಸದ ಜನಪ್ರತಿನಿಧಿಗಳನ್ನು ಐದಾರು ಬಾರಿ ಶಾಸಕ-ಸಂಸದರನ್ನಾಗಿ ಆರಿಸುವ ಕೆಲಸ ಮಾಡುತ್ತಿರುವುದು ದೌರ್ಭಾಗ್ಯದ ಸಂಗತಿಯಾಗಿದೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಪ್ರಮೋದ್ ಮುತಾಲಿಕ್ ಹೇಳಿದರು.

ಅವರು ಶಿರಸಿಯಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾದಿಂದ ಆಯೋಜಿಸಿದ್ದ ಹಿಂದೂ ಸಮಾಜೋತ್ಸವದಲ್ಲಿ ದಿಕ್ಸೂಚಿ ಭಾಷಣದಲ್ಲಿ ಮಾತನಾಡಿ, ಛತ್ರಪತಿ ಶಿವಾಜಿ ಮಹಾರಾಜರ ವಿಚಾರ ಇಂದಿಗೂ ಪ್ರಸ್ತುತವಿದೆ. ಭಾರತದ ಗಡಿಯ ಸುತ್ತಲೂ ಇಸ್ಲಾಮೀಕರಣದ ವಾತಾವರಣ ಹೆಚ್ಚುತ್ತಿದೆ. ಶಿವಾಜಿ ಮಹಾರಾಜರ ಮಾದರಿಯಲ್ಲಿಯೇ ಮತಾಂಧರನ್ನು ಎದುರಿಸಬೇಕಿದೆ. ಇಂದು ಮನೆ ಮನೆಯಲ್ಲಿ ಜೀಜಾಮಾತೆಯ ಅವಶ್ಯಕತೆಯಿದೆ. ರಾಷ್ಟ್ರಕ್ಕಾಗಿ, ಧರ್ಮಕ್ಕಾಗಿ, ಸಂಸ್ಕೃತಿಗಾಗಿ ಮನೆಯ ಮಕ್ಕಳನ್ನು ಹೋರಾಡಲು ಸಜ್ಜುಗೊಳಿಸುವ ಜೀಜಾಮಾತೆಯರು ಪ್ರತಿ ಮನೆಯಿಂದ ಬರಬೇಕಾಗಿದೆ ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘ ಕೊಟ್ಟ ಸಂಸ್ಕಾರ ಎಂದಿಗೂ ನನ್ನನ್ನು ಹಿಂದೆ ಸರಿಯುವಂತೆ ಮಾಡುವುದಿಲ್ಲ. ಹಿಂದೂ ಸಮಾಜಕ್ಕಾಗಿ ನಿಸ್ವಾರ್ಥದಿಂದ ಬದುಕುತ್ತಿದ್ದೇನೆ. ದೇಶ ಆಳಿದ ಕಾಂಗ್ರೆಸ್ ಅಪ್ಜಲ್ ಖಾನ್, ಟಿಪ್ಪು ಸುಲ್ತಾನನ ಸಂತಾನಗಳಾಗಿದೆ. ಕಾಂಗ್ರೆಸ್ ದೇಶವನ್ನು ಬರ್ಬಾದ್ ಮಾಡಿದೆ. ಕಾಶ್ಮೀರದಲ್ಲಿ ಈಗಲೂ ಸಹ ಹಿಂದೂಗಳ ಹತ್ಯೆಯಾಗುತ್ತಿದೆ. ಹಿಂದೂಗಳನ್ನು ಸಂರಕ್ಷಿಸುವ ಕಾರ್ಯ ಎಲ್ಲರಿಂದ ನಡೆಯಬೇಕು ಎಂದರು.

ಹಿಂದು ಮಹಾಸಭಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಮಲೇಶದಾಸ್ ಮಹಾರಾಜ್ ಮಾತನಾಡಿ, ಭಾರತ ವ್ಯಾಪಾರದ ದೇಶವಲ್ಲ, ಬದಲಾಗಿ ಪರಿವಾರದ ದೇಶವಾಗಿದೆ. ದೇಶದಲ್ಲಿ ಹಿಂದುಗಳ ಮೇಲಾಗುತ್ತಿರುವ ಅತಿಕ್ರಮಣವನ್ನು ನಾವೆಲ್ಲ ಜಾಗೃತಗೊಳ್ಳುವುದರ ಮೂಲಕ ಎದುರಿಸಬೇಕಿದೆ ಎಂದರು.

300x250 AD

ಹಿಂದುಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಠ್ಠಲ್ ಪೈ ಪ್ರಾಸ್ತಾವಿಕ ಮಾತುಗಳನ್ನಾಡಿ, ಹಿಂದೂ ಹೃದಯ ಸಾಮ್ರಾಟ್ ಛತ್ರಪತಿ ಶಿವಾಜಿ ಮಹಾರಾಜರ ಆದರ್ಶಗಳನ್ನು ಯುವ ಜನತೆ ಮೈಗೂಡಿಸಿಕೊಳ್ಳಬೇಕು. ಇಂದು ದೇಶದಲ್ಲಿ ಹಿಂದೂಗಳ ಶಕ್ತಿಯನ್ನು ದಮನಗೊಳಿಸುವ ಕೆಲಸ ನಡೆಯುತ್ತಿದೆ. ಆಚಾರ್ಯ ಚಾಣಾಕ್ಯನ ಮಾತಿನಂತೆ ಅತ್ಯಾಚಾರ, ಅನಾಚಾರವನ್ನು ವಿರೋಧಿಸದ ಸಜ್ಜನರ ನಿಷ್ಕ್ರಿಯತೆಯು ದೇಶಕ್ಕೆ ಹೆಚ್ಚು ಮಾರಕವಾಗಿದೆ ಎಂದರು.
ಇದೇ ವೇಳೆ ವೇದಿಕೆಯಲ್ಲಿ ವಿಠ್ಠಲ್ ಪೈಯನ್ನು ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಕಾರ್ಯದರ್ಶಿಯಾಗಿ ಘೋಷಿಸಲಾಯಿತು.

ವೇದಿಕೆಯಲ್ಲಿ ತೆಲಂಗಾಣ ಹಿಂದು ಮಹಾಸಭಾದ ರಾಜ್ಯಾಧ್ಯಕ್ಷರಾದ ಆತ್ಮಾರಾಮ್ ರಾಮದಾಸ್ ಜೀ, ಛತ್ರಪತಿ ಯುವಸೇನಾ ಅಧ್ಯಕ್ಷ ಯೋಗೇಶ ಪ್ರಭು ಮಹಾರಾಜ್, ಅಖಿಲ ಭಾರತ ಹಿಂದೂ ಮಹಾಸಭಾದ ಮುಖಂಡ ಗೋಪಾಲ ದೇವಾಡಿಗ ಇದ್ದರು‌. ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವರಾಜ ಮರಾಠಿ ಬಂಡಲ ವಹಿಸಿದ್ದರು.

Share This
300x250 AD
300x250 AD
300x250 AD
Back to top