Slide
Slide
Slide
previous arrow
next arrow

ಮಾ.8ಕ್ಕೆ ತವರುಮನೆ ಹೋಂ ಸ್ಟೇಯಲ್ಲಿ ‘ರಾಂಪತ್ರೆ ಜಡ್ಡಿ ಸಂರಕ್ಷಣೆ’

300x250 AD

ಶಿರಸಿ: ಪರ್ಣ ಪಶ್ಚಿಮಘಟ್ಟ ರೈತೋತ್ಪಾದಕ ಕಂಪನಿ ವಾನಳ್ಳಿ ವ್ಯಾಪ್ತಿಯ ಎಲ್ಲಾ ಗ್ರಾಮ ಅರಣ್ಯ ಸಮಿತಿ, ಐ. ಎಫ್. ಎಚ್. ಡಿ. ಬೆಂಗಳೂರು, ಕನ್ಸರ್ನ್ ಇಂಡಿಯಾ ಫೌಂಡೇಶನ್, ಸ್ನೇಹಕುಂಜ ಟ್ರಸ್ಟ್ ಕಾಸರಗೋಡು ವತಿಯಿಂದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ- 2023 ಪ್ರಯುಕ್ತ ‘ರಾಂಪತ್ರೆ ಜಡ್ಡಿ ಸಂರಕ್ಷಣೆ’ ಎಂಬ ವಿನೂತನ ಕಾರ್ಯಕ್ರಮವನ್ನು ತಾಲೂಕಿನ ವಾನಳ್ಳಿ ಸಮೀಪದ ತವರುಮನೆ ಹೋಂ ಸ್ಟೇಯಲ್ಲಿ ಮಾ.8ಕ್ಕೆ ಆಯೋಜಿಸಲಾಗಿದೆ.

ಅಡವಿ ಆಹಾರಗಳ ತಯಾರಿಕೆ, ಪ್ರಬೇಧಗಳ ಸಂರಕ್ಷಣೆ, ಮಿಸರಿ ಜೇನು ಪ್ರಾತ್ಯಕ್ಷಿಕೆ, ಗಡ್ಡೆ ಗೆಣಸು ಪ್ರದರ್ಶನ, ಮಾರಾಟ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನೊಳಗೊಂಡ ಕಾರ್ಯಕ್ರಮವನ್ನು ನಾರೀ ಸಮ್ಮಾನ್ ರಾಷ್ಟ್ರಪತಿ ಪ್ರಶಸ್ತಿ ಪುರಸ್ಕೃತೆ ಶ್ರೀಮತಿ ನೋಮಿಟೋ ಕಾಮದಾರ್‌ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಪರ್ಣ ರೈತೋತ್ಪಾದಕ ಕಂಪನಿ ವಾನಳ್ಳಿ‌ ಅಧ್ಯಕ್ಷ ಎನ್. ಎಸ್. ಹೆಗಡೆ ಕೋಟಿಕೊಪ್ಪ ವಹಿಸಲಿದ್ದಾರೆ.

ಅಭ್ಯಾಗತರಾಗಿ ಐ.ಎಫ್.ಎಸ್. ನಿವೃತ್ತ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣ ಉದಪುಡಿ, ಐ.ಎಫ್.ಎಸ್. ಅರಣ್ಯ ಸಂರಕ್ಷಣಾಧಿಕಾರಿ ವಸಂತ ರೆಡ್ಡಿ, ಐ. ಎಫ್. ಎಸ್. ಉಪ ಅರಣ್ಯ ಸಂರಕ್ಷಣಾಧಿಕಾರಿ ಅಜ್ಜಯ್ಯ ಜಿ.ಆರ್, ಪಶ್ಚಿಮಘಟ್ಟ ಕಾರ್ಯಪಡೆ ನಿಕಟಪೂರ್ವ ಅಧ್ಯಕ್ಷ‌ಅನಂತ ಹೆಗಡೆ ಅಶೀಸರ, ತೋಟಗಾರಿಕಾ ವಿಶ್ವವಿದ್ಯಾಲಯ ಪ್ರಾಧ್ಯಾಪಕ ಡಾ. ರಘುನಾಥ್, ಹಿರಿಯ ಸಸ್ಯ ವಿಜ್ಞಾನಿ ಡಾ. ಬಿ. ಎಸ್. ಸೋಮಶೇಖರ, ವಲಯ ಅರಣ್ಯಾಧಿಕಾರಿ‌ ಉಷಾ ಕಬ್ಬೇರ್, ಗ್ರಾ.ಪಂ.ವಾನಳ್ಳಿ ಅಧ್ಯಕ್ಷ ಜಯರಾಮ ಹೆಗಡೆ, ಗ್ರಾ.ಪಂ.ಕೊಡ್ನಗದ್ದೆ ಅಧ್ಯಕ್ಷೆ ರಾಜೇಶ್ವರಿ ಭಟ್, ಸ್ನೇಹಕುಂಜ ಟ್ರಸ್ಟ್ ಸೆಕ್ರೆಟರಿ ನರಸಿಂಹ ಹೆಗಡೆ ಮಾನೀಗದ್ದೆ, ಪರಿಸರ ತಜ್ಞ ಬಾಲಚಂದ್ರ ಸಾಯಿಮನೆ ಆಗಮಿಸಲಿದ್ದಾರೆ.

ಮುಂಜಾನೆ ಭರತನಾಟ್ಯ ಕಾರ್ಯಕ್ರಮದಲ್ಲಿ ಶ್ರೀಮತಿ ರಾಧಾರಾಣಿ ಶ್ರೀದತ್ತ ಕಂಬದಮನೆ ನೃತ್ಯ ಪ್ರದರ್ಶನ ನೀಡಲಿದ್ದು,ಮಧ್ಯಾಹ್ನ 12-30ರಿಂದ ಮಿಸರಿ ಜೇನು ತರಬೇತಿ ಪ್ರಾತ್ಯಕ್ಷಿಕೆ ನಡೆಯಲಿದ್ದು ಸಂಪನ್ಮೂಲ ವ್ಯಕ್ತಿಗಳಾಗಿ ವಿಘ್ನೇಶ್ವರ ಹಳ್ಳದಕೈ ಆಗಮಿಸಲಿದ್ದಾರೆ.

300x250 AD

ಮಧ್ಯಾಹ್ನ 3 ಘಂಟೆಯಿಂದ ಯಕ್ಷಗೆಜ್ಜೆ ಕಲಾಬಳಗದವರಿಂದ‌ ಯಕ್ಷಗಾನ ತಾಳಮದ್ದಲೆ ‘ಕರ್ಣಪರ್ವ’ ಹಾಗೂ ಸಂಜೆ 5-50ರಿಂದ ಸಂಗೀತ ಕಾರ್ಯಕ್ರಮ ನಡೆಯಲಿದ್ದು ಶ್ರೀಮತಿ ಮೇಧಾ ಭಟ್ಟ ಬೆಂಗಳೂರು, ವಿದ್ವಾನ್ ಪ್ರಕಾಶ ಹೆಗಡೆ ಯಡಳ್ಳಿ, ವಿ.ಗುರುರಾಜ್ ಆಡುಕಳಾ ಮನರಂಜಿಸಲಿದ್ದಾರೆ.

ನಂತರದಲ್ಲಿ ವಿದ್ವಾನ್ ಪ್ರಕಾಶ ಹೆಗಡೆ ಯಡಳ್ಳಿ ಹಾಗೂ ನರಸಿಂಹ ಹೆಗಡೆ ಮಾನೀಗದ್ದೆ ಇವರಿಂದ ಹಾರ್ಮೋನಿಯಂ ಮತ್ತು ಕೊಳಲು ಜುಗಲ್‌ಬಂದಿ ಕಾರ್ಯಕ್ರಮ ನಡೆಯಲಿದ್ದು ಸರ್ವರೂ ಆಗಮಿಸಿ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಲು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top