ಕಾರವಾರ: ನಂದನಗದ್ದಾದ ನಿವೃತ್ತ ಪ್ರಾಧ್ಯಾಪಕಿ ಡಾ.ಗೀತಾ ಪೂಜಾರಿ (74) ಅವರ ಮೃತದೇಹವನ್ನು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಶರೀರ ರಚನಾಶಾಸ್ತ್ರ ವಿಭಾಗಕ್ಕೆ ಅವರ ಕುಟುಂಬಸ್ಥರು ದಾನ ಮಾಡಿದ್ದಾರೆ.
ಮೃತರ ಇಚ್ಛೆಯಂತೆ ಸ್ವಯಂ ಪ್ರೇರಿತ ದೇಹದಾನ ಕಾರ್ಯಕ್ರಮದ ಅಡಿ ನೋಂದಾಯಿಸಿ, ಕ್ರಮ ಪ್ರಕಾರ ದಾನಿಯು ಮೃತರಾದ ನಂತರ ದಾನಿಯ ಕುಟುಂಬಸ್ಥರು, ಅವರ ಪಾರ್ಥಿವ ಶರೀರವನ್ನು ಕ್ರಿಮ್ಸ್ಗೆ ಹಸ್ತಾಂತರಿಸಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ವಿಭಾಗದಲ್ಲಿ ಅಧ್ಯಯನ ಮಾಡುತ್ತಿರುವ ಪ್ರಥಮ ಎಂಬಿಬಿಎಸ್ ತರಗತಿಯ ವಿದ್ಯಾರ್ಥಿಗಳ ಸಂಶೋಧನೆ ಹಾಗೂ ಅಧ್ಯಯನಕ್ಕಾಗಿ ಬಳಸಿಕೊಳ್ಳಲಾಗುತ್ತದೆ. ಮೃತರ ಕುಟುಂಬದವರ ಕೊಡುಗೆ ಶ್ಲಾಘನೀಯ ಹಾಗೂ ಭವಿಷ್ಯದಲ್ಲಿ ಹಲವು ನಾಗರೀಕರಿಗೆ ದಾನಿಯಾಗಲು ಪ್ರೇರಣೆ ನೀಡುವುದು ಖಚಿತ ಎಂದು ಕ್ರಿಮ್ಸ್ ನಿರ್ದೇಶಕರು ಅಭಿಪ್ರಾಯಪಟ್ಟಿದ್ದಾರೆ.