• Slide
    Slide
    Slide
    previous arrow
    next arrow
  • ಪಂಪ ಪ್ರಶಸ್ತಿಯಲ್ಲಿ ಜಿಲ್ಲೆಯ ಓರ್ವ ಸಾಹಿತಿಯಾದರೂ ಆಯ್ಕೆಯಾಗಬೇಕಿತ್ತು: ಬಿ.ಎನ್. ವಾಸರೆ

    300x250 AD

    ಶಿರಸಿ: ಕೊರೊನಾ ಹಿನ್ನೆಲೆಯಲ್ಲಿ ಎರಡು ವರುಷ ಕದಂಬೋತ್ಸವ ನಡೆಯದ ಕಾರಣ ಈ ವರ್ಷದ ಕದಂಬೋತ್ಸವದಲ್ಲಿ ಹಿಂದಿನದ್ದೂ ಸೇರಿ ಮೂವರಿಗೆ ಪಂಪ ಪ್ರಶಸ್ತಿಯನ್ನು ಘೋಷಿಸಿರುವುದು ಸ್ವಾಗತಾರ್ಹವೇ ಆದರೂ, ಆ ಮೂವರಲ್ಲಿ ನಮ್ಮ ಜಿಲ್ಲೆಯ ಓರ್ವ ಸಾಹಿತಿಗೂ ಈ ಗೌರವ ನೀಡದೇ ಇರುವುದು ಬೇಸರವನ್ನುಂಟು ಮಾಡಿದೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ. ಎನ್.ವಾಸರೆ ಅಭಿಪ್ರಾಯಪಟ್ಟಿದ್ದಾರೆ.

    ಸಚಿವ ಶಿವರಾಮ ಹೆಬ್ಬಾರ್ ಸಾರಥ್ಯದಲ್ಲಿ, ಜಿಲ್ಲಾಡಳಿತದ ಮೇಲುಸ್ತುವಾರಿಯಲ್ಲಿ ಪಂಪನ ಬನವಾಸಿಯಲ್ಲಿ ಸಂಘಟನೆಗೊಂಡ ಈ ಕದಂಬೋತ್ಸವ ಅತ್ಯಂತ ಅರ್ಥಪೂರ್ಣವಾಗಿ ನಡೆದಿದೆ. ಇದರ ಯಶಸ್ಸಿನ ಹಿಂದೆ ತೊಡಗಿಸಿಕೊಂಡ ಸಚಿವ ಶಿವರಾಮ್ ಹೆಬ್ಬಾರ್ ಹಾಗೂ ಹಾಗೂ ಆಡಳಿತದವರನ್ನು ಅಭಿನಂದಿಸಲೇಬೇಕು. ಆದರೆ ರಾಜ್ಯ ಸರ್ಕಾರ ಪಂಪ ಪ್ರಶಸ್ತಿಯನ್ನು ಘೋಷಣೆ ಮಾಡುವಲ್ಲಿ ವಿಳಂಬ ನೀತಿ ತಳೆದಿದ್ದು ಹಾಗೂ ಕದಂಬೋತ್ಸವದ ಮುನ್ನ ದಿನದ ರಾತ್ರಿ ಪ್ರಶಸ್ತಿ ಘೋಷಣೆ ಮಾಡಿದ್ದು, ಹಾಗೂ ಪಂಪ ಪ್ರಶಸ್ತಿಯನ್ನು ಸ್ವೀಕರಿಸಲು ಮೂವರಲ್ಲಿ ಓರ್ವರೇ ಆಗಮಿಸಿದ್ದು ಇವೆಲ್ಲ ವಿಪರ್ಯಾಸಗಳಾಗಿವೆ.

    ಇದೆಲ್ಲದಕ್ಕಿಂತ ಹೆಚ್ಚಾಗಿ ಈ ಮೂರು ಪಂಪ ಪ್ರಶಸ್ತಿಗಳಲ್ಲಿ ಒಂದಾದರೂ ಕೂಡ ಉತ್ತರ ಕನ್ನಡ ಜಿಲ್ಲೆಯ ಸಾಹಿತಿಗೆ ದೊರೆಯಬೇಕಿತ್ತು. ದೊರೆತಿಲ್ಲ ಎನ್ನುವುದೇ ಆಕ್ಷೇಪವಾಗಿದೆ.

    ಈ ಹಿಂದೆಯೇ ಈ ಬಾರಿಯ ಕದಂಬೋತ್ಸವದಲ್ಲಿ ಉತ್ತರಕನ್ನಡ ಜಿಲ್ಲೆಯ ಹಿರಿಯ ಸಾಹಿತಿಯೋರ್ವರಿಗೆ ಪಂಪ ಪ್ರಶಸ್ತಿಯ ಗೌರವ ಸಿಗುವಂತಾಗಬೇಕು ಎನ್ನುವುದಾಗಿ ಒತ್ತಾಯಿಸಿದ್ದೆ. ಈ ಬಾರಿ ಹಿಂದಿನ ಪಂಪ ಪ್ರಶಸ್ತಿಗಳು ಸೇರಿದಂತೆ ಮೂವರಿಗೆ ಪಂಪ ಪ್ರಶಸ್ತಿಗಳನ್ನು ನೀಡುತ್ತಿರುವ ಹಿನ್ನೆಲೆಯಲ್ಲಿ ಅದರಲ್ಲಿ ಒಂದಾದರೂ ನಮ್ಮ ಜಿಲ್ಲೆಯವರೆಗೆ ದೊರೆಯಬಹುದೆಂಬ ಆಶಾಭಾವವಿತ್ತು. ಆದರೆ ಈಗ ಅದು ಹುಸಿಯಾಗಿದೆ. ಪಂಪ ಪ್ರಶಸ್ತಿಯ ಆಯ್ಕೆ ಸಮಿತಿಯವರು ಉತ್ತರ ಕನ್ನಡ ಜಿಲ್ಲೆಯ ಅರ್ಹ ಸಾಹಿತಿಗಳನ್ನು ಕಡೆಗಣಿಸಿದ್ದು ಬೇಸರ ತಂದಿದೆ. ಇಲ್ಲಿಯವರೆಗೆ 35 ಪಂಪ ಪ್ರಶಸ್ತಿಗಳನ್ನು ನೀಡಲಾಗಿದೆ ಎಂದು ಹೇಳುತ್ತಾರೆ. ಇವರಲ್ಲಿ ಓರ್ವರೂ ಕೂಡ ಉತ್ತರ ಕನ್ನಡ ಜಿಲ್ಲೆಯವರು ಆಗದೆ ಇರುವುದು ನಮ್ಮ ಜಿಲ್ಲೆಯ ಸಾಹಿತಿಗಳಿಗಾದ ಅನ್ಯಾಯವೇ ಆಗಿದೆ ಎಂದಿದ್ದಾರೆ.

    300x250 AD

    ಕದಂಬೋತ್ಸವದಲ್ಲಿ ಈ ಬಾರಿಯ ಪಂಪ ಪ್ರಶಸ್ತಿ ಪುರಸ್ಕೃತರ ಪರಿಚಯದ ಸಂದರ್ಭದಲ್ಲಿ ಬೇರೆ ಬೇರೆ ಮಾನದಂಡಗಳ ಜೊತೆಗೆ 30 ಪುಸ್ತಕ ರಚಿಸಿದವರು ಎಂಬ ಮಾನದಂಡವನ್ನು ಹೇಳಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಕೇವಲ 30 ಪುಸ್ತಕಗಳನ್ನ ಅಷ್ಟೇ ಅಲ್ಲ 60 – 70- 100 ಕ್ಕೂ ಹೆಚ್ಚಿನ ಮೌಲ್ಯಯುತ ಕೃತಿಗಳನ್ನು ರಚಿಸಿದ ಸಾಹಿತಿಗಳಿದ್ದಾರೆ, ಸಾಹಿತ್ಯ , ಸಾಂಸ್ಕೃತಿಕ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಕಾಲ ತಮ್ಮನ್ನು ತಾವು ತೊಡಗಿಸಿಕೊಂಡಂತಹ ಬರಹಗಾರರಿದ್ದಾರೆ. ಹೀಗಿರುವಾಗ ಪಂಪನ ನಾಡು ಬನವಾಸಿಯಲ್ಲಿ ಅದರಲ್ಲೂ ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಬನವಾಸಿಯಲ್ಲಿ ನಡೆಯುತ್ತಿರುವ ಕದಂಬೋತ್ಸವದ ಸಂದರ್ಭದಲ್ಲಿ ಪ್ರದಾನವಾದ ಮೂರು ವರ್ಷದ ಪಂಪ ಪ್ರಶಸ್ತಿಗಳಲ್ಲಿ ಒಂದೇ ಒಂದು ಪ್ರಶಸ್ತಿಯನ್ನು ಕೂಡ ನಮ್ಮ ಜಿಲ್ಲೆಯ ಸಾಹಿತಿಗಳಿಗೆ ನೀಡಿದೆ ಇರುವುದು ಜಿಲ್ಲೆಯ ಸಾಹಿತ್ಯ ವಲಯದಲ್ಲಿ ಕೂಡ ಬೇಸರ ತಂದಿದೆ. ಸರಕಾರ ಹಾಗೂ ಆಯ್ಕೆ ಸಮಿತಿಯ ಈ ಧೋರಣೆಗೆ ಈ ಜಿಲ್ಲೆಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷನಾಗಿ ನನ್ನ ಸಾಂಸ್ಕೃತಿಕವಾದ ಪ್ರತಿಭಟನೆ ಕೂಡ ಇದ್ದೇ ಇದೆ. ಮುಂದಿನ ವರ್ಷದ ಕದಂಬೋತ್ಸವದಲ್ಲಿ ಪಂಪ ಪ್ರಶಸ್ತಿ ನಮ್ಮ ಜಿಲ್ಲೆಯ ಸಾಹಿತಿಗಳಿಗೇ ದೊರೆಯುವಂತಾಗಬೇಕು ಎಂಬ ಹಕ್ಕೊತ್ತಾಯವಿದೆ. ಸಾಧ್ಯವಾದಲ್ಲಿ ಸರಕಾರದ ಹಾಗೂ ಆಯ್ಕೆ ಸಮಿತಿಯ ಕಣ್ತೆರೆಸುವ ನಿಟ್ಟಿನಲ್ಲಿ ಒಂದು ಸಾಂಸ್ಕೃತಿಕವಾದ ಹೋರಾಟ ಅಥವಾ ಪತ್ರ ಚಳುವಳಿಯನ್ನು ಮಾಡಲಾಗುವುದು ಎಂದು ಹೇಳಿದ್ದಾರೆ.

    Share This
    300x250 AD
    300x250 AD
    300x250 AD
    Leaderboard Ad
    Back to top