• Slide
    Slide
    Slide
    previous arrow
    next arrow
  • ಬ್ರಹ್ಮದೇವ ಜಡಿಗದ್ದಾ ತಂಡಕ್ಕೆ ಮಹಾಸತಿ ಕಪ್

    300x250 AD

    ಕಾರವಾರ: ನಗರವ್ಯಾಪ್ತಿಯ ಬಿಣಗಾದ ಬಾವಿಗದ್ದಾ ಮೈದಾನದಲ್ಲಿ ಮಹಾಸತಿ ಗೆಳೆಯರ ಬಳಗದವರು ಬಿಣಗಾದಿಂದ ಹಾರವಾಡಾ ತನಕ ಬರುವ ಕ್ರಿಕೆಟ್ ಕ್ರೀಡಾಪಟುಗಳಿಗೆ ಸೀಮಿತ ಓವರುಗಳ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಶ್ರೇಯಸ್ ಎಸ್.ನಾಯ್ಕರವರ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.
    ಸುಮಾರು 15ಕ್ಕೂ ಅಧಿಕ ತಂಡಗಳು ಭಾಗವಹಿಸಿ ಅಂತಿಮವಾಗಿ ಜಡಿಗದ್ದಾದ ಬ್ರಹ್ಮದೇವ ತಂಡವು ತೋಡುರ ಜಾಲಿ ಬಾಯ್ಸ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಪಡೆದುಕೊಂಡಿತು. ಅಂತಿಮ ಪಂದ್ಯ ಪುರುಷೋತ್ತಮ ಹಾಗೂ ಸರಣಿ ಪುರುಷೋತ್ತಮ ಪ್ರಶಸ್ತಿ ಸುದೀಪರವರಿಗೆ ಲಭಿಸಿತು. ಅತ್ಯುತ್ತಮ ದಾಂಡಿಗ ಸುಮಂತ ಹಾಗೆ ಉತ್ತಮ ಎಸೆತಗಾರ ಸುದೀಪರವರಿಗೆ ಪ್ರಶಸ್ತಿ ಲಭಿಸಿದರೆ  ಗೇಮ ಚೆಂಜರ ಪ್ರಶಸ್ತಿ ಪ್ರಮೋದಗೆ ಲಭಿಸಿತು.
    ಪ್ರಶಸ್ತಿ ವಿತರಣಾ ಕಾರ್ಯಕ್ರಮಕ್ಕೆ ಬಿಣಗಾದ ಕೋಮಾರಪಂತ ಸಮಾಜದ ಅದ್ಯಕ್ಷರಾದ ಬಿ.ಬಿ.ನಾಯ್ಕರವರು ಮಾತನಾಡಿ ಕ್ರೀಡೆಯೊಂದಿಗೆ ಆರೋಗ್ಯ ಹಾಗೂ ಶಿಕ್ಷಣದಲ್ಲಿಯೂ ಆಸಕ್ತಿ ವಹಿಸಿ ಎಂದು ನುಡಿದರು. ಅದೇ ರೀತಿ ಮುಖ್ಯ ಅತಿಥಿಗಳಾಗಿ ಆಗಮಿಸಿದ ಮಹಾಸತಿ ಐ.ಟಿ.ಐ ನ ಉಪನ್ಯಾಸಕ ನಾಗೇಂದ್ರ ಅಂಚೇಕರ ಮಾತನಾಡಿ, ಈ ಮೈದಾನದಲ್ಲಿ ಅನೇಕ ಘಟಾನುಘಟಿ ಆಟಗಾರರು ಆಡಿ ಹೊರಗಿರುವ ನೆನಪುಗಳು ಇಂದಿನ ಈ ಪಂದ್ಯದಲ್ಲಿ ಕ್ರೀಡಾಪಟುಗಳು ಮತ್ತೆ ಮರುಕಳಿಸಿರುವುದು ತುಂಬಾ ಖುಷಿಯ ವಿಷಯ ಎಂದು ನುಡಿದರು.
    ಕಾರ್ಯಕ್ರಮದಲ್ಲಿ ಮ್ಹಾಳಸಾ ನಾರಾಯಣಿ ಯುವಕ ಮಂಡಳದ ಅಧ್ಯಕ್ಷ ಸುನೀಲ್ ಮ್ಹಾಳ್ಸೇಕರ, ಹಿರಿಯರಾದ ರಾಮಕೃಷ್ಣ ನಾಯ್ಕ, ಪರಮಾನಂದ ನಾಯ್ಕ, ಶೈಲೇಶ ನಾಯ್ಕ, ವಿಜಯಕುಮಾರ ಅಂಚೇಕರರವರು ಉಪಸ್ಥಿತರಿದ್ದು ಸಾಂದರ್ಭಿಕವಾಗಿ ನುಡಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top