ಭಟ್ಕಳ: ಫೆ.25- 26ರಂದು ನಡೆಯಲಿರುವ ದೇವಾಡಿಗ ಪ್ರೀಮಿಯರ್ ಲೀಗ್‌ನ ಜರ್ಸಿ ಹಾಗೂ ಟ್ರೋಫಿಯನ್ನು ವೆಂಕಟಾಪುರದ ಶ್ರೀಸಿದ್ಧಿವಿನಾಯಕ ಸಭಾಭವನದಲ್ಲಿ ದೇವಾಡಿಗರ ಪ್ರಮುಖ ಗಣ್ಯರು ಅನಾವರಣ ಮಾಡಿದರು. ಕಾರ್ಯಕ್ರಮದಲ್ಲಿ ಭಾಗಿಯಾದ ಗಣ್ಯರೆಲ್ಲರು ಎಲ್ಲ ತಂಡಗಳ ಸಂಯೋಜಕರಿಗೆ ಹಾಗೂ ನಾಯಕರುಗಳಿಗೆ ಜರ್ಸಿ ಹಸ್ತಾಂತರಿಸಿ, ಮಾತನಾಡಿ ಎಲ್ಲ ತಂಡಗಳಿಗೆ ಶುಭಕೋರಿದರು.
ದೇವಾಡಿಗರ ಹಿರಿಯ ಧುರೀಣರಾದ ವೆಂಕಟಯ್ಯ ಭೈರುಮನೆ, ತಾಲೂಕ್ ಪಂಚಾಯತ್‌ನ ಮಾಜಿ ಅಧ್ಯಕ್ಷ ಪರಮೇಶ್ವರ ದೇವಾಡಿಗ, ಬಿಜೆಪಿ ತಾಲೂಕಾ ಘಟಕದ ಅಧ್ಯಕ್ಷ ಸುಬ್ರಾಯ ದೇವಾಡಿಗ, ತಾಲೂಕ್ ಪಂಚಾಯತ್ ಸದಸ್ಯರಾದ ವಿಷ್ಣು ದೇವಾಡಿಗ, ಹಿರಿಯರಾದ ಅಣ್ಣಪ್ಪ ಚಿತ್ರಾಪುರ, ನಾರಾಯಣ ದೊಡ್ಮನೆ, ವೆಂಕಟೇಶ ದೇವಾಡಿಗ, ನಾಗೇಶ್ ದೇವಾಡಿಗ, ಆನಂದ ದೇವಾಡಿಗ, ಕೃಷ್ಣ ಭೈರುಮನೆ, ಕೃಷ್ಣ ಭಂಡಾರಿ, ಪರಮಯ್ಯ ದೇವಾಡಿಗ, ವೆಂಕಟೇಶ ದೇವಾಡಿಗ, ಉದಯ್ ದೇವಾಡಿಗ ಹಾಗೂ ಎಲ್ಲ ತಂಡಗಳ ಮಾಲೀಕರು ಮತ್ತು ನಾಯಕರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಅನಿಲ ದೇವಾಡಿಗ ಸ್ವಾಗತಿಸಿದರೆ, ನಟರಾಜ ದೇವಾಡಿಗ ವಂದಸಿದರು. ಯುವರಾಜ್ ದೇವಾಡಿಗ ನಿರೂಪಿಸಿದರು.
ಡಿಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಜರ್ಸಿ, ಟ್ರೋಫಿ ಅನಾವರಣ
