Slide
Slide
Slide
previous arrow
next arrow

ಚುನಾವಣೆ ಪೂರ್ವಸಿದ್ಧತೆ, ಮತಗಟ್ಟೆಗಳಲ್ಲಿ ಮೂಲಭೂತ ಸೌಲಭ್ಯ ಅಳವಡಿಕೆ: ಡಿಸಿ ಕವಳಕಟ್ಟಿ

300x250 AD

ಕಾರವಾರ: ಜಿಲ್ಲೆಯಲ್ಲಿ ಈಗಾಗಲೇ ಚುನಾವಣೆ ಪೂರ್ವ ತಯಾರಿ ಮಾಡಿಕೊಂಡಿದ್ದೇವೆ. ಮತಗಟ್ಟೆಗಳಲ್ಲಿ ಅವಶ್ಯಕ ಮೂಲಭೂತ ಸೌಲಭ್ಯಗಳನ್ನು ಕಳಿಸಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಹೇಳಿದರು.

ನಗರದ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಮಾದರಿ ನೀತಿ ಸಂಹಿತೆ ಹಾಗೂ ಚುನಾವಣೆ ಖರ್ಚು ವೆಚ್ಚದ ತರಬೇತಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿದ್ದೇವೆ ಮತ್ತು ಅದು ನಿರಂತರವಾಗಿರುತ್ತದೆ ಎಂದರು.

ಚುನಾವಣಿ ಆಯೋಗವು ನೀಡಿರುವ ಮಾಹಿತಿಯ ಮೇರೆಗೆ ಎಲ್ಲ ಅಧಿಕಾರಿಗಳಿಗೆ ಈಗ ತರಬೇತಿ ನೀಡುತ್ತಿದ್ದು ಇದರಿಂದ ಅಧಿಕಾರಿಗಳು ಗೊಂದಲಕ್ಕೆ ಒಳಗಾಗದೆ ಪೂರಕ ಮಾಹಿತಿಯನ್ನು ಪಡೆದುಕೊಂಡು ಚುನಾವಣಿಗೆ ತಯಾರಿ ಮಾಡಿಕೊಳ್ಳಬೇಕು ಎಂದು ಹೇಳಿದರು.

ಬಳಿಕ ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ತರಬೇತಿ ಕುರಿತು ಮಾತನಾಡಿ,ಭಾರತದಲ್ಲಿ ಚುನಾವಣೆಯನ್ನು ಅತ್ಯಂತ ದಕ್ಷತೆ ಮತ್ತು ಪ್ರಾಮಾಣಿಕವಾಗಿ ಮಾಡಲಾಗುತ್ತದೆ. ಹೀಗಾಗಿ ಇತರ ರಾಷ್ಟ್ರಗಳು ನಮ್ಮ ಚುನಾವಣೆ ವ್ಯವಸ್ಥೆಯನ್ನು ಕೊಂಡಾಡುತ್ತಿವೆ. ಚುನಾವಣೆಯಲ್ಲಿ ಎಲ್ಲ ಅಧಿಕಾರಿಗಳು ಮಹತ್ತರವಾದ ಜವಾಬ್ದಾರಿಯನ್ನು ವಹಿಸಿ ಯಾವುದೇ ಲೋಪ ದೋಷಗಳು ಆಗದಂತೆ ಕಾರ್ಯನಿರ್ವಹಿಸಬೇಕು ಎಂದರು.

300x250 AD

ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಚುನಾವಣಿ ಮಾದರಿ ನೀತಿ ಸಂಹಿತೆ ಅನುಷ್ಠಾನ, ಅನ್ವಯ, ಸಮಸ್ಯೆಗಳ ನಿವಾರಣೆ, ಕಾನೂನಿನ ಸಲಹೆ, ಚುನಾವಣೆ ಖರ್ಚು ಮತ್ತು ವೆಚ್ಚಗಳ ಬಗ್ಗೆ ತರಬೇತಿಯಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಿದರು.
ಚುನಾವಣೆ ಮಾದರಿ ನೀತಿ ಸಂಹಿತೆಯ ಮಾರ್ಗಸೂಚಿಗಳು ರಾಜಕೀಯ ಪಕ್ಷ, ಅಭ್ಯರ್ಥಿಗಳಿಗೆ ಹಾಗೂ ಎಲ್ಲ ಅಧಿಕಾರಿಗಳಿಗೂ ಅನ್ವಯವಾಗುತ್ತವೆ. ಹಾಗೆಯೇ ಮಾದರಿ ನೀತಿ ಸಂಹಿತೆಯು ಸಾರ್ವಜನಿಕ ಪ್ರದೇಶಗಳಲ್ಲಿ, ಸಾರ್ವಜನಿಕ ಕಟ್ಟಡಗಳಲ್ಲಿ, ಖಾಸಗಿ ಪ್ರದೇಶಗಳಲ್ಲಿ, ಮಾಧ್ಯಮಗಳಲ್ಲಿ, ಸಭೆ, ಭಾಷಣ, ಜಾಥಾ, ಶೋಭಾಯಾತ್ರೆ, ವಾಹನಗಳಲ್ಲೂ ಅನ್ವಯವಾಗುತ್ತದೆ.

ಮಾದರಿ ನೀತಿ ಸಂಹಿತೆ ಜಾರಿಯಾದಾಗ ಅಧಿಕಾರಿಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಮಾದರಿ ನೀತಿ ಸಂಹಿತೆ ಉಲ್ಲಂಘನೆ ಬಗ್ಗೆ ವರದಿಯಾದಲ್ಲಿ ಕೂಡಲೇ ಹೇಗೆ ಆ ಬಗ್ಗೆ ಕ್ರಮ ವಹಿಸಬೇಕು ಎಂಬುವುದರ ಬಗ್ಗೆ ಮಾಹಿತಿ ನೀಡಿದರು. ಹಾಗೆಯೇ ಚುನಾವಣಿ ಘೋಷಣೆಯಾದ ದಿನದಿಂದ ಚುನಾವಣೆ ಮುಕ್ತಾಯದ ಕೊನೆ ದಿನದವರೆಗೆ ರಾಜಕೀಯ ಪಕ್ಷದ ಅಭ್ಯರ್ಥಿಗಳು ಅವರ ಖರ್ಚು ಮತ್ತು ವೆಚ್ಚಗಳ ಬಗ್ಗೆ ಹೇಗೆಲ್ಲ ಕ್ರಮ ವಹಿಸುವುದರ ಬಗ್ಗೆ ಮಾಹಿತಿ ನೀಡಿದರು.
ಮಾದರಿ ನೀತಿ ಸಂಹಿತೆಯ ಉಲ್ಲಂಘನೆ ಬಗ್ಗೆ ವಿವರಿಸಿದ ಅವರು, ಭಾಷಣ, “ಶೋಭಾ ಯಾತ್ರೆ, ವಾಹನಗಳ ಬಳಕೆ, ಬ್ಯಾನರ್ ಗಳ ಅಳವಡಿಕೆ, ಜಾಹೀರಾತುಗಳ ಪ್ರಕಟಣಿ, ಸಾರ್ವಜನಿಕ ಕಾರ್ಯಕ್ರಮ, ಟೆಂಡರ್ ಕಾಮಗಾರಿ, ಬಂಟಿಂಗ್ ಅಳವಡಿಕೆ ಮುಂತಾದವುಗಳ ಅಳವಡಿಕೆಗೆ ಸಂಬಂಧಪಟ್ಟ ಅಧಿಕಾರಿ ವರ್ಗದವರಿಂದ ಅನುಮತಿ ಕಡ್ಡಾಯವಾಗಿರುತ್ತದೆ. ಹಾಗೆಯೇ ಮತದಾನ ಸಂದರ್ಭದಲ್ಲಿ ಸಾರ್ವಜನಿಕಕರಿಗೆ ದುಡ್ಡು ಹಂಚುವುದು, ವಾಹನದ ವ್ಯವಸ್ಥೆ ಮಾಡಿಕೊಡುವುದು, ಸುಳ್ಳು ಮಾಹಿತಿ ನೀಡುವುದು, ಉಚಿತವಾಗಿ ವಸ್ತುಗಳನ್ನು ಪೂರೈಸುವುದು, ಬೇರೆಯವರ ಹೆಸರಿನಲ್ಲಿ ಮತದಾನ ಮಾಡುವುದು, ದೇವರು, ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ಮತ ಯಾಚನೆ ಮಾಡುವುದು, ಸಾರ್ವಜನಿಕರಿಗೆ ಒತ್ತಾಯ ಮಾಡಿ ದೇವರ ಹೆಸರಿನಲ್ಲಿ ಪ್ರಮಾಣ ತೆಗೆದುಕೊಳ್ಳುವುದು ಮುಂತಾದವುಗಳು ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತವೆ. ಇಂತಹವುಗಳು ಕಂಡು ಬಂದಲ್ಲಿ ಅಧಿಕಾರಿಗಳು ಹೇಗೆ ಎಚ್ಚರ ವಹಿಸಿಬೇಕು ಎಂಬುವುದನ್ನು ತಿಳಿಸಿಕೊಟ್ಟರು.

ತರಬೇತಿ ಕಾರ್ಯಾಗಾರದಲ್ಲಿ ಕುಮಟಾ ಉಪ ವಿಭಾಗಾಧಿಕಾರಿ ರಾಘವೇಂದ್ರ ಜಗಲಾಸರ, ಕಾರವಾರ ಉಪ ವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಅಜ್ಜಪ್ಪ ಸೊಗಲದ ಹಾಗೂ ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top