Slide
Slide
Slide
previous arrow
next arrow

ಬಿಸಲಕೊಪ್ಪ ಪ್ರೌಢಶಾಲೆಯಲ್ಲಿ ಯಶಸ್ವಿಯಾದ ‘ವಿಜ್ಞಾನ ಹಬ್ಬ’

300x250 AD

ಶಿರಸಿ: ತಾಲೂಕಿನ ಬಿಸಲಕೊಪ್ಪದ ಸೂರ್ಯನಾರಾಯಣ ಪ್ರೌಢಶಾಲೆಯಲ್ಲಿ ವಿಜ್ಞಾನ ಹಬ್ಬ ನಡೆಯಿತು.ಕಾರ್ಯಕ್ರಮದ ಉದ್ಘಾಟಕರಾಗಿ ಶುಭದಾ ಫಾರ್ಮನ ಮಾಲೀಕರಾದ ಗಣೇಶ ಹೆಗಡೆ ಆಗಮಿಸಿ ಮಕ್ಕಳು ತಯಾರಿಸಿದ ವಿವಿಧ ವಿಜ್ಞಾನ ಮಾದರಿಗಳ ಉದ್ಘಾಟನೆಯನ್ನು ಅತ್ಯಂತ ವಿಶಿಷ್ಟವಾಗಿ  ತೆಂಗಿನಕಾಯಿಯ ಮೇಲೆ ನೀರನ್ನು ಸುರಿಸಿ ಬೆಂಕಿ ಹತ್ತಿಸುವ ಮೂಲಕ ವೈಜ್ಞಾನಿಕವಾಗಿ ಉದ್ಘಾಟಿಸಲಾಯಿತು. 

ತದನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡುತ್ತಾ ವೈಜ್ಞಾನಿಕ ಮನೋಭಾವ ಮಕ್ಕಳಲ್ಲಿ ಮೂಡಿದರೆ ಜಗತ್ತೇ ಬದಲಾಗುತ್ತದೆ, ಶಾಲೆಯ ಪರಿಸರ, ಶಾಲೆಯ ಶೈಕ್ಷಣಿಕ ಗುಣಮಟ್ಟ ಇದಕ್ಕೆಲ್ಲ ನಿಜ ಕಾರಣ ಶಿಕ್ಷಕರು ಮತ್ತು ಆಡಳಿತ ಮಂಡಳಿ ಅಲ್ಲದೆ ಮಕ್ಕಳು ಇವರೆಲ್ಲರೂ ಅಭಿನಂದನಾರ್ಹರು ಎನ್ನುತ್ತಾ,  ಶಾಲೆಯ ಈ ರೀತಿಯ ಕಾರ್ಯಕ್ರಮ ಆಯೋಜಿಸಿದ್ದಕ್ಕೆ ಅಭಿನಂದನೆ ಎಂದರು.

300x250 AD

ಮುಖ್ಯ ಅತಿಥಿಗಳಾಗಿ ಸಂಸ್ಥೆಯ ಉಪಾಧ್ಯಕ್ಷ ಪ್ರಭಾಕರ್ ಹೆಗಡೆ ಮಾತನಾಡುತ್ತಾ ಈತರಹದ ಕಾರ್ಯಕ್ರಮಗಳು ನಮ್ಮ ಶಾಲೆಯಲ್ಲಿ ಮತ್ತೆ ಮತ್ತೆ ಜರುಗಲಿ ವಿಜ್ಞಾನ ವಿಕಾಸಕ್ಕೆ ಕಾರಣವಾಗಲಿ ಎಂದರು. ಸಂಸ್ಥೆಯ ಕಾರ್ಯದರ್ಶಿ ಶ್ರೀಧರ್ ನಾಯಕ್ ಮಾತನಾಡುತ್ತಾ ವಿಜ್ಞಾನದಿಂದ ನಾವು ಭೂಮಿಯಿಂದ ಮಂಗಳನವರೆಗೆ ತಲುಪಿದ್ದೇವೆ. ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಬೆಳೆಯಬೇಕು ಅದಕ್ಕೆ ಈತರಹದ ವಿಜ್ಞಾನ  ಹಬ್ಬ  ಕಾರಣವಾಗುವುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ಎಸ್ಎಂ ಹೆಗಡೆ ಹೂಡೇಲಕೊಪ್ಪ ವಹಿಸಿ ಈ ತರಹದ ಕಾರ್ಯಕ್ರಮ ಆಯೋಜನೆ ತುಂಬಾ ಸಂತೋಷ ತಂದಿದೆ. ಮಕ್ಕಳು ಮಾಡಿರುವ ಮಾದರಿಗಳು ನಿಜಕ್ಕೂ ಉತ್ತಮವಾಗಿದೆ ಎಂದರು. ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಗಣೇಶ ಭಟ್ ವಾನಳ್ಳಿ ಎಲ್ಲರನ್ನೂ ಸ್ವಾಗತಿಸಿ ಪ್ರಾಸ್ತಾವಿಕವಾಗಿ  ಮಾತನಾಡುತ್ತಾ ಇವತ್ತು ನಿಜಕ್ಕೂ ಹಬ್ಬ ಮನೆ ಮಾಡಿದೆ ಅದರಲ್ಲೂ ಹಬ್ಬಕ್ಕೆ ಅತಿಥಿಗಳ ಆಗಮನ ಹಬ್ಬದ ಮೆರಗನ್ನು ಹೆಚ್ಚಿಸಿದೆ ಜ್ಞಾನಕ್ಕೆ ವಿಜ್ಞಾನದ ಮೆರಗು ಸೇರಿದರೆ ಅದರ ಅಂದವೇ ಬೇರೆ ಎಂದು ಹೇಳಿದರು. ವೇದಿಕೆಯಲ್ಲಿ ಸಂಸ್ಥೆಯ ಸದಸ್ಯರಾದ ಪ್ರಸನ್ನ ಭಟ್ ಹಾಜರಿದ್ದರು. ಮಕ್ಕಳನ್ನು ಪ್ರೇರೇಪಿಸಿದ ವಿಜ್ಞಾನ ಶಿಕ್ಷಕರನ್ನು ಈ ಸಂದರ್ಭದಲ್ಲಿ ಅಭಿನಂದಿಸಲಾಯಿತು. ವಿಜ್ಞಾನ ಶಿಕ್ಷಕರಾದ ಗಣೇಶ ಸಾಯಿಮನೆ ಕಾರ್ಯಕ್ರಮ ನಿರ್ವಹಿಸಿದರೆ, ಶಿಕ್ಷಕ ಲೋಕನಾಥ್ ಹರಿಕತ್ರ ವಂದಿಸಿದರು. ಊರ ನಾಗರಿಕರು ಪಾಲಕರು ಕನ್ನಡ ಶಾಲೆಯ ಮಕ್ಕಳು ಆಗಮಿಸಿ ವಿಜ್ಞಾನ ಮಾದರಿಗಳನ್ನು ನೋಡಿ ಸಂತಸಪಟ್ಟರು

Share This
300x250 AD
300x250 AD
300x250 AD
Back to top