ದಾಂಡೇಲಿ: ನಗರದ ಬಿಜೆಪಿ ಪಕ್ಷದ ಕಚೇರಿಯಲ್ಲಿ ಬುಧವಾರ ನಗರದ ಶ್ರೀಛತ್ರಪತಿ ಶಿವಾಜಿ ಮೂರ್ತಿ ಪ್ರತಿಷ್ಟಾಪನಾ ಸಮಿತಿಯ ಪದಾಧಿಕಾರಿಗಳಿಗೆ ಬಿಜೆಪಿ ಪಕ್ಷದ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು.
ಪ್ರತಿವರ್ಷದಂತೆ ಈ ವರ್ಷವೂ ಶ್ರೀಛತ್ರಪತಿ ಶಿವಾಜಿ ಜಯಂತಿ ಕಾರ್ಯಕ್ರಮವನ್ನು ಶಿಸ್ತುಬದ್ಧ ಭವ್ಯ ಮೆರವಣಿಗೆಯ ಮೂಲಕ ವಿಜೃಂಭಣೆಯಿಂದ ಆಚರಿಸಿರುವುದನ್ನು ಗುರುತಿಸಿ, ಬಿಜೆಪಿ ಪಕ್ಷ ವತಿಯಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಚಂದ್ರಕಾಂತ ಕ್ಷೀರಸಾಗರ, ಪ್ರಧಾನ ಕಾರ್ಯದರ್ಶಿ ಗುರು ಮಠಪತಿ, ಪಕ್ಷದ ಪ್ರಮುಖರುಗಳಾದ ಶಾರದಾ ಪರಶುರಾಮ, ದೇವಕ್ಕ ಕೆರೆಮನೆ, ಸಂತೋಷ್ ಸೋಮನಾಚೆ, ರವಿ ಗಾಂವಕರ್, ರಮೇಶ್ ಹೊಸಮನಿ, ಎಂ.ಎಸ್.ನಾಯ್ಕ, ಈರಯ್ಯಾ ಸಾಲಿಮಠ, ಗೀತಾ ಶಿಕಾರಿಪುರ, ಮಂಜು ಶೆಟ್ಟಿ, ರೂಪೇಶ್ ಪವಾರ್, ನಗರ ಸಭಾ ಸದಸ್ಯರುಗಳಾದ ನರೇಂದ್ರ‍್ರ ಚೌವ್ಹಾಣ್, ಬುದ್ಧಿವಂತಗೌಡ ಪಾಟೀಲ್ ಮೊದಲಾದವರು ಇದ್ದರು.
ಶಿವಾಜಿ ಮೂರ್ತಿ ಪ್ರತಿಷ್ಠಾಪನಾ ಸಮಿತಿ ಪದಾಧಿಕಾರಿಗಳಿಗೆ ಬಿಜೆಪಿ ಸನ್ಮಾನ
