Slide
Slide
Slide
previous arrow
next arrow

ಶೀಘ್ರಲಿಪಿ ತರಬೇತಿಗೆ ಏಕೈಕ ಸಂಸ್ಥೆ ನೋಂದಣಿ

300x250 AD

ಕಾರವಾರ: ಅಂಕೋಲಾ ತಾಲೂಕಿನ ಬಂಡಿಬಜಾರದ ಶ್ರೀರಾಮ ವಾಣಿಜ್ಯ ಹಾಗೂ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯಿಂದ ಅನುಮತಿ ಪಡೆದು ಮಾನ್ಯತೆಯನ್ನು ನವೀಕರಣ ಮಾಡಿಕೊಂಡಿದ್ದು, ಈ ಸಂಸ್ಥೆಯನ್ನು ಹೊರತುಪಡಿಸಿ ಬೇರೆ ಯಾವುದೇ ಕಂಪ್ಯೂಟರ್, ಟೈಪ್‌ರೈಟಿಂಗ್ ಹಾಗೂ ಶೀಘ್ರಲಿಪಿ ತರಬೇತಿ ಸಂಸ್ಥೆಗಳು ಇಲಾಖಾ ಅನುಮತಿಯನ್ನು ಪಡೆದಿಲ್ಲ.

ಶ್ರೀರಾಮ ವಾಣಿಜ್ಯ ಹಾಗೂ ಕಂಪ್ಯೂಟರ್ ಶಿಕ್ಷಣ ಸಂಸ್ಥೆಯನ್ನು ಹೊರತುಪಡಿಸಿ ಬೇರೆ ಯಾವುದೇ ಅನಧಿಕೃತ ಸಂಸ್ಥೆಗಳಲ್ಲಿ ಅಭ್ಯರ್ಥಿಗಳು, ವಿದ್ಯಾರ್ಥಿಗಳು ತರಬೇತಿ ಪಡೆದಲ್ಲಿ ಮುಂದೆ ಉದ್ಭವವಾಗುವ ಸಮಸ್ಯೆಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಜವಾಬ್ದಾರವಾಗಿರುವುದಿಲ್ಲವೆಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವಿಭಾಗೀಯ ಕಾರ್ಯದರ್ಶಿ ಬೆಳಗಾವಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top