ಕುಮಟಾ: ಶಿರಸಿ ಎಪಿಎಂಸಿಯಲ್ಲಿ ನಡೆದ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ತಾಲೂಕಿನ ನಿವೃತ್ತ ಶಿಕ್ಷಕ ಸುರೇಶ ಗಾಂವ್ಕರ್ ಪ್ರಥಮ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ಪಟ್ಟಣದ ಹೆರವಟ್ಟಾದ ನಿವಾಸಿಯಾದ ನಿವೃತ್ತ ಶಿಕ್ಷಕ ಸುರೇಶ ಗಾಂವ್ಕರ್ ಅವರು ಶಿರಸಿ ಎಪಿಎಂಸಿಯಲ್ಲಿ ನಡೆದ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ 40 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ಕ್ರೀಡಾ ಆಯೋಜನಕರಿಂದ ಟ್ರೋಫಿ ಮತ್ತು ಪ್ರಶಸ್ತಿ ಪತ್ರವನ್ನು ಸ್ವೀಕರಿಸಿದ್ದಾರೆ. ಈಗಾಗಲೇ ಇವರು ಸ್ಪೋಟ್ಸ್ ಕ್ಲಬ್ ಕುಮಟಾದಲ್ಲಿ ತರಬೇತುದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರ ಸಾಧನೆ ಇತರರಿಗೆ ಮಾದರಿಯಾಗಿದ್ದು, ಕ್ರೀಡೆಯಲ್ಲಿ ಇನ್ನಷ್ಟು ಸಾಧನೆ ಮಾಡಲಿ ಎಂದು ಕ್ರೀಡಾಪ್ರೇಮಿಗಳು ಹಾರೈಸಿದ್ದಾರೆ. ಅಲ್ಲದೇ ಇವರ ಸಾಧನೆ ಹರ್ಷ ವ್ಯಕ್ತಪಡಿಸಿದ್ದಾರೆ.
ಟೇಬಲ್ ಟೆನಿಸ್:ನಿವೃತ್ತ ಶಿಕ್ಷಕ ಸುರೇಶ ಗಾಂವ್ಕರ್ ಪ್ರಥಮ
