ಯಲ್ಲಾಪುರ: ತಾಲೂಕಿನ ಸೋಮನಬೀಡು, ದೊಡ್ಡಬೇಣ, ಜಕ್ಕೊಳ್ಳಿ, ಆನೆಗುಂಡಿ, ಅಚ್ಚಿನಬೀಡುಗಳ ವ್ಯಾಪ್ತಿಯ ಸೋಮೇಶ್ವರ ದೇವಸ್ಥಾನ ಹಾಗೂ ಪರಿವಾರ ದೇವರುಗಳ ಜೀರ್ಣೋದ್ಧಾರ ಸಮಿತಿಯು ಶಿವರಾತ್ರಿಯ ಪ್ರಯುಕ್ತ ವಿಶೇಷ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ ಮುಂಜಾನೆ ದೇವಸ್ಥಾನಕ್ಕೆ ಆಗಮಿಸಿ ಪೂಜೆ ಸಲ್ಲಿಸಿ, ಪ್ರಸಾದ ಸ್ವೀಕರಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮದ ಪ್ರಯುಕ್ತ ರಾತ್ರಿ ಶಿರಸಿಯ ಕೋಳೀಗಾರಿನ ಬಬ್ರುಲಿಂಗೇಶ್ವರ ಪ್ರಸನ್ನದುರ್ಗಿ ಯಕ್ಷಗಾನ ಮಂಡಳಿಯ ಕಲಾವಿದರು `ದಕ್ಷ ಯಜ್ಞ’ ಎಂಬ ಆಖ್ಯಾನವನ್ನು ಪ್ರಸ್ತುತಪಡಿಸಿದರು. ಮುಮ್ಮೇಳದ ಕಲಾವಿದರಾಗಿ: ತಿಮ್ಮಣ್ಣ ಹೆಗಡೆ (ಭಾಗವತ), ವಿಠ್ಠಲ ಪೂಜಾರಿ (ಮದ್ದಲೆ), ಗಜಾನನ ಹೆಗಡೆ ಕಂಚೀಮನೆ (ಚಂಡೆ) ಕಾರ್ಯನಿರ್ವಹಿಸಿದರು. ಹಿಮ್ಮೇಳದಲ್ಲಿ ನಾಗರಾಜ ಹೆಗಡೆ ಜಾಲೀಮನೆ (ದಕ್ಷ), ಸದಾನಂದ ಪಟಗಾರ (ದಾಕ್ಷಾಯಣಿ), ಲಕ್ಷ್ಮೀನಾರಾಯಣ ಹೆಗಡೆ ಶಿರಗುಣಿ (ಈಶ್ವರ),ಲಕ್ಷ್ಮಣ ಪಟಗಾರ (ವೀರಭದ್ರ), ಆನಂದ ಮರಾಠಿ (ದೇವೇಂದ್ರ), ಉಚಿತಾ ಮರಾಠಿ (ಅಗ್ನಿ), ಗಣೇಶ ಹೆಮ್ಮಾಡಿ, ಅಕ್ಷಯ ಮರಾಠಿ, ಮಾದೇವ ಮರಾಠಿ (ಹಾಸ್ಯ) ಹಾಗೂ ಭರತ ನಾಯ್ಕ ಉಮ್ಮಚಗಿ (ಬಾಲಗೋಪಾಲ) ವಿವಿಧ ಪಾತ್ರಗಳನ್ನು ನಿರ್ವಹಿಸಿದರು.