Slide
Slide
Slide
previous arrow
next arrow

ಶಿವರಾತ್ರಿ ಪ್ರಯುಕ್ತ ದೇವಿಮನೆಗೆ 4ನೇ ವರ್ಷದ ಪಾದಯಾತ್ರೆ ಯಶಸ್ವಿ

300x250 AD

ಭಟ್ಕಳ: ತಾಲೂಕಿನ ಮಾರುಕೇರಿಯ ಹೂತ್ಕಳದ ಶ್ರೀಧನ್ವಂತರಿ ಮಹಾವಿಷ್ಣುಮೂರ್ತಿ ಗಣಪತಿ ದೇವಸ್ಥಾನದಿಂದ ಕಿತ್ರೆಯ ಶ್ರೀಕ್ಷೇತ್ರ ದೇವಿಮನೆಯ ಶಿವಶಾಂತಿಕಾ (ದುರ್ಗಾ) ಪರಮೇಶ್ವರಿ ದೇವಸ್ಥಾನಕ್ಕೆ ಶಿವರಾತ್ರಿಯ ಅಂಗವಾಗಿ ಲೋಕಕಲ್ಯಾಣಾರ್ಥವಾಗಿ ನಾಲ್ಕನೇ ವರ್ಷದ ಪಾದಯಾತ್ರೆ ನಡೆಸಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.
ಪಾದಯಾತ್ರೆ ಸಂದರ್ಭದಲ್ಲಿ ಮತ್ತು ದೇವಸ್ಥಾನದಲ್ಲಿ ಪಂಚಾಕ್ಷರಿ ಜಪ ಮಾಡಲಾಯಿತು. ಪಾದಯಾತ್ರೆ ಸಮಿತಿಯಿಂದ ದೇವಿಮನೆಯ ಹಿರಿಯ ಅರ್ಚಕ ವೇ.ಮೂ.ಲಂಬೋಧರ ಭಟ್ಟ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಭಕ್ತರನ್ನುದ್ದೇಶಿಸಿ ಅರ್ಚಕ ವೇ.ಮೂ.ಬಾಲಚಂದ್ರ ಭಟ್ಟ ಶಿವರಾತ್ರಿ ಆಚರಣೆಯ ಮಹತ್ವದ ಕುರಿತು ಮಾತನಾಡಿ, ಪಾದಯಾತ್ರೆ ನಿರಂತರವಾಗಿ ನಡೆಯಲಿ ಎಂದರು. ಪಾದಯಾತ್ರೆ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೃಷ್ಣಮೂರ್ತಿ ಹೆಗಡೆ ಸ್ವಾಗತಿಸಿ, ನಿರೂಪಿಸಿದರು.
ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷ ಪಿ.ಟಿ.ಚೌಹಾಣ, ಅಧ್ಯಕ್ಷ ರಾಘವೇಂದ್ರ ಹೆಬ್ಬಾರ, ಉಪಾಧ್ಯಕ್ಷರಾದ ಜಯರಾಮ ಶೆಟ್ಟಿ, ಸೋಮಶೇಖರ ನಾಯ್ಕ, ಖಚಾಂಚಿ ನಾಗೇಶ ದೇವಡಿಗ, ಗ್ರಾ.ಪಂ. ಉಪಾಧ್ಯಕ್ಷೆ ನಾಗವೇಣಿ ಗೊಂಡ, ಗ್ರಾ.ಪಂ. ಸದಸ್ಯರಾದ ನಾರಾಯಣ ಗೊಂಡ, ಸುಧಾ ಹೆಗಡೆ, ಮೋಹಿನಿ ಗೊಂಡ ಸೇರಿದಂತೆ ಹಲವರಿದ್ದರು. ಈ ಸಲದ ಪಾದಯಾತ್ರೆಯಲ್ಲಿ 75ಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಪಾದಯಾತ್ರೆಯಲ್ಲಿ ಭಟ್ಕಳದ ನಾಗರಾಜ ಭಟ್ಟ ಅವರ ತಂಡದಿಂದ ಚಂಡೆ ವಾದನಸೇವೆ ಗಮನ ಸೆಳೆಯಿತು.   

300x250 AD
Share This
300x250 AD
300x250 AD
300x250 AD
Back to top