ಯಲ್ಲಾಪುರ: ಕ್ರೀಡೆ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಅಧಿಕಗೊಳ್ಳುತ್ತಿರುವುದು ಇಂದಿನ ಯುವ ಜನರ ಮಾನಸಿಕ ಶ್ರೀಮಂತಿಕೆಗೆ ಸಾಕ್ಷಿಯಾಗಿದೆ ಎಂದು ಮಾಜಿ ಶಾಸಕ ವಿ.ಎಸ್.ಪಾಟೀಲ್ ಹೇಳಿದರು.
ಹಿತ್ಲಳ್ಳಿಯ ಪ್ರೌಢಶಾಲಾ ಮೈದಾನದಲ್ಲಿ ಹಿತ್ಲಳ್ಳಿಯ ಯಂಗ್ ಸ್ಟಾರ್ ಗೆಳೆಯರ ಬಳಗವು ಆಯೋಜಿಸಿದ 2 ದಿನಗಳ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ, ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.
ಕ್ರೀಡೆಗಳಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ನೆರವು ದೊರೆಯುತ್ತದೆ ಎಂದವರು ಹೇಳಿದರು. ಗ್ರಾ.ಪಂ ಅಧ್ಯಕ್ಷ ಪ್ರಸನ್ನ ಭಟ್ಟ, ಪ್ರಮುಖರಾದ ಕಾಂಗ್ರೆಸ್ ಸೇವಾದಳದ ತಾಲೂಕಾಧ್ಯಕ್ಷ ಪ್ರಶಾಂತ ಸಭಾಹಿತ, ಜಿ.ಪಂ ಮಾಜಿ ಸದಸ್ಯ ರಾಘವೇಂದ್ರ ಭಟ್ಟ ಹಾಸಣಗಿ, ಕೆ.ಪಿ.ಸಿ.ಸಿ ಸದಸ್ಯ ದಿಲೀಪ ರೋಖಡೆ, ನಾಗೇಂದ್ರ ಹರಿಗದ್ದೆ ಮಾತನಾಡಿದರು.
ಕಾರ್ಯಕ್ರಮದ ಸಂಘಟಕ ಶೇಖರ ಸಿದ್ದಿ ಸ್ವಾಗತಿಸಿ, ನಿರ್ವಹಿಸಿ, ವಂದಿಸಿದರು. 14 ತಂಡಗಳು ಭಾಗವಹಿಸಿದ್ದ ಪಂದ್ಯಾವಳಿಯಲ್ಲಿ ಹಿತ್ಲಳ್ಳಿಯ ಯಂಗ್ ಸ್ಟಾರ್ ತಂಡ ಹಾಗೂ ಮಂಚೀಕೇರಿಯ ಕೆ.ಇ.ಬಿ ತಂಡ ಅನುಕ್ರಮ ಸ್ಥಾನ ಗಳಿಸಿದವು. ಅಂತೆಯೇ ಹಿತ್ಲಳ್ಳಿ ತಂಡದ ಸಂತೋಷ ಸರಣಿ ಶ್ರೇಷ್ಟ ಪ್ರಶಸ್ತಿಯನ್ನು, ಹಿತ್ಲಳ್ಳಿಯ ವಿಶ್ವ ಉತ್ತಮ ಬೌಲರ್ ಪ್ರಶಸ್ತಿಯನ್ನು, ಮಂಚಿಕೇರಿಯ ಬಸವರಾಜ ಉತ್ತಮ ಬ್ಯಾಟ್ಸ್ಮನ್ ಪ್ರಶಸ್ತಿಯನ್ನು ಪಡೆದುಕೊಂಡರು.