Slide
Slide
Slide
previous arrow
next arrow

ಉತ್ಸವಗಳು ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸಬೇಕು: ಶಂಕರ ಭಟ್

300x250 AD

ಸಿದ್ದಾಪುರ: ಯಾವುದೇ ಉತ್ಸವಗಳು ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಪ್ರತಿಬಿಂಬಿಸುವoತಿರಬೇಕು. ಆಗಲೇ ಆ ಉತ್ಸವಕ್ಕೆ ಸಂಘಟನೆ ಮಾಡಿರುವ ಕಾರ್ಯಕ್ಕೆ ಬೆಲೆ ಬರುತ್ತದೆ ಎಂದು ನಾಟ್ಯಾಚಾರ ಶಂಕರ ಭಟ್ ಹೇಳಿದರು.

ಅವರು ಕಾನಸೂರಿನ ಹಿರಿಯ ಪ್ರಾಥಮಿಕ ಶಾಲೆಯ ಸಿರಿಗನ್ನಡ ವೇದಿಕೆಯಲ್ಲಿ ನಡೆದ ಸೇವಾರತ್ನ ಮಾಹಿತಿ ಕೇಂದ್ರವರು ನೀಡುವ ಪ್ರತಿಪ್ರಭ ಹಾಗೂ ಕಲಾಸಿಧು ಪ್ರಶಸ್ತಿಯನ್ನು ನೀಡಿ ಮಾತನಾಡುತ್ತಿದ್ದರು. ಇಂದು ಸಮಾಜದಲ್ಲಿ ನಮ್ಮತನದ ಕಾರ್ಯಕ್ರಮಗಳು ಬಹಳಷ್ಟು ವಿಳಂಬಗೊಳ್ಳುತ್ತಿದೆ. ಎಲ್ಲವೂ ಪಾಶ್ಚಿಮಾತ್ಯದ ಕಡೆ ವಾಲುತ್ತಿರುವುದತಿಂದ ಮುಂದಿನ ಪೀಳಿಗೆಯ ಜನತೆಗೆ ನಮ್ಮ ಸಂಸ್ಕೃತಿ, ಸಂಸ್ಕಾರಗಳನ್ನು ಪುಸ್ತಕದಲ್ಲಿ ತೋರಿಸಬೇಕು ಎಂಬ ಆತಂಕ ಒಳಮೂಡುತ್ತಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಉದ್ಯಮಿ ಆರ್.ಜಿ. ಶೇಟ್ ಮಾತನಾಡಿ 24 ವರ್ಷಗಳಿಂದ ಒಂದು ಸಂಘಟನೆಯನ್ನು ಉಳಿಸಿ ಬೆಳೆಸುವುದು ಸಾಮಾನ್ಯ ಕೆಲಸವಲ್ಲ. ಅದೇಷ್ಟೋ ಸಂಘಟನೆಗಳು ದುಡ್ಡುಮಾಡುವುದಕ್ಕೋಸ್ಕರವೇ ಹುಟ್ಟಿಕೊಂಡು ಅಷ್ಟೇ ಬೇಗ ಮುಚ್ಚು ಹೋಗಿರುವ ಉದಾಹರಣೆಗಳು ಇವೆ ಎಂದು ಹೇಳಿದರು.

300x250 AD

ಇದೇ ಸಂದರ್ಭದಲ್ಲಿ ಚಿತ್ರದುರ್ಗದ ಬಹುಮುಖ ಪ್ರತಿಭೆ  ಬಾಲಕಿ ಯಶಸ್ವಿಸಿ ಇವಳಿಗೆ ಪ್ರತಿಪ್ರಭಾ ಹಾಗೂ ಯಕ್ಷಗಾನ ಕಲಾವಿದ ದಿ. ನಾಗೇಶ ಶೇಟ್ ಅವರಿಗೆ ಮರಣೋತ್ತರ ಕಲಾಸಿಂಧು ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ ಅಧ್ಯಕ್ಷ ವೀರಭದ್ರ ಜಂಗಣ್ಣವರ್ ವಹಿಸಿದ್ದರು. ವೇದಿಕೆಯಲ್ಲಿ ನಿವೃತ್ತ ತಹಶೀಲ್ದಾರ ಡಿ.ಜಿ.ಹೆಗಡೆ, ಗ್ರಾ.ಪಂ. ಉಪಾಧ್ಯಕ್ಷೆ ಶಶಿಪ್ರಭಾ ಹೆಗಡೆ, ಸದಸ್ಯರಾದ ಶಶಿಕಾಂತ ನಾಮಧಾರಿ, ಸವಿತಾ ಕಾನಡೆ, ಪರಮೇಶ್ವರ ನಾಯ್ಕ ಹಳ್ಳಿಬೈಲ್, ಎಂಡಿ.ಭಟ್ ಕಲ್ಕಟ್ಟೆ, ಜೈ ಹನುಮಾನ ಸಂಘದ ಉಮೇಶ ಆಚಾರಿ ಎಸ್.ಡಿ.ಎಂ.ಸಿ. ಅಧ್ಯಕ್ಷ ರಾಘವೇಂದ್ರ ನಾಯ್ಕ ಉಪಸ್ಥಿತರಿದ್ದರು. ಸೇವಾರತ್ನಾ ಸಂಚಾಲಕ ರತ್ನಾಕರ ಭಟ್ ಸ್ವಾಗತಿಸಿ ಪ್ರಸ್ತಾಪಿಸಿದರು. ಗುರುರಾಜ ನಾಯ್ಕ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರ ಚಿತ್ರದುರ್ಗದ ಲಾಸಿಕಾ ಪೌಂಡೇಶನ ಶ್ವೇತಾ ಭಟ್ ತಂಡದವರಿoದ ಭರತನಾಟ್ಯ ಕಾರ್ಯಕ್ರಮ ನಡೆಯಿತು.

Share This
300x250 AD
300x250 AD
300x250 AD
Back to top