ಹೊನ್ನಾವರ: ಹೊನ್ನಾವರ ತಾಲೂಕಿನ, ಗೇರಸೊಪ್ಪ ವಲಯ ಅರಣ್ಯ ಕಚೇರಿಯ ವ್ಯಾಪ್ತಿಯಲ್ಲಿ ದಿನನಿತ್ಯ ಅರಣ್ಯವಾಸಿಗಳಿಗೆ ದೌರ್ಜನ್ಯ, ಕಿರುಕುಳ, ಮತ್ತು ಮಾನಸಿಕ ಹಿಂಸೆ ಜರಗುತ್ತಿರುವ ಹಿನ್ನೆಲೆಯಲ್ಲಿ ಫೇಬ್ರವರಿ 23, ಗುರುವಾರದಂದು ವಲಯ ಅರಣ್ಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ತೀರ್ಮಾನಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾನೂನಿಗೆ ವ್ಯತಿರಿಕ್ತವಾಗಿ, ಹಾಗೂ ಉಸ್ತುವಾರಿ ಸಚಿವರ ಸ್ಪಷ್ಟ ನಿರ್ದೇಶನ ಇದ್ದಾಗಲೂ ಗೆರಸೊಪ್ಪ ವಲಯ ಅರಣ್ಯ ಕಚೇರಿಯ ಸಿಬ್ಬಂದಿಗಳು ವಿನಾಕಾರಣ ಅರಣ್ಯವಾಸಿಗಳಿಗೆ ಸಮಸ್ಯೆ ಉಂಟುಮಾಡುತ್ತಿರುವ ಹಿನ್ನೆಲೆಯಲ್ಲಿ ಪ್ರತಿಭಟನೆ ಜರುಗಿಸುತ್ತಿರುವುದು ಅನಿವಾರ್ಯವೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದರು.
ಅರಣ್ಯವಾಸಿಗಳು ಫೇಬ್ರವರಿ 23 ರ ಮುಂಜಾನೆ 10 ಗಂಟೆಗೆ ಗೆರಸೊಪ್ಪ ಸರ್ಕಲ್‌ಗೆ ಆಗಮಿಸಬೇಕಾಗಿ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ಕೋರಿದ್ದಾರೆ.