ಶಿರಸಿ: ಕರ್ನಾಟಕದ ಮುಖ್ಯಮಂತ್ರಿ ಕದಂಬೋತ್ಸವ ಕಾರ್ಯಕ್ರಮಕ್ಕೆ ಆಗಮಿಸುವ ದಿನಾಂಕ ಬದಲಾವಣೆ ಆಗಿರುವ ಹಿನ್ನೆಲೆಯಲ್ಲಿ ಫೇಬ್ರವರಿ 25 ರಂದು ಸಂಘಟಿಸಲಾದ ಶಿರಸಿಯಿಂದ ಬನವಾಸಿವರೆಗಿನ ಅರಣ್ಯವಾಸಿಗಳ ಮಹಾಸಂಗ್ರಾಮ ಶಿರೋನಾಮೆಯ ಕಾರ್ಯಕ್ರಮವನ್ನು, ಬನವಾಸಿಗೆ ಮುಖ್ಯಮಂತ್ರಿಗಳು ಆಗಮಿಸುವ ಫೇಬ್ರವರಿ 28ಕ್ಕೆ ಮುಂದೂಡಲ್ಪಟ್ಟಿರುವುದರಿoದ, ಅರಣ್ಯವಾಸಿಗಳ ಕಾರ್ಯಕ್ರಮವನ್ನು ಅಂದು ಫೇಬ್ರವರಿ 28 ಕ್ಕೆ ಸಂಘಟಿಸಲು ನಿರ್ಧರಿಸಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಸರಕಾರ ಮತ್ತು ಜನಪ್ರತಿನಿಧಿಗಳ ಮೇಲೆ ಅರಣ್ಯವಾಸಿಗಳ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ತೀವ್ರ ಒತ್ತಡ ತಂದಾಗಲೂ, ಅರಣ್ಯವಾಸಿಗಳ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರಕಾರ ನಿರಾಶಕ್ತಿ ಹೊಂದಿರುವುದರಿoದ, ಅರಣ್ಯವಾಸಿಗಳ ಮಹಾಸಂಗ್ರಾಮ ಕಾರ್ಯಕ್ರಮ ಸಂಘಟಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಫೇಬ್ರವರಿ 28, ಮಂಗಳವಾರದoದು ಶಿರಸಿಯ ಬಿಡ್ಕಿಬೈಲಿನ ಗಾಂಧಿ ಪ್ರತಿಮೆ ಎದುರು ಪ್ರಾರಂಭವಾಗಿ, ಮಾರಿಗುಡಿಯಿಂದ ಮಧ್ಯಾಹ್ನ 2 ಗಂಟೆಗೆ ಹೊರಟು, ಬನವಾಸಿಯ ಮಧುಕೇಶ್ವರ ದೇವಸ್ಥಾನಕ್ಕೆ ಸಂಜೆ 5 ಗಂಟೆಗೆ ತಲುಪಿ, ಅರಣ್ಯವಾಸಿಗಳ ಮಹಾಸಂಗ್ರಾಮದ ರ‍್ಯಾಲಿಯು ತದನಂತರ ಮುಖ್ಯಮಂತ್ರಿಗಳನ್ನ ಭೇಟ್ಟಿಮಾಡಿ, ಅರಣ್ಯವಾಸಿಗಳ ಪ್ರಮುಖ ಹತ್ತು ಬೇಡಿಕೆಗಳನ್ನು ಚರ್ಚಿಸಲಿದ್ದಾರೆ ಎಂದು ಅವರು ತಿಳಿಸಿದರು.